Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

ಅಧಿಕ ಪ್ರಮಾಣದಲ್ಲಿ ನಾರಿನಂಶ ಹೊಂದಿರುವ ಈ ಚಿಯಾ ಬೀಜಗಳು ಹೇಗೆ ನಮ್ಮ ಜೀರ್ಣಕ್ರಿಯೆಗೆ ಹಾಗೂ ಆರೋಗ್ಯ ಸುಧಾರಣೆಗೆ ಸಹಾಯಕಾರಿ ಎಂದು ತಿಳಿಯೋಣ ಬನ್ನಿ.

ಚಿಯಾ ಬೀಜ ಎಂದರೇನು ? What is Chia Seeds in Kannada

ನಾವೆಲ್ಲ ಸೇವಿಸುವ ಕೆಲವು ಆಹಾರ ಧಾನ್ಯಗಳಂತೆಯೇ ಈ ಚಿಯಾ ಬೀಜ ಕೂಡ ಒಂದು. ಪುದೀನಾ ಸಸ್ಯಗಳಂತೆ ಈ ಚಿಯಾ ಬೀಜಗಳ ಸಸ್ಯವು ಕಂಡುಬರುತ್ತದೆ.

ಇವುಗಳು ನೋಡುವುದಕ್ಕೆ ಅಂಡಾಕಾರವಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ.

ಚಿಯಾ ಬೀಜದ ಉಪಯೋಗಗಳು – Benefits of Chia Seeds in Kannada

ಆರೋಗ್ಯದ ಸುಧಾರಣೆಯಲ್ಲಿ ಈ ಚಿಯಾ ಬೀಜಗಳು ಬಹು ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರವಾದ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ.

Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

ರಾತ್ರಿ ಮಲಗುವ ಮುನ್ನ ತಣ್ಣಗಿನ ನೀರಿನಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟು, ಮರುದಿನ ಬೆಳಿಗ್ಗೆ ಎದ್ದ ತಕ್ಷಣ ನೀವಿದನ್ನು ಸೇವಿಸಬಹುದು. ಮುಂಜಾನೆಯ ಹೊರತಾಗಿಯೂ ಇತರ ಯಾವುದೇ ಸಮಯದಲ್ಲಿಯೂ ನೀರಿನೊಂದಿಗೆ ತಿನ್ನಬಹುದು.

ಹಾಗಾದರೆ ಈ ಚಿಯಾ ಬೀಜಗಳ ಕೆಲವು ಮುಖ್ಯ ಉಪಯೋಗಗಳನ್ನು ತಿಳಿಯೋಣ ಬನ್ನಿ.

ಜೀರ್ಣಕ್ರಿಯೆಗೆ ಸಹಾಯಕಾರಿ

ಮೊದಲೇ ಹೇಳಿದಂತೆ ಇವುಗಳು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುದಲ್ಲದೆ, ಬ್ಲಡ್ ಶುಗರ್ ನಿಯಂತ್ರಣವನ್ನು ಕೂಡ ಇದು ಮಾಡುತ್ತದೆ.

ಆರೋಗ್ಯಕರ ಕೂದಲಿಗೆ ಸಹಾಯಕಾರಿ

ದೇಹದ ಆರೋಗ್ಯ ಅಷ್ಟೇ ಅಲ್ಲದೇ, ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಈ ಚಿಯಾ ಬೀಜಗಳನ್ನು ಬಳಸಬಹುದು.

  • ಕೂದಲು ವೇಗವಾಗಿ ಬೆಳೆಯುತ್ತದೆ
  • ಕೂದಲು ನಯಾ ಹಾಗೂ ಶೈನ್ ಆಗುತ್ತದೆ
  • ಕೂದಲ ಉದುರುವಿಕೆ ತಡೆಯುತ್ತದೆ
  • ಡ್ರೈ ಆಗಿರುವ ಕೂದಲನ್ನು ಸರಿ ಪಡಿಸುತ್ತದೆ
  • ಕೂದಲು ತೆಳುವಾಗದಂತೆ ನೋಡಿಕೊಳ್ಳುತ್ತದೆ
  • ಕೂದಲ ಸ್ಥಿತಿಸ್ಥಾಪಕತ್ವವನ್ನು ಕಾಯುತ್ತದೆ
  • ಉದ್ದನೆಯ ಕೂದಲನ್ನು ಕಾಯ್ದುಕೊಳ್ಳುತ್ತದೆ

ಈ ಮೇಲಿನ ಪ್ರಯೋಜನಗಳನ್ನು ನೀವು ಚಿಯಾ ಬೀಜಗಳನ್ನು ಉಪಯೋಗಿಸುವುದರಿಂದ ಪಡೆದುಕೊಳ್ಳಬಹುದು.

Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

ತೂಕ ಇಳಿಸಲು ಸಹಾಯಕಾರಿ

ದೇಹದ ತೂಕ ಹೆಚ್ಚಿರುವ ವ್ಯಕ್ತಿಗಳು ಈ ಚಿಯಾ ಬೀಜಗಳನ್ನು ಪ್ರತಿನಿತ್ಯ ಸೇವಿಸಬಹುದು. ಹೀಗೆ ಸೇವಿಸುವುದರಿಂದ ತೂಕವು ಕಡಿಮೆಯಾಗುವುದಲ್ಲದೇ, ನಿಮ್ಮ ಬೆಲ್ಲಿ ಫ್ಯಾಟ್ ಅನ್ನು ಕೂಡ ಕರಗಿಸುತ್ತದೆ.

ದಿನನಿತ್ಯ ಚಿಯಾ ಸೀಡ್ಸ್ ಅನ್ನು ಸೇವಿಸುವವರು 50 ಗ್ರಾಮ್ ಗಳಿಗಿಂತ ಹೆಚ್ಚಿನ ಡೋಸೆಜ್ ಅನ್ನು ಸೇವಿಸಬಾರದು ಎಂದು ಹಲವು ವರದಿಗಳು ತಿಳಿಸಿವೆ. ಅಂದರೆ 5 ಟೇಬಲ್ ಸ್ಪೂನ್ ಗಿಂತ ಹೆಚ್ಚಿನ ಸೇವನೆ ಮಾಡಬಾರದು.

ಇದನ್ನೂ ಓದಿ: ಉರ್ಫಿ ಜಾವೇದ್ ಹೊಸ ವೇಷ

ಇಷ್ಟಲ್ಲದೇ ಇನ್ನೂ ಹಲವಾರು ಅತ್ಯುತ್ತಮ ಪ್ರಯೋಜನಗಳನ್ನು ಈ ಚಿಯಾ ಬೀಜಗಳು ಹೊಂದಿವೆ. ನೀವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಈ ಬೀಜಗಳನ್ನು ಬೆರೆಸಿಕೊಂಡು ತಿನ್ನಬಹುದು.

ಅಂದರೆ ಮೊಸರು, ಜ್ಯುಸ್ ಹಾಗೂ ಮತ್ತಿತರ ದ್ರವ ರೂಪದ ಪದಾರ್ಥಗಳಲ್ಲಿ ನೀವಿದನ್ನು ಸೇರಿಸಿಕೊಂಡು ಸೇವಿಸಬಹುದು.

ಚಿಯಾ ಬೀಜವನ್ನು ಖರೀದಿಸುವುದು ಹೇಗೆ ? How to Buy Chia Seeds in Kannada

Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

ಇದನ್ನು ನೀವು ಅಮೆಜಾನ್ ಸೇರಿದಂತೆ ಮುಂತಾದ ಆನ್ ಲೈನ್ ಸ್ಟೋರ್ ನಲ್ಲಿ ಖರೀದಿ ಮಾಡಬಹುದು. ಆದರೆ ಅತೀ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ ₹60 ರೂಪಾಯಿಗಳಲ್ಲಿ ಈ ಕೆಳಗಿನ ಲಿಂಕ್ ಮೂಲಕ ಖರೀದಿಸಬಹುದು.

ಮಾರಾಟಗಾರರ ಹೆಸರು: ಆನ್ ಲೈನ್ ಮಂಗಳೂರು ಸ್ಟೋರ್
ಖರೀದಿಸುವ ಲಿಂಕ್: ಕ್ಲಿಕ್ ಮಾಡಿ

ಚಿಯಾ ಬೀಜದ ಬಗ್ಗೆ ಇನ್ನಷ್ಟು ತಿಳಿಯಲು ಈ ಕೆಳಗಿನ ಉಪಯುಕ್ತ ವಿಡಿಯೋವನ್ನು ನೋಡಿ.

ಸ್ನೇಹಿತರೇ, ಇದಿಷ್ಟು ಚಿಯಾ ಬೀಜದ ಬಗ್ಗೆ ಸಣ್ಣ ಮಾಹಿತಿ ಹಾಗೂ ಕೆಲವು ಪ್ರಮುಖ ಉಪಯೋಗಗಳು. ಈ ಲೇಖನ ನಿಮಗೆ ಉಪಯೋಗಕಾರಿ ಎನಿಸಿದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

5 thoughts on “Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ”

Leave a comment