AMP ವೆಬ್ ಪೇಜ್ ನ ಬಗ್ಗೆ ಸಂಪೂರ್ಣ ಮಾಹಿತಿ | AMP Explained in Kannada

ಸ್ನೇಹಿತರೆ ನೀವು ಇಂಟರ್ನೆಟ್ ನಲ್ಲಿ ಹಲವಾರು ವೆಬ್ ಪೇಜ್ ಗಳು ⚡ರೀತಿಯ ಚಿಹ್ನೆಯನ್ನು ಹೊಂದಿರುವುದನ್ನು ನೋಡಿರಬಹುದು ಮತ್ತು ಈ ಪುಟಗಳು ಕೆಲವೇ ಕ್ಷಣಗಳಲ್ಲಿ ಓಪನ್ ಆಗುವುದನ್ನೂ ನೀವು ನೋಡಿರಬಹುದು.

ಈ ರೀತಿಯಲ್ಲಿ ಅತೀ ವೇಗವಾಗಿ ತೆರೆದುಕೊಳ್ಳುವ ಪುಟಗಳನ್ನು AMP (ಎ.ಎಂ.ಪಿ) ಎಂದು ಕರೆಯುತ್ತಾರೆ. ಇದರ ವಿಸ್ತಾರ ರೂಪ: Accelerated Mobile Pages ಎಂದು.

ತಂತ್ರಜ್ಞಾನದ ಅನ್ವೇಷಣೆಯಲ್ಲಿ ದೇಶ ವಿದೇಶಗಳಲ್ಲಿರುವ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಹಲವಾರು ರೀತಿಯ ಉಪಯೋಗಕಾರಿ ವಸ್ತುಗಳನ್ನು ತಯಾರಿ ಪಡಿಸಿದ್ದಾರೆ.

ಪ್ರಸ್ತುತ ಈ ಕಾಲಘಟ್ಟದಲ್ಲಿ ಅಂದರೆ ಇಂಟರ್ನೆಟ್ ನ ಈ ಯುಗದಲ್ಲಿ ವೆಬ್ ಸೈಟ್ ಗಳಿಗೆ ಜನರು ಮಾರು ಹೋಗಿದ್ದಾರೆ.

AMP ವೆಬ್ ಪೇಜ್ ನ ಬಗ್ಗೆ ಸಂಪೂರ್ಣ ಮಾಹಿತಿ | AMP Explained in Kannada

ಈಗಿನ ಜನರು ಹೆಚ್ಚಾಗಿ ಸುದ್ದಿಗಳನ್ನು ಓದಲು ಮತ್ತು ತಿಳಿಯಲು ಪತ್ರಿಕೆ & ದೂರದರ್ಶನಗಳ ಬದಲಾಗಿ ಅಪ್ಲಿಕೇಷನ್ ಹಾಗೂ ವೆಬ್ ಸೈಟ್ ಗಳನ್ನು ಬಳಸುತ್ತಾರೆ.

ಇವು ತುಂಬಾ ಸುಲಭವಾಗಿ ವಿಷಯಗಳನ್ನು ತಿಳಿಸಲು ಸಹಕಾರಿಯಾಗಿವೆ.

AMP ಎಂದರೇನು (What is AMP in Kannada)

Accelerated Mobile Pages ಯು ಒಂದು HTML ಫ್ರೇಮ್ ವರ್ಕ್ ಆಗಿದೆ ಮತ್ತು ಈ ಫ್ರೇಮ್ ವರ್ಕ್ ಅನ್ನು ಹೊಂದಿದ ವೆಬ್ ಪೇಜ್ ಗಳನ್ನು AMPs ಎಂದು ಕರೆಯುತ್ತಾರೆ. ಇವು ತುಂಬಾ ಹಗುರವಾಗಿಯೂ ಮತ್ತು ವೇಗವಾಗಿಯೂ ಇರುತ್ತವೆ.

AMP ಯ ಆವಿಷ್ಕಾರ (Invention of AMP in Kannada)

ಕೆಲವು ಹಳ್ಳಿಗಳಲ್ಲಿ ಇಂಟರ್ನೆಟ್ ಕನೆಕ್ಷನ್ ತುಂಬಾ ನಿಧಾನವಾಗಿರುತ್ತದೆ. ಆ ಭಾಗದ ಜನರು ವೆಬ್ ಸೈಟ್ ಗಳನ್ನು Access ಮಾಡಲು ಹೋದಾಗ ಸಾಮಾನ್ಯವಾಗಿ ಆ ಸೈಟ್ ಗಳು Buffering (Load) ಆಗುತ್ತಿರುತ್ತವೆ.

ಇಂತಹ ತೊಂದರೆಗಳನ್ನು ಕಡಿಮೆ ಮಾಡಲು AMP ಯ ಆವಿಷ್ಕಾರ ಮಾಡಲಾಗಿದೆ.

AMP ವೆಬ್ ಪೇಜ್ ನ ಬಗ್ಗೆ ಸಂಪೂರ್ಣ ಮಾಹಿತಿ | AMP Explained in Kannada

ಗೂಗಲ್ ಸಂಸ್ಥೆಯು Apple News ಹಾಗೂ ಫೇಸ್ ಬುಕ್ ನ Instant Articles ಗಳಿಗೆ ಟಕ್ಕರ್ ನೀಡಲು ಈ AMP ಯ ಆವಿಷ್ಕಾರ ಮಾಡಿದೆ.

AMP ಯ ಲಾಭಗಳು (Benefits of AMP in Kannada)

ಮೊದಲೇ ಹೇಳಿದ ಹಾಗೆ AMP ಪೇಜ್ ಗಳು ಉತ್ತಮ ವೇಗವನ್ನು ಹೊಂದಿದೆ. ಹಾಗಾಗಿ ಇದರಲ್ಲಿ ತುಂಬಾ ಲಾಭಗಳು ಇವೆ.

ಕಡಿಮೆ ಇಂಟರ್ ನೆಟ್ ಡಾಟಾವನ್ನು ಇದು ಬಳಸಿಕೊಳ್ಳುತ್ತದೆ.
ವೆಬ್ ಸೈಟ್ ಗಳಲ್ಲಿರುವ ಜಾಹಿರಾತುಗಳನ್ನು (Advertisement) ಕಡಿಮೆ ಮಾಡುತ್ತದೆ.

ಹೆಚ್ಚಿನ Java Script ಗಳನ್ನು ಇದು ರದ್ದುಗೊಳಿಸುತ್ತದೆ.
ಮಾಮೂಲಿ ವೇಗಕ್ಕಿಂತ ದುಪ್ಪಟ್ಟು ವೇಗವನ್ನು ಈ ಪೇಜ್ ಗಳು ಹೊಂದಿರುತ್ತದೆ.

ಉತ್ತಮ ವೇಗವನ್ನು ಹೊಂದಿರುವುದರಿಂದ, ಓದುಗರ ಸಮಯವನ್ನು ಸಹ ಇದು ಉಳಿಸುತ್ತದೆ.

ಇವಿಷ್ಟು AMP ಪೇಜ್ ಗಳ ಬಹುಮುಖ್ಯವಾದ ಲಾಭಗಳು.

AMP ಪೇಜ್ ಗಳಿಂದಾಗುವ ತೊಂದರೆಗಳು (Problems of AMP Pages)

ವೆಬ್ ತಾಣಗಳಲ್ಲಿ ಓದಲು ಬರುವ ಜನರಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಬದಲಿಗೆ ಫೈಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಬರುವ ಜನರಿಗೆ ಸ್ವಲ್ಪ ತೊಂದರೆ ಆಗಬಹುದು.

AMP ವೆಬ್ ಪೇಜ್ ನ ಬಗ್ಗೆ ಸಂಪೂರ್ಣ ಮಾಹಿತಿ | AMP Explained in Kannada

ಏಕೆಂದರೆ, AMP ವೆಬ್ ಪೇಜ್ ಗಳು ಕೆಲವು ಸಲ Java Script ಗಳನ್ನು ರದ್ದು ಮಾಡಿ ಬಿಡುತ್ತವೆ. ಹೀಗಾಗಿ Downloadable File ಕೂಡ AMP ಪೇಜ್ ನಲ್ಲಿ ನಿಮಗೆ ಕಾಣದೇ ಹೋಗಬಹುದು.

ಹೀಗೆ ಎಂದಾದರೂ ನಿಮ್ಮ ಜೊತೆ ಆದರೆ ಆ ಪೇಜ್ ಅನ್ನು Refresh ಮಾಡಿ ಅಥವಾ Load Full Page ಅನ್ನು ಕ್ಲಿಕ್ ಮಾಡಿ.

ಇದಿಷ್ಟು AMP ಪೇಜ್ ನ ಬಗ್ಗೆ ಒಂದು ಸಣ್ಣ ಮಾಹಿತಿ. ಹಲವಾರು ಮಂದಿ ಗೂಗಲ್ ನಲ್ಲಿ AMP in Kannada ಎಂದು ಹುಡುಕುತ್ತಿದ್ದರು.

ಹಾಗಾಗಿ ನಾವು AMP ಯ ಬಗ್ಗೆ Kannada ದಲ್ಲಿ ಲೇಖನವನ್ನು ಬರೆದಿದ್ದೇವೆ. ಯಾವುದೇ ರೀತಿಯ ಪ್ರಶ್ನೆಗಳಿದ್ದರೆ, ಕೆಳಗೆ ಕಮೆಂಟ್ ಮಾಡಿ.

Leave a comment