ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ತಾಣ ಎಂದರೆ ಅದು ಯೂಟ್ಯೂಬ್. ಇದರಲ್ಲಿ ಈವರೆಗೆ ಲಕ್ಷಗಟ್ಟಲೆ ಚಾನೆಲ್ ಗಳು ಹಾಗೂ ಕೋಟಿಗಟ್ಟಲೆ ವಿಡಿಯೋಗಳಿವೆ.
ಕರ್ನಾಟಕದಲ್ಲಿ ಸಾವಿರಾರು ಮಂದಿ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಹಣ ಗಳಿಸುವ ಉದ್ದೇಶದಿಂದ ಮಾತ್ರ ತಮ್ಮ ಚಾನೆಲ್ ಅನ್ನು ನಡೆಸುತ್ತಿದ್ದಾರೆ.
ನಮ್ಮ ಕನ್ನಡದ ಸಾಕಷ್ಟು ಚಾನೆಲ್ ಗಳು ಯೂಟ್ಯೂಬ್ ನಲ್ಲಿವೆ. ನಾವಿಲ್ಲಿ ಉತ್ತಮ ಕಂಟೆಂಟ್ ಗಳನ್ನು ನೀಡುತ್ತಿರುವ ಚಾನಲ್ ಗಳನ್ನು ಪಟ್ಟಿ ಮಾಡಿದ್ದೇವೆ.
ಟೆಕ್ ಇನ್ ಕನ್ನಡ (Tech in Kannada)
ತಂತ್ರಜ್ಞಾನವು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ನಮಗೆ ವಿಜ್ಞಾನದ ಕೆಲ ಹೊಸ ಅನ್ವೇಷಣೆಗಳನ್ನು ತಿಳಿಯಲಾಗುವುದಿಲ್ಲ. ಹಾಗಾಗಿ ನಾವು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತೇವೆ.
ಸ್ಮಾರ್ಟ್ ಫೋನ್ ಹಾಗೂ ಗ್ಯಾಜೆಟ್ ಗಳ ಬಗ್ಗೆ ಸುಲಭವಾಗಿ ಕನ್ನಡದಲ್ಲಿ ತಿಳಿದುಕೊಳ್ಳಲು ನೀವು ಟೆಕ್ ಇನ್ ಕನ್ನಡ ಯೂಟ್ಯೂಬ್ ಚಾನಲ್ ಅನ್ನು ವೀಕ್ಷಿಸಲೇ ಬೇಕು.
ಸುಮಾರು 6.28 ಲಕ್ಷ ಚಂದಾದಾರರನ್ನು ಒಳಗೊಂಡಿರುವ ಈ ಚಾನಲ್ ಗೆ ಸೇರಿಕೊಳ್ಳಿ: ಕ್ಲಿಕ್ ಮಾಡಿ
ವಿಸ್ಮಯ ಕನ್ನಡ (Vismaya Kannada)
ಒಂದು ವೇಳೆ ನೀವು ನಿಗೂಢ, ರಹಸ್ಯ ಅಥವಾ ಸೂಪರ್ ನ್ಯಾಚುರಲ್ ಪವರ್ ಗಳ ವಿಡಿಯೋಗಳನ್ನು ನೋಡಲು ಇಷ್ಟ ಪಟ್ಟರೆ, ಈ ವಿಸ್ಮಯ ಕನ್ನಡ ಚಾನೆಲ್ ಅನ್ನು ಒಮ್ಮೆ ನೋಡಲೇ ಬೇಕು.
ವಿಜ್ಞಾನದ ರಹಸ್ಯಗಳನ್ನು ಹಾಗೂ ಪ್ರಾಕೃತಿಕ ನಿಗೂಢಗಳನ್ನು ಇಲ್ಲಿ ತುಂಬಾ ವಿವರವಾಗಿ ಹೇಳುತ್ತಾರೆ. ದೆವ್ವದ ನಿಲುವುಗಳನ್ನು ಸಹ ಈ ಯೂಟ್ಯೂಬ್ ಚಾನಲ್ ನಲ್ಲಿ [YouTube Channel] ಸುಲಭವಾಗಿ ವಿವರಿಸಲಾಗಿದೆ.
ಏಲಿಯನ್ ಗಳ ಸಾಕಷ್ಟು ವಿಡಿಯೋಗಳನ್ನು ಸಹ ನೀವು ಈ ಕನ್ನಡ ಚಾನೆಲ್ ನಲ್ಲಿ ವೀಕ್ಷಿಸಬಹುದು. ಈ ಯೂಟ್ಯೂಬ್ ಚಾನಲ್ ಸುಮಾರು 3.93 ಲಕ್ಷ ಚಂದಾದಾರರನ್ನು ಹೊಂದಿದೆ.
ವಿಸ್ಮಯ ಕನ್ನಡದ ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ: ವಿಸ್ಮಯ ಕನ್ನಡ
ಕಾರ್ಸ್ ವರ್ಲ್ಡ್ ಕನ್ನಡ (Cars World Kannada)
ವಾಹನಗಳ ಮೇಲೆ ಒಲವು ಇದ್ದವರು ಹಾಗೂ ಅವುಗಳನ್ನು ಖರೀದಿಸ ಬಯಸುವವರು ಈ ಕನ್ನಡ ಆಟೋ ಮೊಬೈಲ್ ಚಾನಲ್ ಅನ್ನು ನೋಡಲೇ ಬೇಕು.
ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಯಲ್ಲಿ ಯಾವ ಯಾವ ಊರಿನಲ್ಲಿ ಸಿಗುತ್ತದೆ ಎಂಬುದನ್ನು ಈ ಚಾನೆಲ್ ನಲ್ಲಿ ತೋರಿಸಲಾಗುತ್ತದೆ.
4.87 ಲಕ್ಷಕ್ಕೂ ಮೀರಿದ ಜನರು ಇಲ್ಲಿ ಜಾಯಿನ್ ಆಗಿದ್ದಾರೆ. ಈ ಕಾರ್ಸ್ ವರ್ಲ್ಡ್ ಕನ್ನಡ ಯೂಟ್ಯೂಬ್ ಚಾನಲ್ ನ ಚಂದಾದಾರರಾಗಲು ಇಲ್ಲಿ ಒತ್ತಿ: ಕ್ಲಿಕ್ ಮಾಡಿ
ಆನಂದ್ ಆಡಿಯೋ (Anand Audio)
ಕರ್ನಾಟಕದ ಜನತೆಗೆ ಸಂಗೀತವನ್ನು ಮನೆ ಮನೆಗೆ ತಲುಪಿಸಿದ ಹೆಮ್ಮೆ ಆನಂದ್ ಆಡಿಯೋ ಅವರದ್ದು. ಅತ್ಯುತ್ತಮ ಕನ್ನಡ ಚಿತ್ರ ಗೀತೆ, ಭಾವ ಗೀತೆ ಹಾಗೂ ಜಾನಪದ ಗೀತೆಗಳನ್ನು ಇಲ್ಲಿ ಅಪ್ ಲೋಡ್ ಮಾಡಲಾಗಿದೆ.
ಸಂಗೀತ ಪ್ರೀಯರು ಈ ಚಾನಲ್ ಅನ್ನು ನೋಡೆ ಇರುತ್ತಾರೆ. ಒಂದು ವೇಳೆ ನೀವಿನ್ನೂ ನಮ್ಮ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಗೆ ಜಾಯಿನ್ ಆಗದಿದ್ದರೆ, ಈ ಕೆಳಗಿನ ಲಿಂಕ್ ನ ಮೂಲಕ ಜಾಯಿನ್ ಆಗಿ.
ಸರಿ ಸುಮಾರು 90.5 ಲಕ್ಷಕ್ಕೂ ಮೀರಿದ ಜನರು ಇದರ ಮೂಲಕ ಹಾಡುಗಳನ್ನು ಕೇಳುತ್ತಾರೆ. ಆನಂದ್ ಆಡಿಯೋ ಚಾನೆಲ್ ಗೆ ಹೊಂದಿಕೊಳ್ಳಿ: ಕ್ಲಿಕ್ ಮಾಡಿ
ಇನ್ಫೋ ಬೆಲ್ಸ್ ಕನ್ನಡ (Infobells Kannada)
ವಿಶೇಷವಾಗಿ ಚಿಕ್ಕ ಮಕ್ಕಳಿಗೆಂದೆ ಮಾಡಲಾದ ಈ ಯೂಟ್ಯೂಬ್ ಚಾನೆಲ್ ನಲ್ಲಿ ವಿಧ ವಿಧವಾದ ಎನಿಮೇಟೆಡ್ ಕಾರ್ಟೂನ್ ಗಳು, ಕನ್ನಡ ರೈಮ್ಸ್ ಗಳು ಮತ್ತು ಶಿಕ್ಷಣಕ್ಕೆ ಪ್ರಯೋಜನಕಾರಿಯಾದ ವಿಡಿಯೋಗಳಿವೆ.
ಮಕ್ಕಳ ಬುದ್ಧಿ ವಿಕಾಸಕ್ಕೆ ಸಹಾಯಕಾರಿಯಾಗುವ ಕೆಲವು ವಿಶಿಷ್ಟ ಕಾರ್ಟೂನ್ ವಿಡಿಯೋಗಳು ಸಹ ಇಲ್ಲಿವೆ. 92.3 ಲಕ್ಷಕ್ಕೂ ಅಧಿಕ ಜನರನ್ನು ಇದು ಒಳಗೊಂಡಿದೆ.
ಚಂದಾದಾರರಾಗಲು ಇಲ್ಲಿ ಒತ್ತಿ: ಕ್ಲಿಕ್ ಮಾಡಿ
ಎಸ್.ಆರ್.ಎಸ್ ಮೀಡಿಯಾ ವಿಷನ್ (SRS Media Vision)
ನೀವುಗಳು ಸಿನಿ ಪ್ರಿಯರಾಗಿದ್ದರೆ ಈ ಯೂಟ್ಯೂಬ್ ಚಾನಲ್ ತುಂಬಾ ಸಹಾಯಕಾರಿ ಆಗಲಿದೆ. ಒಂದು ಸಾವಿರಕ್ಕೂ ಅಧಿಕ ಕನ್ನಡ ಚಲನಚಿತ್ರಗಳನ್ನು ಈ ಚಾನಲ್ ಒಳಗೊಂಡಿದೆ.
ಅತ್ಯಾಕರ್ಷಕ ಕ್ಲ್ಯಾರಿಟಿಗಳನ್ನು ಹೊಂದಿರುವ ಕನ್ನಡ ಚಲನಚಿತ್ರಗಳನ್ನು ಇವರು ಅಪ್ ಲೋಡ್ ಮಾಡುತ್ತಾರೆ. ಇಲ್ಲಿ 26.2 ಲಕ್ಷಕ್ಕೂ ಹೆಚ್ಚು ಜನರು ಸೇರಿಕೊಂಡಿದ್ದಾರೆ.
ಈ ಯೂಟ್ಯೂಬ್ ಚಾನೆಲ್ ಗೆ ಸೇರಿಕೊಳ್ಳಿ: ಕ್ಲಿಕ್ ಮಾಡಿ
ಕನ್ನಡ ಕಾಮಿಡಿ ಸೀನ್ಸ್ (Kannada Comedy Scenes)
ನಮ್ಮ ಕನ್ನಡದ ಚಿತ್ರಗಳಲ್ಲಿ ಹಾಸ್ಯಗಳಿಗೆ ಬೇರೆಯೇ ಪ್ರಾಮುಖ್ಯತೆ ಇದೆ. ಕೆಲವರು ಕಾಮಿಡಿ ಸೀನ್ ಗಳನ್ನು ನೋಡಲಿಕ್ಕೆಂದೇ ಚಿತ್ರ ಮಂದಿರಗಳಿಗೆ ಲಗ್ಗೆ ಇಡುತ್ತಾರೆ.
ಹೀಗಿರುವಾಗ ಜನರ ಮೊಬೈಲ್ ಫೋನ್ ಗಳಿಗೆ ಕನ್ನಡ ಹಾಸ್ಯ ದೃಶ್ಯಗಳನ್ನು ತಲುಪಿಸುತ್ತಿರುವ ಗರಿಮೆ ಈ ಯೂಟ್ಯೂಬ್ ಚಾನೆಲ್ ಗೆ ಸೇರುತ್ತದೆ. ಇಲ್ಲಿ ಸುಮಾರು 11.5 ಲಕ್ಷಕ್ಕೂ ಅಧಿಕ ಜನರು ಸೇರಿಕೊಂಡಿದ್ದಾರೆ.
ಶ್ರೀ ಗಣೇಶ್ ವಿಡಿಯೋ [SGV Digital] ಅವರ ಈ ಯೂಟ್ಯೂಬ್ ಚಾನೆಲ್ ಗೆ ಸೇರಿಕೊಳ್ಳಿ: ಕ್ಲಿಕ್ ಮಾಡಿ
ಇಂಡಿಯನ್ ಮನಿ.ಕಾಮ್ (IndianMoney.com)
ಆರ್ಥಿಕತೆಗೆ ಹಾಗೂ ಫಿನಾನ್ಶಿಯಲ್ ಫ್ರೀಡಂ ಗೆ ಹೆಸರುವಾಸಿಯಾಗಿರುವ ಈ ಯೂಟ್ಯೂಬ್ ಚಾನಲ್ ಅನ್ನು ನೀವು ಒಮ್ಮೆ ನೋಡಬೇಕು.
ಸುಮಾರು 13 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಉದ್ಯಮಿ ಸುಧೀರ್ ಅವರು ಇಲ್ಲಿ ನಿಮಗೆ ಸರಿಯಾದ ಬಿಸ್ನೆಸ್ ಮಾಡುವುದನ್ನು ಕನ್ನಡದಲ್ಲಿ ಕಲಿಸುತ್ತಾರೆ.
ಇಲ್ಲಿ ಸುಮಾರು 9.67 ಲಕ್ಷ ಜನ ಚಂದಾದಾರರಿದ್ದಾರೆ. ಈ ಚಾನೆಲ್ ಗೆ ಸೇರಿಕೊಳ್ಳಿ: ಕ್ಲಿಕ್ ಮಾಡಿ
ಮಸ್ತ್ ಮಗಾ (Masth Magaa)
ಸುಮಾರು 12.6 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ ಯೂಟ್ಯೂಬ್ ಚಾನಲ್ ಅನ್ನು ಖ್ಯಾತ ನಿರೂಪಕ ಅಮರ್ ಪ್ರಸಾದ್ ಅವರು ನಡೆಸುತ್ತಾರೆ.
ಭಾರತದಲ್ಲಿ ನಡೆಯುವ ತಾಜಾ ತಾಜಾ ಸುದ್ದಿಗಳನ್ನು ಕನ್ನಡದಲ್ಲಿ ನಮಗಿಲ್ಲಿ ತಿಳಿಸಲಾಗುತ್ತದೆ. ಪಾಲಿಟಿಕ್ಸ್, ಶೇರ್ ಮಾರ್ಕೆಟ್, ಕ್ರಿಪ್ಟೋ ಗಳ ಬಗ್ಗೆ ಇಲ್ಲಿ ವಿವರಿಸಲಾಗುತ್ತದೆ.
ಹೊಂದಿಕೊಳ್ಳಲು ಇಲ್ಲಿ ಒತ್ತಿ: ಕ್ಲಿಕ್ ಮಾಡಿ
Leave a Reply