ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ನೀವೂ ಕೂಡ ಬ್ಲಾಗರ್ (Blogger) ಅಥವಾ ವರ್ಡ್ ಪ್ರೆಸ್ (WordPress) CMS ಅಲ್ಲಿ ಯಾವುದನ್ನು ಬಳಸುವುದು ಅಂತ ಯೋಚಿಸುತ್ತಿದ್ದೀರಾ ?

ಹೇಳುವುದಾದರೆ, ಇವೆರಡೂ ಸಹ ಉತ್ತಮ ವೆಬ್ ಸೈಟ್ CMS ಗಳು (Content Management System). ಬ್ಲಾಗರ್ ಒಂದು ಉಚಿತ ಫ್ಲ್ಯಾಟ್ ಫಾರ್ಮ್ ಆದರೆ ವರ್ಡ್ ಪ್ರೆಸ್ ಅನ್ನು ಹಣ ಕೊಟ್ಟು ಖರೀದಿ ಮಾಡಬೇಕು.

ನಮ್ಮ ವೆಬ್ ಸೈಟ್ ಅನ್ನು ವರ್ಡ್ ಪ್ರೆಸ್ ನಲ್ಲಿ ಇರಿಸಲಾಗಿದೆ. ನೀವು ನಿಮ್ಮ ಸೈಟ್ ಅನ್ನು ಎಲ್ಲಿ ರಚಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಸಿ.ಎಮ್.ಎಸ್ ಎಂದರೇನು (What is CMS in Kannada)

ಇದೊಂದು ಸಾಫ್ಟ್ ವೇರ್ ಅಪ್ಲಿಕೇಶನ್ ಆಗಿದ್ದು, ನಿಮ್ಮ ವೆಬ್ ಸೈಟ್ ಅನ್ನು ಇನ್ ಸ್ಟಾಲ್ ಮಾಡಲು ಇದು ಸಹಾಯಕಾರಿಯಾಗಿದೆ.

ವೆಬ್ ಸರ್ವರ್ ಅಥವಾ ಹೋಸ್ಟಿಂಗ್ ನ ಡಾಟಾಬೇಸ್ ಅನ್ನು ಈ CMS ಉಪಯೋಗಿಸಿಕೊಳ್ಳುತ್ತದೆ. ಹೆಚ್ಚಿನ CMS ಗಳು ಓಪನ್ ಸೋರ್ಸ್ ಆಗಿರುತ್ತದೆ.

ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ಉದಾಹರಣೆಗೆ ವರ್ಡ್ ಪ್ರೆಸ್, ಗೂಗಲ್ ಬ್ಲಾಗರ್, ಜೂಮ್ಲಾ, ಡ್ರೂಪಲ್ ಇತ್ಯಾದಿ. ಇವುಗಳಲ್ಲಿ ಕೆಲವು ಸಾಫ್ಟ್ ವೇರ್ ಗಳು ಉತ್ತಮ ಗುಣಮಟ್ಟದ ರೋಬೋಟಿಕ್ API ಗಳನ್ನು ಒಳಗೊಂಡಿರುತ್ತದೆ.

ವೆಬ್ ಸೈಟ್ ಗಳಿಗೆ ಉತ್ತಮ ಸಿ.ಎಂ.ಎಸ್ (Best CMS for Websites in Kannada)

ಇವುಗಳಲ್ಲಿ ಹೆಚ್ಚಿನ CMS ಗಳನ್ನು ಹೊಸಬರಿಗೆ ಉಪಯೋಗಿಸಲು ಕಷ್ಟವಾಗಬಹುದು. ಸಾಕಷ್ಟು ಜನಪ್ರಿಯ ಮತ್ತು ಸುಲಭವಾಗಿರುವ ಸಿ.ಎಂ.ಎಸ್ ಗಳೆಂದರೆ ಗೂಗಲ್ ಬ್ಲಾಗರ್ ಮತ್ತು ವರ್ಡ್ ಪ್ರೆಸ್.

ಇವೆರಡೂ ಸಹ ಸುಲಭವಾದ ಯುಸರ್ ಇಂಟರ್ ಫೇಸ್ ಅನ್ನು ಹೊಂದಿದೆ. ಆದರೆ ಹೆಚ್ಚಿನ ಸೌಲಭ್ಯಗಳು ಮತ್ತು ಪ್ಲಗಿನ್ ಗಳು ವರ್ಡ್ ಪ್ರೆಸ್ ನಲ್ಲಿ ಮಾತ್ರವೇ ಸಿಗುತ್ತದೆ.

ಹಾಗೆಯೇ ಗೂಗಲ್ ನ ಬ್ಲಾಗರ್ ಫ್ಲ್ಯಾಟ್ ಫಾರ್ಮ್ ನಲ್ಲಿ ಪ್ಲಗಿನ್ ಗಳನ್ನು ಬಳಸಲು ಸಾಧ್ಯವಿಲ್ಲ. ಆದರೆ ಇಲ್ಲಿ ನಿಮಗೆ ಉತ್ತಮ ಸಪೋರ್ಟ್ ಹಾಗೂ ಅತ್ಯುತ್ತಮ ಅಪ್ ಟೈಮ್ ಸಿಗುತ್ತದೆ.

ಬ್ಲಾಗರ್ ಕನ್ನಡದಲ್ಲಿ (Blogger Explained in Kannada)

ಈ ಫ್ಲ್ಯಾಟ್ ಫಾರ್ಮ್ ಅನ್ನು ಗೂಗಲ್ ಸಂಸ್ಥೆ ಹುಟ್ಟುಹಾಕಿದ್ದು, ಇದರಲ್ಲಿ ಜನರು ಉಚಿತವಾಗಿ ಬ್ಲಾಗ್ ಗಳನ್ನು ತಯಾರಿಸಬಹುದು. ಇಲ್ಲಿ ನಿಮಗೆ ಉಚಿತ ಸಬ್ ಡೊಮೈನ್ ಸಹ ಸಿಗುತ್ತದೆ. ಅದು “.blogspot.com” ಎಂಬ ಸಬ್ ಡೊಮೈನ್ ಆಗಿದೆ.

ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ಇಲ್ಲಿ ನೀವು ಹೊಸ ಬ್ಲಾಗ್ ಅನ್ನು ರಚಿಸಿದ ಮೇಲೆ, ಕಸ್ಟಮ್ ಡೊಮೈನ್ ಅನ್ನೂ ಸಹ ನಿಮ್ಮ ಬ್ಲಾಗ್ ಗೆ ಜೋಡಿಸಬಹುದು. ಯಾವುದೇ ರೀತಿಯ ಸರ್ವರ್ ಚಾರ್ಜ್ ಗಳು ಮತ್ತು ವೆಬ್ ಸೈಟ್ ಡೌನ್ ನಂತಹ ತೊಂದರೆಗಳು ಇಲ್ಲಿ ಇರುವುದಿಲ್ಲ.

ನೀವಿಲ್ಲಿ ಒಂದು ಗೂಗಲ್ ಅಕೌಂಟ್ ನಿಂದ ಸುಮಾರು ನೂರು (100) ಉಚಿತ ಬ್ಲಾಗ್ ಗಳನ್ನು ತಯಾರಿಸಬಹುದು.

ವರ್ಡ್ ಪ್ರೆಸ್ ಕನ್ನಡದಲ್ಲಿ (WordPress Explained in Kannada)

ಮೊದಲೇ ಹೇಳಿದಂತೆ ವರ್ಡ್ ಪ್ರೆಸ್ ನಲ್ಲಿ ನೀವು ಬ್ಲಾಗ್ ರಚಿಸಲು ಹಣ ಕೊಟ್ಟು ಹೋಸ್ಟಿಂಗ್ ಅನ್ನು ಖರೀದಿ ಮಾಡಬೇಕು. ಆದರೆ ಇದರಲ್ಲಿ ನಿಮಗೆ ಹಲವಾರು ಪ್ಲಗಿನ್ ಗಳು, ಥೀಮ್ಸ್ ಗಳು ಹಾಗೂ ಮತ್ತಿತರ ಸೌಲಭ್ಯಗಳು ಸಿಗುತ್ತದೆ.

ಪ್ರಾರಂಭಿಕರು ಹೋಸ್ಟಿಂಗರ್ (Hostinger) ನ ಮೂಲಕ ಹೋಸ್ಟಿಂಗ್ ಅನ್ನು ಪರ್ಚೆಸ್ ಮಾಡಬಹುದು. ಬೇರೆ ಕಂಪನಿಗಳಿಗೆ ಹೋಲಿಸಿದರೆ, Hostinger ನಲ್ಲಿ ಬೆಲೆ ತುಂಬಾ ಕಡಿಮೆ.

ತಿಂಗಳಿಗೆ ಕೇವಲ ₹79 ರೂಪಾಯಿಯಲ್ಲೇ ನೀವು ಸರ್ವರ್ ಅನ್ನು ಖರೀದಿ ಮಾಡಬಹುದು. ಹೋಸ್ಟಿಂಗರ್ ನ ಲಿಂಕ್ ಈ ಕೆಳಗೆ ಇದೆ.

ಹೋಸ್ಟಿಂಗರ್ ನ ಬೆಸ್ಟ್ ಡೀಲ್ ಆನ್ ಮಾಡಲು: ಕ್ಲಿಕ್ ಮಾಡಿ

ಸಿ.ಎಂ.ಎಸ್ ನಲ್ಲಿ ಗಮನಿಸಬೇಕಾದ ಅಂಶಗಳು (Things to Remember in CMS)

ಯಾವುದೇ CMS ಅನ್ನು ಇನ್ ಸ್ಟಾಲ್ ಮಾಡುವ ಮೊದಲು, ಅದರ ಗುಣಮಟ್ಟ ಮತ್ತು ರೇಟಿಂಗ್ ಗಳನ್ನು ತಿಳಿಯುವುದು ತುಂಬಾ ಮುಖ್ಯವಾದ ಕೆಲಸ.

ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ವರ್ಡ್ ಪ್ರೆಸ್ ಹಾಗೂ ಗೂಗಲ್ ನ ಪ್ರಾಡಕ್ಟ್ ಆದ ಬ್ಲಾಗರ್ ಗಳು ನಾವು ಕಂಡ ಉತ್ತಮ ಸಿ.ಎಂ.ಎಸ್ ಗಳಾಗಿವೆ.

ನಿಮ್ಮ ಬಳಿ ಇನ್ ವೆಸ್ಟ್ ಮಾಡಲು ಹಣವಿದ್ದರೆ, ಖಂಡಿತವಾಗಿಯೂ ವರ್ಡ್ ಪ್ರೆಸ್ ಅನ್ನು ಬಳಸಿ. ಒಂದು ವೇಳೆ ಹಣ ಇಲ್ಲದಿದ್ದರೆ, ಗೂಗಲ್ ಬ್ಲಾಗರ್ ಅನ್ನು ಬಳಸಬಹುದು.

ಗೆಳೆಯರೇ, ಇದಿಷ್ಟು CMS ಗಳ ಬಗ್ಗೆ ಒಂದು ಸಣ್ಣ ಲೇಖನ. ನಿಮಗೆ ಈ ಆರ್ಟಿಕಲ್ ಇಷ್ಟವಾಗಿದ್ದರೆ, ನಿಮ್ಮ ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a comment