ನಮ್ಮಲ್ಲಿರುವ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ನಾವು ಭದ್ರವಾಗಿ ಇಡುತ್ತೇವೆ. ಅದು ಆನ್ ಲೈನ್ ಪತ್ರಗಳಾಗಲಿ ಅಥವಾ ಇನ್ಯಾವುದೇ ವಸ್ತುಗಳಾಗಲಿ.
ಬೆಲೆ ಇರುವ ವಸ್ತುಗಳಿಗೆ ಸುರಕ್ಷತೆ ಎನ್ನುವುದು ಬಹಳ ಮುಖ್ಯ. ಆದರೆ ಆ ಮುಖ್ಯವಾದ ವಸ್ತುವನ್ನು ಆನ್ ಲೈನ್ ನಲ್ಲಿ ನೀವು ಎಷ್ಟೇ ಸುರಕ್ಷಿತವಾಗಿ ಇಟ್ಟರೂ, ಹ್ಯಾಕಿಂಗ್ ನ ಭಯ ಇದ್ದೇ ಇರುತ್ತದೆ.
ಈ ಭಯವನ್ನು ದೂರಗೊಳಿಸಲು ಇರುವ ಒಂದು ಉಪಾಯಕಾರಿ ವಿಧಾನವೇ Two Factor Authentication (2FA). ಹಾಗಾದರೆ ಏನಿದು 2FA, ತಿಳಿಯೋಣ ಬನ್ನಿ.
2FA ಎಂದರೇನು (What is 2FA in Kannada)
ಸುಲಭ ರೀತಿಯಲ್ಲಿ ಹೇಳುವುದಾದರೆ 2FA ಎನ್ನುವುದು ಒಂದು ಹೆಚ್ಚುವರಿ ಸೆಕ್ಯೂರಿಟಿ ಪದರವಾಗಿದೆ.
ನಿಮ್ಮ ಅಕೌಂಟ್ ನ ಪಾಸ್ ವರ್ಡ್ ಮೇಲೆ ಇನ್ನೊಂದು ಹೆಚ್ಚಿನ ಪದರವನ್ನು (Overlay) ಇದು ರಚಿಸುತ್ತದೆ. ಇದರಿಂದ ನಿಮ್ಮ ಆನ್ ಲೈನ್ ಅಕೌಂಟ್ ಗಳಿಗೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ.
ಇಲ್ಲಿವೆ ನೋಡಿ ಕನ್ನಡದ ಟಾಪ್ ಯೂಟ್ಯೂಬ್ ಚಾನಲ್ ಗಳು: ಕ್ಲಿಕ್ ಮಾಡಿ
ಒಮ್ಮೆ ಈ 2FA ಅನ್ನು ಆನ್ ಮಾಡಿದ ಮೇಲೆ ಹ್ಯಾಕರ್ ಗಳಿಗೆ ನಿಮ್ಮ ಅಕೌಂಟ್ ಗಳನ್ನು ಹ್ಯಾಕ್ ಮಾಡುವುದು ಕಷ್ಟ ಸಾಧ್ಯ. ಇದರ ಭದ್ರ ಬುನಾದಿಯನ್ನು ಭೇದಿಸುವುದು ಸುಲಭದ ಮಾತಲ್ಲ.
2FA ಹೇಗೆ ಕೆಲಸ ಮಾಡುತ್ತದೆ (How Does 2FA Works in Kannada)
ನಿಮ್ಮ ಆನ್ ಲೈನ್ ಅಕೌಂಟ್ ಗಳಿಗೆ ಹೆಚ್ಚಿನ ಸುರಕ್ಷತೆ ನೀಡಲು ಈ 2FA ಅನ್ನು ಹೊಂದಲೇ ಬೇಕು.ಇದನ್ನು ಆನ್ ಮಾಡಿಕೊಳ್ಳಲು ಮೊದಲಿಗೆ ನೀವು ಒಂದು ಅಪ್ಲಿಕೇಷನ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು.
ಅದುವೇ Google Authenticator. ಪ್ರತಿಷ್ಠಿತ ಗೂಗಲ್ ಸಂಸ್ಥೆಯವರೇ ರಚಿಸಿರುವ ಈ ಅಪ್ಲಿಕೇಶನ್ ಮೂಲಕ ನೀವೂ ಸಹ 2 ಸ್ಟೆಪ್ ವೆರಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಬಹುದು.
ಈ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿದ ನಂತರ ಮೊದಲಿಗೆ ನಿಮ್ಮ ಯಾವ ಅಕೌಂಟ್ ಗೆ ಸೆಕ್ಯೂರಿಟಿ ಬೇಕು ಎಂದು ಕೇಳುತ್ತದೆ. ನಂತರ ನಿಮಗೆ ಈ ಮೇಲೆ ತೋರಿಸಿದ ಚಿತ್ರದ ರೀತಿ ಇಂಟರ್ ಫೇಸ್ ಕಾಣುತ್ತದೆ.
ವಿವಿಧ ರೀತಿಯ ಕೋಡ್ ಗಳು ಪ್ರತಿ 25 ರಿಂದ 30 ಸೆಕೆಂಡ್ ಗಳಿಗೊಮ್ಮೆ ಬದಲಾಗುತ್ತಿರುತ್ತದೆ.
ನೀವು ನಿಮ್ಮ ಆನ್ ಲೈನ್ ಅಕೌಂಟ್ ಗೆ ಲಾಗಿನ್ ಆಗುವಾಗ ಅಂದರೆ ಪಾಸ್ ವರ್ಡ್ ಹಾಕಿದ ನಂತರ ನಿಮಗೆ ಈ 2FA ಕೋಡ್ ಅನ್ನು ಅಲ್ಲಿ ಕೇಳಲಾಗುತ್ತದೆ.
ಕೋಡ್ ಅನ್ನು ನಮೂದಿಸಿದರೆ ಮಾತ್ರವೇ ನಿಮ್ಮ ಅಕೌಂಟ್ ಗೆ ನೀವು ಲಾಗಿನ್ ಆಗಬಹುದು. ಇದು ಹ್ಯಾಕರ್ ಗಳಿಗೆ ಇದುವರೆಗೂ ಬಹು ದೊಡ್ಡ ತಲೆನೋವಾಗಿ ಕಾಡುತ್ತಿದೆ.