ಸ್ನೇಹಿತರೇ, ಹಣ ಎಂದರೆ ಎಲ್ಲರಿಗೂ ಇಷ್ಟ! ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತೇವೆ. ಅದರಲ್ಲಿ ಅಂತರ್ಜಾಲದ (Internet) ಮೂಲಕ ಹಣ ಗಳಿಸುವುದು ಕೂಡ ಒಂದು.
ಆನ್ ಲೈನ್ ಮೂಲಕ ಸಾಕಷ್ಟು ಮಂದಿ ಪ್ರತಿನಿತ್ಯ ಸಾವಿರಾರು ರೂಪಾಯಿಗಳನ್ನು ಸಂಪಾದನೆ ಮಾಡುತ್ತಾರೆ. ಅವರುಗಳು ಬೇರೆ ಬೇರೆ ವಿಧಾನಗಳನ್ನು ಬಳಸುತ್ತಾ ಬಹಳ ಚಾಣಾಕ್ಷತನದಿಂದ Online ಮೂಲಕ ದುಡ್ಡು ಸಂಪಾದಿಸುತ್ತಾರೆ.
ಆದರೆ ಈ ಲೇಖನದಲ್ಲಿ ನಾವು ತುಂಬಾ ಸುಲಭವಾಗಿ ಮತ್ತು ಯಾವುದೇ ಹೆಚ್ಚಿನ ಕೆಲಸವಿಲ್ಲದೆ ಹಣ ಗಳಿಕೆ ಮಾಡುವುದನ್ನು ಹೇಳಿದ್ದೇವೆ. ಅಂದರೆ ಈ ವಿಧಾನದ ಮೂಲಕ ನೀವು Browser ನಲ್ಲಿ ಶೋಧ (Browse) ಮಾಡುತ್ತಾ ದುಡ್ಡು ಗಳಿಸಬಹುದು.
ಬ್ರೇವ್ ಬ್ರೌಸರ್ ಅನ್ನು ಇನ್ ಸ್ಟಾಲ್ ಮಾಡಿ (Install Brave Browser)
ಒಂದು ಸಾಮಾನ್ಯ ಬ್ರೌಸರ್ ಮೂಲಕ ಹಣ ಮಾಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಗೆಳೆಯರೇ, “ಬ್ರೇವ್” ಎಂಬ ಹೆಸರಿನ ಬ್ರೌಸರ್ ಒಂದು ನಿಮಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ.
- ಮೊದಲಿಗೆ ನಿಮ್ಮ ಪ್ಲೇ ಸ್ಟೋರ್ ಆಪ್ ಸ್ಟೋರ್ ಅನ್ನು ತೆರೆದು ಬ್ರೇವ್ ಬ್ರೌಸರ್ (Brave Browser) ಅನ್ನು ಡೌನ್ಲೋಡ್ ಮಾಡಿ.
- ನಂತರ ಆಪ್ ಅನ್ನು ಓಪನ್ ಮಾಡಿ, ಬಲಬದಿ ಇರುವ ತ್ರಿಕೋನ ಆಕೃತಿಯ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಜಾಹೀರಾತುಗಳ (Advertisement) ಸೆಟ್ಟಿಂಗ್ ಮಾಡಬೇಕಾಗುತ್ತದೆ. ಇದು ತುಂಬಾ ಸುಲಭದ ಕೆಲಸವಾಗಿರುತ್ತದೆ.
- ನಿಮಗೆ ಒಂದು ಗಂಟೆಗೆ ಎಷ್ಟು ಜಾಹೀರಾತು ತೋರಿಸಬೇಕೆಂದು ಅಲ್ಲಿ ನಿಗದಿಪಡಿಸಬೇಕು.
- ಇದಿಷ್ಟೇ ಕೆಲಸ ನೀವು ಮೊದಲು ಮಾಡಬೇಕಾಗುತ್ತದೆ.
ಬ್ರೇವ್ ರಿವಾರ್ಡ್ಸ್ ಹೇಗೆ ಕೆಲಸ ಮಾಡುತ್ತದೆ (How Brave Rewards Works)
ಈ ಬ್ರೇವ್ ರಿವಾರ್ಡ್ಸ್ BAT [Basic Attention Token] ಎನ್ನುವ ಕ್ರಿಪ್ಟೋ ಕರೆನ್ಸಿಯ ಆಧಾರದ ಮೇಲೆ ತಯಾರಾಗಿದೆ. ಅಂದರೆ ನಿಮಗೆ ಪಾವತಿಸುವ ಹಣವನ್ನು BAT ಎನ್ನುವ ಇಲೆಕ್ಟ್ರಾನಿಕ್ ಕರೆನ್ಸಿ ಮೂಲಕ ನೀಡಲಾಗುತ್ತದೆ. ಇದು ಇನ್ ಬಿಲ್ಟ್ ಸೆಟ್ಟಿಂಗ್ ಆಗಿದೆ.
ಕ್ರಿಪ್ಟೋ ಕರೆನ್ಸಿಯ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದಿದ್ದರೆ, ನಮ್ಮ ಈ ಲೇಖನವನ್ನು ಓದಿ: ಕ್ಲಿಕ್ ಮಾಡಿ
ನೀವು ಈ ಬ್ರೇವ್ (Brave) ಬ್ರೌಸರ್ ಅನ್ನು ಬಳಸುವಾಗ ಕೆಲವೊಂದು ಚಿಕ್ಕ ನೋಟಿಫಿಕೇಶನ್ ಗಳು ನಿಮ್ಮ ಮೊಬೈಲ್ ಗೆ ಬರುತ್ತದೆ. ಈ ನೋಟಿಫಿಕೇಶನ್ ಗಳು ತುಂಬಾನೇ ಬಳಕೆದಾರರ ಸ್ನೇಹಿ (User Friendly) ಆಗಿರುತ್ತದೆ.
ಪ್ರತಿ ತಿಂಗಳಿಗೆ ಒಂದು ಸಲ ನಿಮಗೆ ಇದು ನೀವು ಗಳಿಸಿದ ಹಣವನ್ನು ಪಾವತಿ ಮಾಡುತ್ತದೆ. ಇದರಲ್ಲಿ ನಿಮಗೆ ಯಾವುದೇ ರೀತಿಯ ಚಾರ್ಜ್ ಗಳು ಇರುದಿಲ್ಲ.
ವೀಶೇಷವೆಂದರೆ ನೀವು ಗಳಿಸಿದ ಹಣವನ್ನು, ನಿಮಗೆ ಇಷ್ಟವಾದ ವೆಬ್ ಸೈಟ್ ಗಳಿಗೆ ಕೊಡುಗೆ ನೀಡಬಹುದು.
ಉಳಿದ ಜಾಹೀರಾತುಗಳಿಂದ ಬ್ರೇವ್ ಜಾಹೀರಾತುಗಳು ಹೇಗೆ ಭಿನ್ನ (How Brave Ads are Different)
ಬ್ರೇವ್ ಬ್ರೌಸರ್ ಅನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ
ನೀವು ಜಾಹೀರಾತುಗಳನ್ನು ನೀಡಲು ಬಯಸಿದರೆ ಈ ಕೆಳಗಿನ ಲಿಂಕ್ ಅನ್ನು ಒತ್ತಿ
ನೀವು ಕ್ರಿಯೇಟರ್ ಆಗಲು ಬಯಸಿದರೆ ಈ ಕೆಳಗಿನ ಲಿಂಕ್ ಅನ್ನು ಒತ್ತಿ
Leave a Reply