ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada

ಷೇರು ಮಾರುಕಟ್ಟೆಯ ಬದಲು ಜನರೀಗ ಕ್ರಿಪ್ಟೋ ಕರೆನ್ಸಿಯ ಹಿಂದೆ ಬಿದ್ದಿದ್ದಾರೆ. ಕಳೆದ ಕೆಲ ತಿಂಗಳಿಂದ ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

ಭಾರತದಲ್ಲಿ ಸುಮಾರು 10 ಕೋಟಿಗೂ ಅಧಿಕ ಜನರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಅದರಲ್ಲಿ ಸಾಕಷ್ಟು ಜನರು ಮಾರುಕಟ್ಟೆಯ ಇಳಿತಗಳನ್ನು ಕಂಡು ಲಾಸ್ ಮಾಡಿಕೊಂಡವರು ಇದ್ದಾರೆ.

ನೀವೇನಾದರೂ ಇದರಲ್ಲಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದರೆ, ತಾಳ್ಮೆಯಿಂದ ಕಾಯುವ ಶಕ್ತಿ ನಿಮ್ಮಲ್ಲಿರಬೇಕು.

ಏಕೆಂದರೆ, ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯು ಏರಿಳಿತಗಳಿಂದ ಕೂಡಿರುತ್ತದೆ. ಇಲ್ಲಿ ತಾಳ್ಮೆಯಿದ್ದಷ್ಟು ಹೆಚ್ಚು ಹಣ ಮಾಡಬಹುದು.

ಹಾಗಾದರೆ, ಇಲ್ಲಿ ಹೇಗೆ ಹೂಡಿಕೆ ಮಾಡುವುದು ಮತ್ತು ಯಾವ ಕಾಯಿನ್ ನ ಮೇಲೆ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಆದರೆ ಒಂದು ವಿಷಯ ನೆನಪಿಡಿ. ನಾವು ಇಲ್ಲಿ ಸೂಚಿಸಿರುವ ಕಾಯಿನ್ ಗಳು ಕೇವಲ ನಮ್ಮ ರೀಸರ್ಚ್ ನ ಮೇಲೆ ನೀಡಿರುತ್ತೇವೆ. ಇದು ಯಾವುದೇ ರೀತಿಯ ಆರ್ಥಿಕ ಸಲಹೆಯಲ್ಲ.

ದೀರ್ಘಕಾಲದ ವರೆಗೆ ಹಿಡಿದಿಟ್ಟುಕೊಳ್ಳಬಹುದಾದ ಕಾಯಿನ್ ಗಳು (Best Crypto for Long-Term Hold in Kannada)

ನಿಮಗೆ ಕಾಯುವ ತಾಳ್ಮೆಯಿದ್ದರೆ ಮಾತ್ರ ನೀವಿಲ್ಲಿ ದೀರ್ಘಕಾಲದವರೆಗೆ ಕಾಯಿನ್ ಅನ್ನು ಹೋಲ್ಡ್ ಮಾಡಬೇಕು. ಇಲ್ಲದಿದ್ದರೆ, ನೀವಿಲ್ಲಿ ಟ್ರೇಡಿಂಗ್ ಮಾಡಬಹುದು.

ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada

ನಾವಿಲ್ಲಿ ಕೆಲವು ಜನಪ್ರಿಯ ಹಾಗೂ ಈ ಹಿಂದೆ ಉತ್ತಮ ರಿಟರ್ನ್ಸ್ ಅನ್ನು ನೀಡಿರುವ ಕ್ರಿಪ್ಟೋ ಕರೆನ್ಸಿಗಳನ್ನು ಪಟ್ಟಿ ಮಾಡಿದ್ದೇವೆ.

ಇಥಿರೀಯಮ್ (Ethereum in Kannada)

ಈ ಇಥಿರೀಯಮ್ ಕಾಯಿನ್ ನ ಹೆಸರನ್ನು ಸಾಮಾನ್ಯವಾಗಿ ನೀವೆಲ್ಲಾ ಕೇಳಿರುತ್ತೀರಿ. ಬಿಟ್ ಕಾಯಿನ್ ನ ನಂತರದ ಸ್ಥಾನವನ್ನು ಇದೇ ಕಾಯಿನ್ ಪಡೆದಿದೆ ಎಂದರೆ ತಪ್ಪಾಗಲಾರದು.

ಒಂದೇ ಸಮನೆ ಅಂದರೆ ನಿಧಾನಗತಿಯಲ್ಲಿ ಈ ಕಾಯಿನ್ ಉತ್ತಮ ರಿಟರ್ನ್ಸ್ ಅನ್ನು ನೀಡುತ್ತಿದೆ. ಕಳೆದ 6 ತಿಂಗಳಲ್ಲಿ 63% ರಿಟರ್ನ್ಸ್ ಹಾಗೂ 1 ವರ್ಷದಲ್ಲಿ ಸುಮಾರು 417% ನಷ್ಟು ರಿಟರ್ನ್ಸ್ ಅನ್ನು ನೀಡಿದೆ.

ಈಗೀನ ಸಮಯದಲ್ಲಿ ಇದರ ಬೆಲೆ ಸುಮಾರು ₹2,95,000 ಆಗಿದೆ. ನಿಮ್ಮಲ್ಲಿ ಹೆಚ್ಚಿನ ಹಣವಿದ್ದರೆ ಮಾತ್ರ, ಇದರಲ್ಲಿ ಹೂಡಿಕೆ ಮಾಡುವುದು ಉತ್ತಮ.

ಲೈಟ್ ಕಾಯಿನ್ (Litecoin in Kannada)

ಇದರ ಈಗಿನ ಬೆಲೆ ಸುಮಾರು ₹11,800 ಆಗಿದೆ. ಆದರೆ ಆಲ್ ಟೈಮ್ ಹೆಚ್ಚಳವು ಸುಮಾರು ₹32,000 ಕ್ಕೂ ಅಧಿಕವಾಗಿದೆ.

ಲಾಂಗ್ ಟರ್ಮ್ ಹೂಡಿಕೆಗೆ ಇದೂ ಸಹ ಅತ್ಯುತ್ತಮ ಕಾಯಿನ್ ಆಗಿದೆ. ನಿಮ್ಮ ಕ್ರಿಪ್ಟೋ ಅಪ್ಲಿಕೇಶನ್ ನಲ್ಲಿ LTC ಎಂದು ಬರೆದರೆ ಈ ಕಾಯಿನ್ ಸಿಗುತ್ತದೆ.

ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada

ಕಳೆದ 1 ವರ್ಷದಲ್ಲಿ ಈ ಲೈಟ್ ಕಾಯಿನ್ 19% ಗೂ ಅಧಿಕ ರಿಟರ್ನ್ಸ್ ನೀಡಿದೆ. ಆದರೆ ಹಿಂದಿನ 5 ವರ್ಷಗಳಲ್ಲಿ ಇದು ಬರೋಬ್ಬರಿ 3900% ಗೂ ಹೆಚ್ಚಿನ ರಿಟರ್ನ್ಸ್ ಅನ್ನು ನೀಡಿರುತ್ತದೆ.

ಇಂಟರ್ನೆಟ್ ಕಂಪ್ಯೂಟರ್ (Internet Computer in Kannada)

ಈ ಕಾಯಿನ್ ಒಂದು ರೀತಿಯಲ್ಲಿ ವಿಶೇಷವಾಗಿದೆ. ಏಕೆಂದರೆ ಇದರ ಬೆಲೆ ಸರಿಸುಮಾರು ₹2000 ಆಗಿದೆ. ಹಾಗಾಗಿ ನೀವು ಈ ICP ಕಾಯಿನ್ ಮೂಲಕ ಡೈಲಿ ಟ್ರೇಡಿಂಗ್ ಅನ್ನೂ ಸಹ ಮಾಡಬಹುದು.

ಕಡಿಮೆ ಬೆಲೆಯಲ್ಲಿ ನಿಮಗೆ ಈ ಕಾಯಿನ್ ಸಿಗುತ್ತದೆ. ಇದರ ಸಾರ್ವಕಾಲಿಕ ಹೆಚ್ಚಳವು ಸುಮಾರು ₹33,600 ಕ್ಕೂ ಅಧಿಕ.

ಹಾಗೆಯೇ ಈ ಕಾಯಿನ್ ಅನ್ನು ಈಗ ಪರ್ಚೆಸ್ ಮಾಡುವುದು ಒಳ್ಳೆಯದು. ಏಕೆಂದರೆ ಈ ಇಂಟರ್ನೆಟ್ ಕಂಪ್ಯೂಟರ್ ಕಾಯಿನ್ ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಇಂಜಿನ್ ಕಾಯಿನ್ (Enjin Coin in Kannada)

ಕೇವಲ ₹214 ರೂಪಾಯಿಯಲ್ಲೇ ಈ ಕಾಯಿನ್ ನಿಮಗೆ ಸಿಗುತ್ತದೆ. ENJ ಎನ್ನುವುದು ಇದರ ಸಂಕೇತವಾಗಿರುತ್ತದೆ.

ಅತೀ ಹೆಚ್ಚು ಏರಿಳಿತಗಳನ್ನು ಈ ಕಾಯಿನ್ ಹೊಂದಿರುವುದರಿಂದ ನೀವಿದರಲ್ಲಿ ಡೈಲಿ ಟ್ರೇಡಿಂಗ್ ಸಹ ಮಾಡಬಹುದು. ಅದು ಕೂಡ ಯಾವುದೇ ರಿಸ್ಕ್ ಇಲ್ಲದೆ.

ಹಿಂದಿನ ಒಂದು ವರ್ಷದಿಂದ ಹಿಡಿದು ಇಲ್ಲಿಯವರೆಗೆ ಬರೋಬ್ಬರಿ 1900% ಗೂ ಹೆಚ್ಚಿನ ರಿಟರ್ನ್ಸ್ ಅನ್ನು ಈ ಇಂಜಿನ್ ಕಾಯಿನ್ ನೀಡಿದೆ.

ಮ್ಯಾಟಿಕ್ (Matic in Kannada)

ಇದರ ಇನ್ನೊಂದು ಹೆಸರು ಪೊಲಿಗನ್ ಆಗಿದೆ. ಆದರೆ ಮ್ಯಾಟಿಕ್ ಎಂದು ಇದು ಹೆಸರುವಾಸಿಯಾಗಿದೆ. ಇದರ ಪ್ರಸ್ತುತ ಬೆಲೆ ₹200 ಆಗಿದೆ.

ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada

ಇದರ ಒಂದು ವರ್ಷದ ಹೆಚ್ಚಳವು ಸುಮಾರು ₹229 ರೂಪಾಯಿ ಆಗಿದೆ. ಆದರೆ ನಿಮ್ಮಲ್ಲಿ ಹೆಚ್ಚು ಹಣವಿದ್ದರೆ, ನಿಮಗೆ ಸಿಗುವ ಕಾಯಿನ್ ನ ಗಾತ್ರವು ಹೆಚ್ಚಳವಾಗಿರುತ್ತದೆ.

ಹಾಗಾಗಿ ಪ್ರತೀ ಒಂದು ರೂಪಾಯಿ ಏರಿಕೆಯಲ್ಲೂ ನಿಮಗೆ ದೊಡ್ಡ ಲಾಭ ಆಗುವ ಸಾಧ್ಯತೆ ಇದೆ.

ಇದೂ ಸಹ ನಿಮ್ಮ ದೈನಂದಿನ ಟ್ರೇಡಿಂಗ್ ಗೆ ಬಲು ಸಹಾಯಕಾರಿ. ಇಂಜಿನ್ ಕಾಯಿನ್ ನಂತೆಯೇ ಇದರ ಏರಿಳಿತಗಳು ಹೆಚ್ಚಾಗಿದೆ.

ರಿಪ್ಪಲ್ (Ripple in Kannada)

ಇದರ ಮೂಲ ಸಂಕೇತ XRP ಆಗಿದೆ. ಈಗಿನ ಸಮಯದಲ್ಲಿ ಇದು ನಿಮಗೆ ಕೇವಲ ₹67 ರೂಪಾಯಿಯ ಆಸುಪಾಸಿನಲ್ಲಿ ಸಿಗುತ್ತದೆ.

ಕಳೆದ ಒಂದು ವರ್ಷದಲ್ಲಿ ಸುಮಾರು 271% ಗೂ ಅಧಿಕ ರಿಟರ್ನ್ಸ್ ಅನ್ನು ಈ ರಿಪ್ಪಲ್ ಕಾಯಿನ್ ನೀಡಿದೆ. ಕಡಿಮೆ ಬೆಲೆಯಲ್ಲಿ ಈ ಕಾಯಿನ್ ಸಿಗುವುದರಿಂದ ನೀವಿಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯಲ್ಲಿ ಮಾರ್ಕೆಟ್ ಕ್ಯಾಪ್ ನ ಶ್ರೇಣಿಯಲ್ಲಿ ರಿಪ್ಪಲ್ ಕಾಯಿನ್ 8 ನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾರುಕಟ್ಟೆಯ ವಿಪರೀತ ಇಳಿತದಿಂದ ಈ ಕಾಯಿನ್ ಇಷ್ಟು ಕಡಿಮೆ ಬೆಲೆಗೆ ಬಂದಿದೆ.

ಶಿಬಾ ಇನು (Shiba Inu in Kannada)

ಈ ಕಾಯಿನ್ ಇತ್ತೀಚಿಗಷ್ಟೇ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕೇವಲ ಒಂದು ವರ್ಷದಲ್ಲೇ ಬರೋಬ್ಬರಿ 2,80,000% ಗೂ ಅಧಿಕ ರಿಟರ್ನ್ಸ್ ಅನ್ನು ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಇದರ ಪ್ರಸ್ತುತ ಬೆಲೆ ಕೇವಲ ₹0.002700 ನಷ್ಟು ಇದೆ. ಆದರೆ ಈ ಬೆಲೆ ಯಾವ ಕ್ಷಣದಲ್ಲಾದರೂ ಗಗನಕ್ಕೆ ಏರಬಹುದು.

ಕೇವಲ ₹1000 ರೂಪಾಯಿಗೆ ನಿಮಗೆ ಸರಿಸುಮಾರು 4 ಲಕ್ಷ ಕಾಯಿನ್ ಗಳು ಸಿಗುತ್ತದೆ. ಅಂದರೆ ಈ ಶಿಬಾ ಕಾಯಿನ್ ಏನಾದರೂ ₹1 ಗೆ ತಲುಪಿದರೆ, ನಿಮಗೆ 4 ಲಕ್ಷ ರೂಪಾಯಿಗಳು ಸಿಗುತ್ತದೆ.

ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada

ಈ ಮೇಲಿನ ಎಲ್ಲಾ ಕಾಯಿನ್ ಗಳು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳಲು ಯೋಗ್ಯವಾಗಿದೆ. ಶಾರ್ಟ್ ಟ್ರೇಡಿಂಗ್ ಗಾಗಿ ನಾವು ಸೂಚಿಸಿರುವ ಕಾಯಿನ್ ಗಳನ್ನು ಬಳಸಬಹುದು.

ಇವೆಲ್ಲಾ ಕ್ರಿಪ್ಟೋ ಟೋಕನ್ ಗಳನ್ನು ನೀವು ಕಾಯಿನ್ ಡಿ.ಸಿ.ಎಕ್ಸ್ (CoinDCX) ಅಪ್ಲಿಕೇಶನ್ ನಲ್ಲಿ ನೋಡಬಹುದು.

ಕೇವಲ ₹100 ಗಳ ಹೂಡಿಕೆಯನ್ನು ಮಾಡಿ, ₹10 ಗಳಲ್ಲೇ ಕಾಯಿನ್ ಗಳನ್ನು ಖರೀದಿ ಮಾಡಬಹುದು. ಈಗಲೇ ಇನ್ ವೆಸ್ಟ್ ಮಾಡಲು: ಕ್ಲಿಕ್ ಮಾಡಿ

ಸ್ನೇಹಿತರೇ, ಇದಿಷ್ಟು ಕ್ರಿಪ್ಟೋ ಮಾರ್ಕೆಟ್ ನಲ್ಲಿ ಲಭ್ಯವಿರುವ ಕೆಲವು ಉತ್ತಮ ಕಾಯಿನ್ ಗಳ ಬಗ್ಗೆ ಒಂದು ಸಣ್ಣ ಮಾಹಿತಿ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಶೇರ್ ಮಾಡಿಕೊಳ್ಳಿ.

NOTE: ನಾವು ಯಾವುದೇ ರೀತಿಯ ಆರ್ಥಿಕ ಸಲಹೆಗಾರರಲ್ಲ. ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯ ಸಾದ್ಯತೆಗೆ ಬದ್ಧವಾಗಿದೆ. ಹೂಡಿಕೆ ಮಾಡುವ ಮುನ್ನ ಸರಿಯಾದ ಮಾಹಿತಿ ಪಡೆದು ಉತ್ತಮ ಕಾಯಿನ್ ಮೇಲೆ ಹೂಡಿಕೆ ಮಾಡಿ.

2 thoughts on “ಈ ಕ್ರಿಪ್ಟೋ ಕರೆನ್ಸಿಗಳು ಉತ್ತಮವಾಗಿವೆ: Best Cryptocurrency to Buy in Kannada”

Leave a comment