ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

0

ಸಾಮಾನ್ಯವಾಗಿ ಎಲ್ಲರಿಗೂ ದೆವ್ವದ ಅಥವಾ ಸಸ್ಪೆನ್ಸ್ ಸಿನಿಮಾಗಳೆಂದರೆ ಇಷ್ಟ ಇದ್ದೆ ಇರುತ್ತದೆ. ಅದರಲ್ಲೂ ನಮ್ಮ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಭಯಾನಕ Horror ಸಿನಿಮಾಗಳು ಬಂದಿವೆ.

ನಾವೀ ಲೇಖನದಲ್ಲಿ ನಿಮಗೆ ಕನ್ನಡದ ಐದು ಅತ್ಯುತ್ತಮ ಹಾರರ್ ಚಿತ್ರಗಳ ಬಗ್ಗೆ ಹೇಳಲಿದ್ದೇವೆ. ಇದನ್ನು ಪೂರ್ತಿಯಾಗಿ ಓದಿದ ಮೇಲೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯದಿರಿ.

ಆಪ್ತಮಿತ್ರ [ApthaMitra Kannada Movie]

ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

ಈ ಸಿನಿಮಾವನ್ನು ನೀವೆಲ್ಲಾ ಖಂಡಿತವಾಗಿಯೂ ನೋಡಿರುತ್ತೀರಿ. ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದ ಈ ಚಿತ್ರ, ಹಲವಾರು ಕಡೆ ರಜತೋತ್ಸವ ಆಚರಿಸಿತ್ತು.

ಮೊದ ಮೊದಲು ಯಾವುದೋ ದೆವ್ವದ ಸಿನಿಮಾದಂತೆ ಕಂಡರೂ ಕೊನೆಯಲ್ಲಿ ಇದೊಂದು Multiple Personality ಯ ಕೇಸ್ ಎಂದು ತಿಳಿದು ಬರುತ್ತದೆ.

ಒಮ್ಮೆ ನೋಡಿದರೆ ಪದೇ ಪದೆ ನೋಡಬೇಕು ಎನಿಸುವ ಒಂದು ಅತ್ಯದ್ಭುತ ಕನ್ನಡ ಚಲನಚಿತ್ರ ಇದಾಗಿದೆ.

ಚಿತ್ರದ ಹೆಸರುಆಪ್ತಮಿತ್ರ
ನಿರ್ದೇಶನಪಿ. ವಾಸು
ನಟರುಡಾ. ವಿಷ್ಣುವರ್ಧನ್, ರಮೇಶ್ ಅರವಿಂದ್, ದ್ವಾರಕೀಶ್, ಸೌಂದರ್ಯ, ಪ್ರೇಮಾ
ಸಂಗೀತಗುರುಕಿರಣ್
ತೆರೆಕಂಡ ವರ್ಷ27 ಆಗಸ್ಟ್ 2004
ಭಾಷೆಕನ್ನಡ
ಐ.ಎಂ.ಡಿ.ಬಿ8.2/10
ರೆಕಾರ್ಡ್ ಲೇಬಲ್ಅಶ್ವಿನಿ ರೆಕಾರ್ಡಿಂಗ್ ಕಂಪನಿ

ಶಿವಲಿಂಗ [Shivalinga Kannada Movie]

ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

ಈ ಚಿತ್ರವನ್ನೂ ಸಹ ನಿಮ್ಮಲ್ಲಿ ಹಲವಾರು ಮಂದಿ ನೋಡಿರಬಹುದು. ಆಪ್ತಮಿತ್ರ ಸಿನಿಮಾದ ನಿರ್ದೇಶಕರಾದ ಪಿ. ವಾಸುರವರೇ ನಿರ್ದೇಶಿಸಿರುವ ಹಾರರ್ ಸಿನಿಮಾ ಇದಾಗಿದೆ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಿಐಡಿ ಶಿವ, ರಹೀಮ್ ಎಂಬ ಮುಸ್ಲಿಂ ಯುವಕನ ಹಂತಕರನ್ನು ರೋಮಾಂಚನಕಾರಿಯಾಗಿ ಹೇಗೆ ಹುಡುಕುತ್ತಾನೆ ಎನ್ನುವುದೇ ಈ ಸಿನಿಮಾದ ಮುಖ್ಯ ಕಥೆಯಾಗಿದೆ.

ಚಿತ್ರದ ಹೆಸರುಶಿವಲಿಂಗ
ನಿರ್ದೇಶನಪಿ. ವಾಸು
ನಟರುಡಾ. ಶಿವರಾಜ್ ಕುಮಾರ್, ವೇದಿಕಾ, ಸಾಧು ಕೋಕಿಲ, ಊರ್ವಶಿ
ಸಂಗೀತವಿ. ಹರಿಕೃಷ್ಣ
ತೆರೆಕಂಡ ವರ್ಷ12 ಫೆಬ್ರವರಿ 2016
ಭಾಷೆಕನ್ನಡ
ಐ.ಎಂ.ಡಿ.ಬಿ7/10
ರೆಕಾರ್ಡ್ ಲೇಬಲ್ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್

ನಮೋ ಭೂತಾತ್ಮ [Namo Bhootatma Kannada Movie]

ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

ನಿರ್ದೇಶಕ ಮುರಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ದೆವ್ವದ ಚಿತ್ರವು ಬಹಳಸ್ಟು ಕಾಮಿಡಿಯಿಂದ ಕೂಡಿದೆ. ಕೋಮಲ್ ಹಾಗೂ ಹರೀಶ್ ರಾಜ್ ರವರ ಹಾಸ್ಯ ದೃಶ್ಯಗಳು ನಿಮ್ಮನ್ನು ನಗಿಸದೆ ಇರಲಾರದು.

ಕಾಮಿಡಿ ದೃಶ್ಯ ಸೇರಿದಂತೆ, ಬೆಚ್ಚಿ ಬೀಳಿಸುವ ಪ್ರೇತಾತ್ಮದ ದೃಶ್ಯಾವಳಿಗಳೂ ಸಹ ಈ ಚಿತ್ರದಲ್ಲಿವೆ.

ಚಿತ್ರದ ಹೆಸರುನಮೋ ಭೂತಾತ್ಮ
ನಿರ್ದೇಶನಮುರಳಿ
ನಟರುಕೋಮಲ್, ಐಶ್ವರ್ಯ ಮೆನನ್, ಹರೀಶ್ ರಾಜ್, ಗಾಯತ್ರಿ ಐಯ್ಯರ್, ಅವಿನಾಶ್, ಶೋಭರಾಜ್
ಸಂಗೀತಫರ್ಹಾನ್ ರೋಷನ್/ ಇಮಿಲ್ ಮೊಹಮ್ಮದ್
ತೆರೆಕಂಡ ವರ್ಷ28 ಅಕ್ಟೊಬರ್ 2014
ಭಾಷೆಕನ್ನಡ
ಐ.ಎಂ.ಡಿ.ಬಿ6.8/10
ರೆಕಾರ್ಡ್ ಲೇಬಲ್ಸೋನಿ ಮ್ಯೂಸಿಕ್ ಇಂಡಿಯಾ

ಆಕೆ [Aake Kannada Horror Movie]

ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

ಇತ್ತೀಚಿಗಷ್ಟೇ ನಮ್ಮನ್ನೆಲ್ಲಾ ಅಗಲಿದ ಯುವ ನಟ ಚಿರಂಜೀವಿ ಸರ್ಜಾ ರವರು ನಾಯಕ ನಟನಾಗಿ ಅಭಿನಯ ಮಾಡಿರುವ ಈ “ಆಕೆ” ಚಿತ್ರವು ಮೊದಲು ನೋಡಿದವರ ತಲೆಗೆ ಹುಳ ಬಿಡುವಂತಿದೆ.

ಹೌದು ಸ್ನೇಹಿತರೇ, ಮೊದ ಮೊದಲು ಈ ಸಿನಿಮಾವನ್ನು ನೋಡುವಾಗ ಏನು ಎತ್ತ ಎಂದು ಅರ್ಥವಾಗುವುದಿಲ್ಲ. ಕೊನೆಗೆ ಇದೊಂದು ಆತ್ಮದ ಪ್ರಯಾಸ ಎಂದು ಗೊತ್ತಾಗುತ್ತದೆ.

ಕೆಲವು ಜನರು ಈ ಚಿತ್ರವು “ಮಾಯ” ಎನ್ನುವವಳ ನೈಜ ಕಥೆಯನ್ನು ಆಧರಿಸಿದೆ ಎಂದು ಹೇಳುತ್ತಾರೆ.

ಚಿತ್ರದ ಹೆಸರುಆಕೆ
ನಿರ್ದೇಶನಕೆ. ಎಂ. ಚೈತನ್ಯ
ನಟರುಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ
ಸಂಗೀತಗುರುಕಿರಣ್
ತೆರೆಕಂಡ ವರ್ಷ30 ಜೂನ್ 2017
ಭಾಷೆಕನ್ನಡ
ಐ.ಎಂ.ಡಿ.ಬಿ6/10
ರೆಕಾರ್ಡ್ ಲೇಬಲ್ಈರೋಸ್ ನೌ ಮ್ಯೂಸಿಕ್

6-5=2 [6-5=2 Kannada Movie]

ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films

ಟ್ರೆಕ್ಕಿಂಗ್ ಗೆ ಹೋಗುವವರು ಈ ಸಿನಿಮಾವನ್ನು ಖಂಡಿತವಾಗಿ ನೋಡಿರುತ್ತೀರಿ. ಇಂಗ್ಲೀಷ್ ನ “ಬ್ಲೇರ್ ವಿಚ್ ಪ್ರಾಜೆಕ್ಟ್” ಎಂಬ ಸಿನಿಮಾದಿಂದ ಪ್ರೇರಣೆಗೊಂಡು ಈ ಚಿತ್ರವನ್ನು ಮಾಡಲಾಗಿದೆ.

ಗುಡ್ಡ ಗಾಡು ಸುತ್ತಾಡಲು ಹೋಗುವ ಕೆಲವು ಗೆಳೆಯ ಗೆಳತಿಯರು ತಮ್ಮ ಕ್ಯಾಮರಾದಲ್ಲಿಯೇ ವಿಡಿಯೋ ಚಿತ್ರೀಕರಿಸಿದಂತೆ ಈ ಮೂವೀಯಲ್ಲಿ ತೋರಿಸಲಾಗುತ್ತದೆ. ಈ ರೀತಿಯ ಚಿತ್ರಗಳನ್ನು “ಫೌಂಡ್ ಫೂಟೇಜ್” ಸಿನಿಮಾ ಎಂದು ಕರೆಯುತ್ತಾರೆ.

ವಿಶೇಷವೆಂದರೆ, ಚಿತ್ರತಂಡವು ಜನರಲ್ಲಿ ಭಯ ಹುಟ್ಟಿಸಲು ಈ ಸಿನಿಮಾದಲ್ಲಿ ಬರುವ ಪ್ರತಿಯೊಬ್ಬರ ವಿವರಗಳನ್ನು ಗೌಪ್ಯವಾಗಿಟ್ಟಿತ್ತು.

ಚಿತ್ರದ ಹೆಸರು6-5=2
ನಿರ್ದೇಶನಕೆ. ಎಸ್. ಅಶೋಕ್ & ಸ್ವರ್ಣ ಲತಾ
ನಟರುದರ್ಶನ್ ಅಪೂರ್ವ, ವಿಜಯ್ ಚೆಂದೂರ್, ಕೃಷ್ಣ ಪ್ರಕಾಶ್, ಪಲ್ಲವಿ, ತನುಜಾ, ಮೃತ್ಯುಂಜಯ
ಸಂಗೀತN/A
ತೆರೆಕಂಡ ವರ್ಷ29 ನವೆಂಬರ್ 2013
ಭಾಷೆಕನ್ನಡ
ಐ.ಎಂ.ಡಿ.ಬಿ5.6/10
ರೆಕಾರ್ಡ್ ಲೇಬಲ್ಸ್ವರ್ಣ ಲತಾ ಪ್ರೊಡಕ್ಷನ್ಸ್

ಗೆಳೆಯರೇ ಇದಿಷ್ಟು ನಾವು ಆಯ್ಕೆ ಮಾಡಿರುವ ಕನ್ನಡದ ಕೆಲವು ಉತ್ತಮ Suspense ಹಾಗೂ Horror ಚಿತ್ರಗಳು. ಇದರ ಹೊರತಾಗಿಯೂ ಇನ್ನೂ ಹಲವಾರು ಉತ್ತಮ ಭಯಾನಕ ಚಿತ್ರಗಳು ನಮ್ಮ ರಾಜ್ಯದಲ್ಲಿ ಬಿಡುಗಡೆ ಯಾಗಿದೆ.

ಅವುಗಳ ಬಗ್ಗೆಯೂ ಸಹ ನಾವು ಇನ್ನೊಂದು ಲೇಖನದಲ್ಲಿ ಬರೆಯಲು ಪ್ರಯತ್ನಿಸುತ್ತೇವೆ. ಈ ಪೋಸ್ಟ್ ನಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹಾಗೆಯೇ ಸಾಧ್ಯವಾದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here