ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ | Bitcoin Explained in Kannada

ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ | Bitcoin Explained in Kannada

ನೀವು ಈಗಾಗಲೇ ಬಿಟ್ ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಕೇಳಿರಬಹುದು. ಆದರೆ ನಿಮಗೆ ಈ ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಎಷ್ಟು ತಿಳಿದಿದೆ ?

ಒಂದು ವೇಳೆ ನಿಮಗೆ ಈ ಡಿಜಿಟಲ್ ಕರೆನ್ಸಿಗಳ ಬಗ್ಗೆ ಗೊತ್ತಿಲ್ಲದಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಇಲ್ಲಿ ನಾವು ಅತೀ ಜನಪ್ರಿಯವಾಗಿರುವ ಬಿಟ್ ಕಾಯಿನ್ ಬಗ್ಗೆ ವಿವರಿಸಿದ್ದೇವೆ.

ಬಿಟ್ ಕಾಯಿನ್ ಎಂದರೇನು (What is Bitcoin in Kannada)

ಬಿಟ್ ಕಾಯಿನ್ (Bitcoin) ಒಂದು ರೀತಿಯ ಡಿಜಿಟಲ್ ಕರೆನ್ಸಿ ಆಗಿದ್ದು, ಕ್ರಿಪ್ಟೋ ಕರೆನ್ಸಿಗಳ ಸಾಲಿನಲ್ಲೇ ಅತೀ ಹೆಚ್ಚು ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿರುವ ಏಕೈಕ ಕರೆನ್ಸಿ ಆಗಿದೆ.

ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ | Bitcoin Explained in Kannada

ಈ ಬಿಟ್ ಕಾಯಿನ್ ಅತೀ ಹೆಚ್ಚು ಮತ್ತು ಬಹು ದೊಡ್ಡ ಪ್ರಮಾಣದಲ್ಲಿ ಏರಿಳಿತಗಳನ್ನು ಕಂಡಿದೆ. ನೀವು ಕೂಡ ಈ ಬಿಟ್ ಕಾಯಿನ್ (Bitcoin) ಅನ್ನು ಸುಲಭವಾಗಿ ಖರೀದಿ ಮಾಡಬಹುದು.

ಬಿಟ್ ಕಾಯಿನ್ ನ ಆವಿಷ್ಕಾರ (Bitcoin Invention in Kannada)

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಅಕ್ಟೊಬರ್ 31, 2008 ರಂದು ಸತೋಷಿ ನಾಕಮೋಟೋ [Satoshi Nakamoto] ಎಂಬ ಅನಾಮಿಕ ವ್ಯಕ್ತಿಯು ಬಿಟ್ ಕಾಯಿನ್ ನ ಆವಿಷ್ಕಾರ ಮಾಡಿದರು.

ಈ ಎಲೆಕ್ಟ್ರಾನಿಕ್ ಕ್ಯಾಷ್ [Bitcoin] ಅನ್ನು ಕಂಡುಹಿಡಿದ ವ್ಯಕ್ತಿಯನ್ನು ಯಾರೂ ಸಹ ಕಂಡಿಲ್ಲ. ಬಿಟ್ ಕಾಯಿನ್ ಅನ್ನು 2009 ರಿಂದ ಒಪನ್ ಸೋರ್ಸ್ ತಂತ್ರಾಂಶದ ಮೂಲಕ ಬಿಡುಗಡೆ ಮಾಡಲಾಯಿತು.

ಬಿಟ್ ಕಾಯಿನ್ ಮೈನಿಂಗ್ (Bitcoin Mining in Kannada)

ಸ್ನೇಹಿತರೇ, ನೀವು ಬಿಟ್ ಕಾಯಿನ್ ಮೈನಿಂಗ್ ನ ಬಗ್ಗೆ ಕೇಳಿರಬಹುದು. ಹೆಸರೇ ಹೇಳುವಂತೆ ಇದು ಬಿಟ್ ಕಾಯಿನ್ ಅನ್ನು ಮೈನ್ (ಗಣಿಗಾರಿಕೆ) ಮಾಡುವ ಕೆಲಸವಾಗಿದೆ.

ಇದನ್ನೂ ಓದಿ: AMP in Kannada

ಇತ್ತೀಚೆಗೆ ಶ್ರೀ ಕೃಷ್ಣ ಅಥವಾ ಶ್ರೀಕಿ ಎನ್ನುವ ಯುವಕ ಬಿಟ್ ಕಾಯಿನ್ ನ ಪ್ರಕರಣದಲ್ಲಿ ಭಾಗಿಯಾಗಿರುವುದು ನಿಮಗೆ ಗೊತ್ತಿರಬಹುದು. ಬಿಟ್ ಕಾಯಿನ್ ನ ಕಳ್ಳತನದ ಆರೋಪದಡಿಯಲ್ಲಿ ಈತನನ್ನು ವಿಚಾರಣೆಗೆ ಒಳಪಡಿಸಲಾಯಿತು.

ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ | Bitcoin Explained in Kannada

ಬಿಟ್ ಕಾಯಿನ್ ಅನ್ನು ಮೈನ್ ಮಾಡುವುದು ಸುಲಭದ ಕೆಲಸವಲ್ಲ. ಇದನ್ನು ಮಾಡಲು ಸಾಕಷ್ಟು ಉತ್ತಮ ಗುಣಮಟ್ಟದ ಗಣಕಯಂತ್ರಗಳು [Computers] ಹಾಗೂ ಅತೀ ಹೆಚ್ಚು ವಿದ್ಯುತ್ ನ ಅಗತ್ಯವಿದೆ.

ಮುಖ್ಯವಾಗಿ ಈ ಎಲ್ಲಾ ಸಾಧನಗಳನ್ನು, ಅಂದರೆ ಗಣಕಯಂತ್ರಗಳನ್ನು ದಿನದ 24 ಗಂಟೆಗಳ ಕಾಲ ಚಾಲ್ತಿಯಲ್ಲಿಡಬೇಕು.

ಜನಸಾಮಾನ್ಯರಿಗೆ ಬಿಟ್ ಕಾಯಿನ್ ಮೈನಿಂಗ್ ಮಾಡಲು ಬೇಕಾಗುವ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಸಾಮಾನ್ಯವಾಗಿ ಒಂದು ಬಿಟ್ ಕಾಯಿನ್ ಅನ್ನು ಮೈನ್ ಮಾಡಲು ಸರಿ ಸುಮಾರು 5 ವರ್ಷ ಬೇಕಾಗಬಹುದು.

ಒಂದು ಬಿಟ್ ಕಾಯಿನ್ ನ ಈಗಿನ ಬೆಲೆ: ₹40 ಲಕ್ಷ ರೂಪಾಯಿಗಳು [in Dec 5, 2021]

ಬಿಟ್ ಕಾಯಿನ್ ಅನ್ನು ಖರೀದಿ ಮಾಡುವುದು ಹೇಗೆ (Bitcoin Purchase in Kannada)

ಈಗಿನ ಸಮಯದಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಅತೀ ಕಡಿಮೆ ಬೆಲೆಯಲ್ಲಿ, ಸುಲಭವಾಗಿ ಖರೀದಿ ಮಾಡಬಹುದು. ಇವುಗಳನ್ನು ಕೊಂಡುಕೊಳ್ಳಲು ನಿಮ್ಮ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಲ್ಲಿ ಹಲವಾರು ಅಪ್ಲಿಕೇಶನ್ ಗಳು ಲಭ್ಯವಿದೆ.

ಕಾಯಿನ್ ಡಿಸಿಎಕ್ಸ್ [Coin DCX] ಎನ್ನುವ ಅಪ್ಲಿಕೇಶನ್ ನಲ್ಲಿ ನೀವು ಅತೀ ಕಡಿಮೆ ಬೆಲೆಯಲ್ಲಿ, ಅಂದರೆ ಕನಿಷ್ಠ ₹100 ರೂಪಾಯಿಗಳಲ್ಲಿಯೇ ಬಿಟ್ ಕಾಯಿನ್ ಅಥವಾ ಬೇರೆ ಯಾವುದೇ ಕ್ರಿಪ್ಟೋ ಕರೆನ್ಸಿಗಳನ್ನು ಖರೀದಿಸಬಹುದು.

NOTE
ಸೂಚನೆ: ನಮ್ಮ ಈ ಕೆಳಗಿನ ಲಿಂಕ್ ಮೂಲಕ ನೀವು Coin DCX ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿದರೆ, ನಿಮಗೆ ₹100 ರೂಪಾಯಿ ಮೌಲ್ಯದ ETH [Ethereum] ಕಾಯಿನ್ ಸಿಗುತ್ತದೆ.

Coin DCX App Link: ಕ್ಲಿಕ್ ಮಾಡಿ

ಬಿಟ್ ಕಾಯಿನ್ ಮೇಲೆ ಹೂಡಿಕೆ ಎಷ್ಟು ಸುರಕ್ಷಿತ (Bitcoin Investment in Kannada)

ಯಾವುದೇ ಎಲೆಕ್ಟ್ರಾನಿಕ್ ಕರೆನ್ಸಿಗಳ ಮೇಲೆ ಹೂಡಿಕೆ ಮಾಡುವ ಮುನ್ನ ಒಂದು ವಿಷಯ ನೆನಪಿರಲಿ. ನೀವು ಕಳೆದುಕೊಳ್ಳಲು ತಯಾರಾಗಿರುವ ಹನವನ್ನಷ್ಟೇ ಹೂಡಿಕೆ ಮಾಡಿ.

ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ | Bitcoin Explained in Kannada

ಹಣವನ್ನು ಹೂಡಿಕೆ ಮಾಡುವ ಕೆಲವು ಜನರು ಹೂಡಿಕೆ ಮಾಡಿದ ಸ್ವಲ್ಪ ದಿನದಲ್ಲೇ ಅತೀ ಹೆಚ್ಚು ರಿಟರ್ನ್ ಅನ್ನು ಬಯಸುತ್ತಾರೆ. ಆದರೆ ನೆನಪಿಡಿ, Investment ಎನ್ನುವುದು ದೀರ್ಘಾವಧಿಯ ಆಟವಾಗಿದೆ.

ಇಲ್ಲಿ ಹಣವನ್ನು ಹೂಡಿಕೆ ಮಾಡಿದ ನಂತರ ನೀವು ಕನಿಷ್ಠ ಎಂದರೂ 6 ತಿಂಗಳಿಂದ 1 ವರ್ಷಗಳ ಅವಧಿಯ ವರೆಗೆ ಕಾಯಬೇಕು.

ಬಿಟ್ ಕಾಯಿನ್ ನ ಪರ್ಯಾಯ ಕರೆನ್ಸಿಗಳು (Bitcoin Alternatives in Kannada)

ಒಂದು ವೇಳೆ ನಿಮಗೆ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಲು ಇಷ್ಟವಿಲ್ಲದಿದ್ದರೆ, ಅದರ ಪರ್ಯಾಯ ಕಾಯಿನ್ ಗಳನ್ನು ನೀವು ಖರೀದಿ ಮಾಡಬಹುದು.

ಮಾರ್ಕೆಟ್ ನಲ್ಲಿ ಸಾವಿರಕ್ಕೂ ಹೆಚ್ಚು ಕ್ರಿಪ್ಟೋ ಕರೆನ್ಸಿಗಳು ಲಭ್ಯವಿದೆ. ಅದರಲ್ಲಿ ಜನಪ್ರಿಯವಿರುವ ಕೆಲವು ಕಾಯಿನ್ [Coin] ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

  • Ethereum
  • Litecoin
  • Ripple
  • Tether
  • Solana
  • XRP
  • Shiba INU
  • Dogecoin
  • Cardano
  • Binance Coin

ಇದರ ಹೊರತಾಗಿಯೂ ಇನ್ನು ಹಲವಾರು ಕಾಯಿನ್ ಗಳನ್ನು ನೀವು ಖರೀದಿ ಮಾಡಬಹುದಾಗಿದೆ.

ಬಿಟ್ ಕಾಯಿನ್ ಬಗ್ಗೆ ಇನ್ನಷ್ಟು ಮಾಹಿತಿ (More About Bitcoin in Kannada)

ಈ ಬಿಟ್ ಕಾಯಿನ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಇಲ್ಲಿವೆ ನೋಡಿ.

ಬಿಟ್ ಕಾಯಿನ್ ಸಂಕೇತBTC, ฿, ₿
ಕೋಡ್BTC, XBT
ಪೂರೈಕೆಯ ಮಿತಿ₿21,000,000
ಮಾರ್ಕೆಟ್ ಕ್ಯಾಪ್US $1.149 Trillion
ಅಧಿಕೃತ ಬಳಕೆದಾರ(ರು)El Salvador
ಸ್ಥಾಪಕರುSatoshi Nakamoto
ಖಾತೆ ತೆರೆದ ದಿನಾಂಕ3 January 2009

ಸ್ನೇಹಿತರೇ ಇವಿಷ್ಟು ಬಿಟ್ ಕಾಯಿನ್ ಬಗ್ಗೆ ಸಣ್ಣ ರೀತಿಯ ಮಾಹಿತಿ. ನಿಮಗೆ ಈ ಲೇಖನದಿಂದ ಸಹಾಯವಾಗಿದ್ದರೆ ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ಕಮೆಂಟ್ ಮಾಡಿ.


Posted

in

by

Comments

Leave a Reply

Your email address will not be published. Required fields are marked *