ಬ್ಲಾಗ್ ಶುರು ಮಾಡಲು ಉತ್ತಮ ಟಾಪಿಕ್ ಗಳು – Best Niches for New Blog in Kannada

ವೆಬ್ ಸೈಟ್ ಗಳು ಹಾಗೂ ಬ್ಲಾಗ್ ಗಳನ್ನು ಶುರು ಮಾಡುವ ಮೊದಲು ಅದರ ವಿಷಯವನ್ನು (Topic) ಆಯ್ಕೆ ಮಾಡಿಕೊಳ್ಳುವುದು ಬಹು ಮುಖ್ಯ ಕೆಲಸ.

ಹಾಗಂತ ನಿಮಗೆ ತಿಳುವಳಿಕೆ ಇಲ್ಲದ ವಿಷಯಗಳ (Niche) ಮೇಲೆ ನೀವು ಬ್ಲಾಗ್ ಅನ್ನು ತಯಾರಿಸುವುದು ನಿಷ್ಪ್ರಯೋಜಕ.

ಯಾಕೆಂದರೆ ನಮಗೆ ಗೊತ್ತಿರದ ಟಾಪಿಕ್ ಗಳ ಮೇಲೆ ವೆಬ್ ಸೈಟ್ (Website) ಗಳನ್ನು ಮಾಡಿದರೆ, ಅದು ಯಾವುದೇ ರೀತಿಯಲ್ಲೂ ನಮಗೆ ಪ್ರಯೋಜನಕಾರಿ ಆಗುವುದಿಲ್ಲ.

ಈ ಹಿನ್ನೆಲೆಯನ್ನು ಅರಿತುಕೊಂಡು ನಾವಿಲ್ಲಿ ಕೆಲವು ಉಪಯುಕ್ತ ಹಾಗೂ ಸುಲಭವಾದ ಟಾಪಿಕ್ ಗಳನ್ನು ನೀಡಿದ್ದೇವೆ.

ಆಹಾರ ಪದಾರ್ಥಗಳು (Food Niche in Kannada)

ತಿಂಡಿ ತಿನಿಸುಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ದಿನನಿತ್ಯ ಲಕ್ಷಗಟ್ಟಲೆ ಜನರು ಗೂಗಲ್ ನಲ್ಲಿ ಫುಡ್ (Food) ಗಳ ಬಗೆಗೆ ಸರ್ಚ್ ಮಾಡುತ್ತಾರೆ.

ಫುಡ್ ಬ್ಲಾಗ್ ಗಳನ್ನು ರಚಿಸುವುದರ ಮೂಲಕ ನೀವು ಸಹ ಜನರಿಗೆ ಹೊಸ ಹೊಸ ತಿಂಡಿಗಳು ಹಾಗೂ ವಿವಿಧ ಖಾದ್ಯಗಳ ಬಗ್ಗೆ ಪರಿಚಯ ಮಾಡಿಕೊಡಬಹುದು.

ಬ್ಲಾಗ್ ಶುರು ಮಾಡಲು ಉತ್ತಮ ಟಾಪಿಕ್ ಗಳು - Best Niches for New Blog in Kannada

ಒಂದು ವೇಳೆ ನೀವು ತಿಂಡಿ ಪ್ರಿಯರಾಗಿದ್ದರೆ, ಈ ಫುಡ್ ಟಾಪಿಕ್ ಅನ್ನು ಬಳಸಿಕೊಂಡು ಹೊಸ ಬ್ಲಾಗ್ (Blog) ಅನ್ನು ರೆಡಿ ಮಾಡಬಹುದು.

ಆರೋಗ್ಯ (Health Niche in Kannada)

ನಮ್ಮ ದೇಶದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ. ನಿಮಗೆ ಯಾವುದಾದರೂ ಉತ್ತಮ ಪರಿಹಾರಗಳು ತಿಳಿದಿದ್ದರೆ, ಹೊಸ ಹೆಲ್ತ್ ಬ್ಲಾಗ್ ಮಾಡಿ ನಿಮ್ಮ ಸಲಹೆಗಳನ್ನು ನೀಡಬಹುದು.

ನಿಮಗೆ ಗೊತ್ತಿರುವ ಮನೆ ಮದ್ದು ಅಥವಾ ಇನ್ಯಾವುದೇ ಆಯುರ್ವೇದ ಔಷಧಿಗಳನ್ನು ಸಹ ನೀವಿಲ್ಲಿ ಶೇರ್ ಮಾಡಿಕೊಳ್ಳಬಹುದು.

ಈ ವಿಷಯದ ಮೇಲೆ ಬಹಳ ತಿಳುವಳಿಕೆ ಅಥವಾ ಅನುಭವ ಇದ್ದವರು ಮಾತ್ರ ಈ ಟಾಪಿಕ್ (Topic) ಮೇಲೆ ಬ್ಲಾಗ್ ಅನ್ನು ತಯಾರು ಮಾಡಿ. ಯಾಕೆಂದರೆ ತಪ್ಪು ಮಾಹಿತಿಗಳು ಹಲವು ಜೀವಗಳನ್ನು ಅನಾರೋಗ್ಯಕ್ಕೆ ಈಡು ಮಾಡಬಹುದು.

ಆನ್ ಲೈನ್ ಹಣ (Online Money in Kannada)

ಹಲವು ಬಾರಿ ನಾವು ಆನ್ ಲೈನ್ ಮೂಲಕ ಹಣ ಗಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇಂಟರ್ ನೆಟ್ ಮೂಲಕ ಹಣ ಗಳಿಸುವ ಬಗ್ಗೆ ನಿಮಗೆ ತಿಳಿದಿದ್ದರೆ, ನೀವೂ ಕೂಡ ಈ ಟಾಪಿಕ್ ಅನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ಕೆಲಸವಿಲ್ಲದೆ, ಆನ್ ಲೈನ್ ನಲ್ಲಿ ದುಡ್ಡು ಮಾಡುವ ವಿಧಾನಗಳನ್ನು ಜನರು ಗೂಗಲ್ ನಲ್ಲಿ ಹುಡುಕುತ್ತಾರೆ. ಈ ಹುಡುಕಾಟಕ್ಕೆ ನೀವು ಹೊಸ ಕೊಡುಗೆಯನ್ನು ನೀಡಬಹುದು.

ಈ ರೀತಿಯ ಟಾಪಿಕ್ ನಲ್ಲಿ ನಿಮ್ಮ ಲೇಖನದ ಬರಹ, SEO ಹಾಗೂ ನಿಮ್ಮ ಕ್ರಿಯೆಟಿವಿಟಿ ಬಹು ಮುಖ್ಯ ಅಂಗಗಳು.

ವೈಯಕ್ತಿಕ ಹಣಕಾಸು (Personal Finance)

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಹಣದ ಉಳಿತಾಯದ ಬಗ್ಗೆ ಹಾಗೂ ಹಣವನ್ನು ಡಬಲ್ ಮಾಡುವ ಬಗ್ಗೆ ಹೆಚ್ಚು ಸರ್ಫ್ ಮಾಡುತ್ತಾರೆ.

ಹಣದ ದುರ್ಬಳಕೆಯನ್ನು ತಡೆಯುವ ಮಾರ್ಗಗಳನ್ನು ಹಾಗೂ ಆ ಹಣವನ್ನು ಸೇವ್ ಮಾಡುವ ಪ್ರಕ್ರಿಯೆಗಳನ್ನು ನೀವಿಲ್ಲಿ ತಿಳಿಸಿ ಕೊಡಬಹುದು.

ಬ್ಲಾಗ್ ಶುರು ಮಾಡಲು ಉತ್ತಮ ಟಾಪಿಕ್ ಗಳು - Best Niches for New Blog in Kannada

ಆರ್ಥಿಕ ಹಣಕಾಸಿನ (Financial Service) ಬಗ್ಗೆ ನಿಮಗೆ ಮಾಹಿತಿ ಇದ್ದರೆ, ಕನ್ನಡದಲ್ಲಿಯೂ ಕೂಡ ಬ್ಲಾಗ್ ಅನ್ನು ತಯಾರಿಸಬಹುದು.

ಕನ್ನಡದಲ್ಲಿ ಈ ವಿಷಯದ ಮೇಲೆ ಕೆಲವೇ ಕೆಲವು ವೆಬ್ ಸೈಟ್ ಗಳು ಚಾಲ್ತಿಯಲ್ಲಿದೆ. ಹಾಗಾಗಿ ನಿಮಗೆ ನಾವು ಕನ್ನಡದಲ್ಲಿ ಶುರು ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ.

ಟ್ರಾವೆಲ್ (Travel in Kannada)

ಒಂದು ಊರಿಂದ ಮತ್ತೊಂದು ಊರಿಗೆ ತಿರುಗಾಟ ಮಾಡುವ ಟ್ರಾವೆಲ್ ಬ್ಲಾಗರ್ ಗಳಿಗೆ ನಾವು ಈ ಟಾಪಿಕ್ ಅನ್ನು ಸೂಚಿಸುತ್ತೇವೆ.

ನಿಮಗೆ ತಿಳಿದಿರುವ ಐತಿಹಾಸಿಕ ಸ್ಥಳಗಳು, ಪ್ರಾಚೀನ ಸ್ಥಳಗಳು, ಪ್ರೇಕ್ಷಣೀಯ ಸ್ಥಳಗಳು, ಹಾಂಟೆಡ್ ಸ್ಥಳಗಳು ಅಥವಾ ಇನ್ಯಾವುದೇ ಫೇಮಸ್ ಜಾಗಗಳ ಕುರಿತು ನೀವಿಲ್ಲಿ ಲೇಖನಗಳನ್ನು ಹಂಚಿಕೊಳ್ಳಬಹುದು.

ನೀವೇನಾದರೂ ಕನ್ನಡದಲ್ಲಿ ಈ ಟ್ರಾವೆಲ್ ಬ್ಲಾಗ್ ಅನ್ನು ತಯಾರಿಸಲು ಬಯಸಿದರೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ ಸೈಟ್ ಅನ್ನು ಬಳಸಿಕೊಳ್ಳಬಹುದು.

ಮೂವಿ ಸುದ್ದಿ & ವಿಮರ್ಶೆ (Movie News & Reviews in Kannada)

ಹೊಸ ಹೊಸ ಚಲನಚಿತ್ರಗಳು ಬಿಡುಗಡೆ ಆಗುತ್ತಿದ್ದ ಹಾಗೆಯೇ ನಮ್ಮ ಜನರು ಆ ಮೂವಿಯ ತಾಜಾ ಸುದ್ದಿ ತಿಳಿದುಕೊಳ್ಳಲು ಗೂಗಲ್ ಗೆ ಬರುತ್ತಾರೆ.

ಹಾಗೆಯೇ ಆ ಸಿನಿಮಾದ ವಿಮರ್ಶೆಯನ್ನು (Review) ನೋಡಲು ಜನರು ಕಾಯುತ್ತಿರುತ್ತಾರೆ. ನಿಮಗೆ ಈ ಟಾಪಿಕ್ ನ ಮೇಲೆ ಆಸಕ್ತಿ ಇದ್ದರೆ, ನಿಮ್ಮ ಹೊಸ ಬ್ಲಾಗ್ ಗೆ ಈ ವಿಷಯವನ್ನು ಆಯ್ದುಕೊಳ್ಳಿ.

ಇದನ್ನೂ ಸಹ ಕನ್ನಡದಲ್ಲಿ ಶುರು ಮಾಡಲು ನಾವು ಸೂಚನೆ ನೀಡುತ್ತೇವೆ. ಯಾಕೆಂದರೆ ಕನ್ನಡದಲ್ಲಿ ಸಿನಿಮಾ ವಿಮರ್ಶೆಯ ಮೇಲೆ ಒಂದೇ ಒಂದು ಬ್ಲಾಗ್ ಸಹ ಇಲ್ಲ. ಕೇವಲ ನ್ಯೂಸ್ ವೆಬ್ ಸೈಟ್ ಗಳು ಮಾತ್ರವೇ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಜಾಬ್ & ಬಿಸ್ ನೆಸ್ (Job & Business in Kannada)

ಈ ಟಾಪಿಕ್ ಅನ್ನು ಸಹ ಬಿಸ್ ನೆಸ್ ನಲ್ಲಿ ಅನುಭವ ಇದ್ದವರು ಅಥವಾ ಬಿಸ್ ನೆಸ್ ಬಗ್ಗೆ ಚೆನ್ನಾಗಿ ಅರಿತುಕೊಂಡವರು ಮಾತ್ರವೇ ಶುರು ಮಾಡುವುದು ಒಳ್ಳೆಯದು.

ಬ್ಲಾಗ್ ಶುರು ಮಾಡಲು ಉತ್ತಮ ಟಾಪಿಕ್ ಗಳು - Best Niches for New Blog in Kannada

ನಿರುದ್ಯೋಗಿಗಳಿಗೆ ಸುಲಭ ರೀತಿಯಲ್ಲಿ ಉದ್ಯೋಗಗಳನ್ನು ಹುಡುಕಿಕೊಡುವ ಮತ್ತು ಅವರ ದೈನಂದಿನ ಚಟುವಟಿಕೆಗಳನ್ನು ಉಪಯೋಗಿಸಿಕೊಂಡು ಹಣ ಗಳಿಸುವ ಉಪಾಯವನ್ನು ನೀವಿಲ್ಲಿ ನೀಡಬಹುದು.

ಆನ್ ಲೈನ್ ನಲ್ಲಿ ಹಣ ಮಾಡುವ ಟಾಪಿಕ್ ಅನ್ನು ಸಹ ನೀವಿಲ್ಲಿ ಬಳಸಿಕೊಳ್ಳಬಹುದು.

ಬಿಸ್ ನೆಸ್ ಐಡಿಯಾಗಳನ್ನು ಹಾಗೂ ಲೇಟೆಸ್ಟ್ ಜಾಬ್ ನೋಟಿಫಿಕೇಶನ್ ಗಳನ್ನು ಕೂಡ ಜನರಿಗೆ ನೀವಿಲ್ಲಿ ನೀಡಬಹುದು.

ಫ್ಯಾಶನ್ ಟಿಪ್ಸ್ (Fashion in Kannada)

ನಮ್ಮಲ್ಲಿ ಲಭ್ಯವಿರುವ ಮತ್ತು ಕೈಗೆಟುಕುವ ಸೌಂದರ್ಯ ವರ್ಧಕಗಳ ಬಗ್ಗೆ ನೀವಿಲ್ಲಿ ತಿಳಿಸಬಹುದು. ಮನೆಯಲ್ಲೇ ತಯಾರಿಸಬಹುದಾದ ಹಲವು ಫ್ಯಾಷನ್ ಸಾಧನಗಳ ಮೇಲೆ ಲೇಖನಗಳನ್ನು ಬರೆಯಬಹುದು.

ಜನರು ತಮ್ಮ ತ್ವಚೆಯ ಕಾಳಜಿ ವಹಿಸುವುದಕ್ಕಾಗಿ ಪ್ರಾಕೃತಿಕವಾಗಿ ದೊರೆಯುವ ಸೌಂದರ್ಯ ಸಾಧನಗಳನ್ನು ಹುಡುಕುತ್ತಾರೆ.

ಅಂತಹ ಜನರಿಗೆ ನೀವು ಈ ಫ್ಯಾಷನ್ ಬ್ಲಾಗ್ ಮಾಡಿ ಸಹಾಯ ಮಾಡಬಹುದು ಹಾಗೂ ಡಿ.ಐ.ವೈ (DIY) ಟಿಪ್ಸ್ ಗಳನ್ನು ಸಹ ನೀವು ನೀಡಬಹುದು.

ಸ್ನೇಹಿತರೇ, ಇದಿಷ್ಟು ಹೊಸ ಬ್ಲಾಗ್ ತಯಾರಿಸುವ ಮೊದಲು ಆಯ್ಕೆ ಮಾಡಿಕೊಳ್ಳಬಹುದಾದ ವಿಷಯಗಳು. ನಿಮಗೆ ಆಸಕ್ತಿ ಇರುವ ಟಾಪಿಕ್ ಅನ್ನು ನೀವು ಬಳಸಿಕೊಳ್ಳಬಹುದು.

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular