ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto’s Electa Spec in Kannada

ಈಗೀನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಭಾರತದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಗಳು ಹೇರಳವಾಗಿ ಸೇಲ್ ಆಗುತ್ತಿವೆ.

ಹಲವಾರು ಇಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳು ಈಗ ಲಭ್ಯವಿದೆ. ಹೊಸ ಹೊಸ ಬ್ಯಾಟರಿ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ.

ಹೀಗಿರುವಾಗ ಬ್ರಿಟಿಷ್ ಬ್ರ್ಯಾಂಡ್ ಆದ ಒನ್-ಮೋಟೋ ಎಂಬ ಕಂಪನಿಯು ತನ್ನ ಹೊಸ ಇಲೆಕ್ಟಾ (Electa) ಎಂಬ ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡಿದೆ.

ಗ್ರೀನ್ ಲೈಫ್ ಸೈಕಲ್ ಅನ್ನು ಪ್ರತಿಪಾದಿಸುತ್ತಾ, ಒನ್ ಮೋಟೋ ಕಂಪನಿಯು ಈ ಸ್ಕೂಟರ್ ನ ವಿಶೇಷತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ನೋಡುವುದಕ್ಕೆ ಹಳೆಯ ಕೈನೆಟಿಕ್ ಹೋಂಡಾ ಸ್ಕೂಟರ್ ಅನ್ನೇ ಹೋಲುವ ಈ ಇಲೆಕ್ಟಾ ದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.

ಒನ್ ಮೋಟೋ ಇಲೆಕ್ಟಾ ದ ವಿಶೇಷತೆಗಳು (Electa Features in Kannada)

ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto's Electa Spec in Kannada

ಎಲ್ಲಾ ಕೆಲಸ ಬೇಗ ಆದರೆ ಎಲ್ಲರಿಗೂ ಸಂತೋಷ ಆಗುತ್ತದೆ. ಹಾಗೆಯೇ ಈ ಇಲೆಕ್ಟಾ ಸ್ಕೂಟರ್ ನಲ್ಲಿ ಎಲ್ಲವೂ ವೇಗವಾಗಿ ನಡೆಯುವ ಕೆಲವು ಫೀಚರ್ಸ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಸುಮಾರು 4kW ನ ಪವರ್ ಫುಲ್ ಬೋಷ್ ನ ಬ್ರಶ್ ಲೆಸ್ ಡಿ.ಸಿ ಹಬ್ ಮೋಟಾರ್ ಅನ್ನು ಈ ಸ್ಕೂಟರ್ ಹೊಂದಿದೆ ಹಾಗೂ 72 ವೋಲ್ಟ್ ನ ಲೀಥಿಯಂ ಬ್ಯಾಟರಿಯನ್ನು ಇದರಲ್ಲಿ ಇಡಲಾಗಿದೆ.

ಈ ಬ್ಯಾಟರಿಯನ್ನು ನೀವು ಕೇವಲ 4 ಗಂಟೆಗಳಲ್ಲೇ ಚಾರ್ಜ್ ಮಾಡಬಹುದು. ಉಳಿದ ಇಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ ಇದು ಬಹು ವೇಗವಾಗಿ ಚಾರ್ಜ್ ಆಗುತ್ತದೆ.

ಹೊಸ ಟಾಟಾ ಪಂಚ್ ನೋಡದಿದ್ದರೆ: ಕ್ಲಿಕ್ ಮಾಡಿ

ಕೇವಲ 10 ಸೆಕೆಂಡ್ ಗಳಲ್ಲೇ ಇದರ ಬ್ಯಾಟರಿಯನ್ನು ರೀಪ್ಲೇಸ್ ಮಾಡಬಹುದಾಗಿದೆ ಎಂದು ಒನ್ ಮೋಟೋ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಕಾರ್ಬನ್ ಡೈ ಆಕ್ಸೈಡ್ (CO2) ಅನ್ನು ಇದು ಸಂಪೂರ್ಣವಾಗಿ ವಿರೋಧಿಸುತ್ತದೆ. ಪ್ರಕೃತಿ ಪರಿಸರಕ್ಕೆ ಅನುಗುಣವಾಗುವಂತೆ ಈ ದ್ವಿಚಕ್ರ ವಾಹನವನ್ನು ತಯಾರಿಸಲಾಗಿದೆ.

ಇಲೆಕ್ಟಾ ದ ಬಗ್ಗೆ ಇನ್ನಷ್ಟು (More About Electa in Kannada)

ಪರಿಸರ ಸ್ನೇಹಿ ಇಲೆಕ್ಟಾ ದ ಕೆಲವು ಮುಖ್ಯ ವಿವರಗಳು ಹಾಗೂ ಶೋ ರೂಮ್ ಬೆಲೆ ಈ ಕೆಳಗೆ ಇವೆ.

ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto's Electa Spec in Kannada

ಒಂದು ಸಲ ನೀವು ಈ ಸ್ಕೂಟರ್ ಅನ್ನು ಚಾರ್ಜ್ ಮಾಡಿದರೆ ಇದು ಸುಮಾರು 150KM ಅನ್ನು ಕ್ರಮಿಸಬಲ್ಲದು. ಕೇವಲ 3.3 ಸೆಕೆಂಡ್ ಗಳಲ್ಲೇ 0 ಇಂದ 50 kmph ಅನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಸರಿಸುಮಾರು 85 kmph ನ ಲಿಮಿಟೆಡ್ ಟಾಪ್ ಸ್ಪೀಡ್ ಅನ್ನು ಇದು ಒಳಗೊಂಡಿದೆ. ಇದರ ಹೆಚ್ಚಿನ ವಿವರಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.

ಇಲೆಕ್ಟಾ ದ ವಿವರಗಳು
ಸುತ್ತಳತೆ (L×W×H)1890x720x1090 ಮಿಮಿ
ವೀಲ್ಹ್ ಬೇಸ್1390 ಮಿಮಿ
ಟೈರ್ ಅಳತೆ (ಫ್ರಂಟ್/ರಿಯರ್)90/90 – 12”
ಮೋಟಾರ್ ಪವರ್4kW
ಬ್ಯಾಟರಿ ಕ್ಷಮತೆ72V 45Ah ಲೀಥಿಯಂ ರಿಮೂವೇಬಲ್
ಬ್ಯಾಟರಿ ಚಾರ್ಜಿಂಗ್ ಟೈಮ್4 ಗಂಟೆಗಳು
ಟಾಪ್ ಸ್ಪೀಡ್85 km/h
ಡ್ರೈವ್ ರೇಂಜ್150 km
ಬ್ರೇಕ್ (ಫ್ರಂಟ್/ರಿಯರ್)ಹೈಡ್ರೋಲಿಕ್ ಡಿಸ್ಕ್
ನೆಟ್ ವೇಯ್ಟ್115 ಕೆಜಿ
ಲೋಡ್ ಸಾಮರ್ಥ್ಯ150 ಕೆಜಿ
ಐಚ್ಛಿಕಕ್ರೋಮ್ ಅಪ್ ಗ್ರೇಡ್
ಬೆಲೆ (Ex-showroom Price) ₹1.99 ಲಕ್ಷ ರೂಪಾಯಿಗಳು

ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto's Electa Spec in Kannada

ಇಲೆಕ್ಟಾ ದ ಟೆಕ್ನಿಕಲ್ ವಿವರಗಳು
ಮೋಟಾರ್ ಟೈಪ್ಬ್ರಶ್ ಲೆಸ್ ಡಿಸಿ ಹಬ್ ಮೋಟಾರ್
ಚಾರ್ಜರ್ ಇನ್ ಪುಟ್AC 240V ಅಥವಾ 110V (ಐಚ್ಛಿಕ)
ಚಾರ್ಜರ್ ಔಟ್ ಪುಟ್84V/8A
ಮೀರಿದ ಕರೆಂಟ್ AMP35A
ಅಂಡರ್ ಕರೆಂಟ್ ವೋಲ್ಟೇಜ್60V ±0.5V

ಗೆಳೆಯರೇ, ಇದಿಷ್ಟು ಒನ್ ಮೋಟೋ ಕಂಪನಿಯ ಇಲೆಕ್ಟ್ರಿಕ್ ಸ್ಕೂಟರ್ ಆದ ಇಲೆಕ್ಟಾ ದ (Electa) ಒಂದು ಸಣ್ಣ ವಿವರಣೆ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮವರೊಂದಿಗೆ ಶೇರ್ ಮಾಡಿ.

Leave a comment