Flax seeds in Kannada: ಅಗಸೆ ಬೀಜದ ಉಪಯೋಗವನ್ನು ತಿಳಿಯಿರಿ

ಸಾಮಾನ್ಯವಾಗಿ ಅಗಸೆ ಬೀಜವನ್ನು (flax seeds) ನೀವೆಲ್ಲರೂ ನೋಡಿರುತ್ತೀರಿ. ಆದರೆ ಅದರಿಂದಾಗುವ ಉಪಯೋಗಗಳನ್ನು ಎಂದಾದರೂ ಕೇಳಿದ್ದೀರಾ!?

ನಮ್ಮ ಆರೋಗ್ಯವನ್ನು ಸಾಕಷ್ಟು ಅಭವೃದ್ಧಿ ಪಡಿಸುವ ಶಕ್ತಿ ಈ ಅಗಸೆ ಬೀಜಕ್ಕಿದೆ ಎಂದರೆ ನೀವು ನಂಬಲೇ ಬೇಕು! ಅದು ಹೇಗೆಂದು ತಿಳಿಯೋಣ ಬನ್ನಿ.

ಅಗಸೆ ಬೀಜ ಎಂದರೇನು ? What is Flax Seeds in Kannada

ಅಗಸೆ ಬೀಜಗಳು ಅತೀ ಹೆಚ್ಚು ಪೋಷಕಾಂಶಗಳಿಂದ ಕೂಡಿದ ಬೀಜಗಳಾಗಿದ್ದು, ನಮ್ಮ ದೇಹದಲ್ಲಾಗುವ ಸುಸ್ತನ್ನು ನಿವಾರಣೆ ಮಾಡಿ ಶಕ್ತಿ ಹೆಚ್ಚಿಸುವ ಕೆಲಸವನ್ನು ಇವು ಮಾಡುತ್ತವೆ. ಇದನ್ನು ಇಂಗ್ಲೀಷ್ ನಲ್ಲಿ ಫ್ಲ್ಯಾಕ್ಸ್ ಸೀಡ್ಸ್ (Flax Seeds) ಎಂದು ಕರೆಯುತ್ತಾರೆ.

ಅಗಸೆ ಬೀಜಗಳನ್ನು ಸೇವಿಸುವ ಬಗೆ! How to Eat Flax Seeds in Kannada

ಒಂದು ವೇಳೆ ಈ ಬೀಜಗಳನ್ನು ಹಸಿಯಾಗಿ ತಿನ್ನಲು ನಿಮಗೆ ಸಾಧ್ಯವಾಗದಿದ್ದರೆ ಇದನ್ನು ನೀವು ಹುರಿದು ತಿನ್ನಬಹುದು. ಹೀಗೆ ಹುರಿದು ಸೇವನೆ ಮಾಡುವುದರಿಂದ ಇದರ ರುಚಿ ಹೆಚ್ಚುತ್ತದೆ.

ಕೇವಲ ಒಂದೇ ಒಂದು ಚಮಚದಷ್ಟು ಅಗಸೆ ಬೀಜದಲ್ಲಿ ಸುಮಾರು 37 ಕ್ಯಾಲೋರಿಗಳು ಇವೆಯಂತೆ. ಅತ್ಯಧಿಕ ಪ್ರೋಟೀನ್ ಹಾಗೂ ಫೈಬರ್ ಗಳನ್ನೂ ಕೂಡ ಈ ಬೀಜಗಳು ಹೊಂದಿವೆ.

ಒಂದು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಸಾಮಾನ್ಯವಾಗಿರುತ್ತದೆ.

ಅಗಸೆ ಬೀಜದ ಉಪಯೋಗಗಳು! Benefits of Flax Seeds in Kannada

ರಾತ್ರಿ ಮಲಗುವ ಮುನ್ನ ಅಗಸೆ ಬೀಜದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ನಿಮ್ಮಲ್ಲಿರುವ ಸುಸ್ತು ತಾನಾಗಿಯೇ ಮಾಯವಾಗುತ್ತದೆ ಹಾಗೂ ಒತ್ತಡ ವಿಲ್ಲದ ಆರಾಮದಾಯಕವಾದ ನಿದ್ರೆಯನ್ನು ನೀವು ಪಡೆಯಬಹುದು.

ಇದರಲ್ಲಿರುವ ಕೆಲವು ಪ್ರೋಟೀನ್ ಗಳು ನಮ್ಮ ದೇಹದಲ್ಲಿರುವ ಸಿರೊಟೋನಿನ್ ಎಂಬ ಹಾರ್ಮೋನ್ ಅನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಚಿಯಾ ಬೀಜದ ಉಪಯೋಗವನ್ನು ತಿಳಿಯಿರಿ

ಇವುಗಳು ಒಮೆಗಾ-3 ಮತ್ತು ಒಮೆಗಾ-6 ಎಂಬ ಕೊಬ್ಬಿನ ಆಮ್ಲಗಳನ್ನು ಹೊಂದಿವೆ. ಹಾಗಾಗಿ ಇದರ ಸೇವನೆಯಿಂದ ಮೆದುಳು ಚುರುಕಾಗಿರುತ್ತದೆ.

ಮಾನವನ ಶರೀರದ ಶಕ್ತಿ ಮಟ್ಟವನ್ನು ಅಭಿವೃದ್ಧಿ ಪಡಿಸಿ, ನಮಗಾಗುವ ಆಯಾಸವನ್ನು ಹೋಗಲಾಡಿಸುವ ಸಾಮರ್ಥ್ಯ ಈ ಅಗಸೆ ಬೀಜಕ್ಕಿದೆ. ಹೆಚ್ಚಿನ ನಾರಿನಂಶ ಹೊಂದಿರುವುದರಿಂದ ಆಮ್ಲೀಯತೆ ಹಾಗೂ ಮಲಬದ್ಧತೆ ಯಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.

ಅಷ್ಟೇ ಅಲ್ಲ! ಈ ಬೀಜಗಳು ಚರ್ಮದ ಕಲೆಗಳನ್ನು ನಿಯಂತ್ರಣ ಮಾಡುತ್ತವೆ ಮತ್ತು ಕೂದಲಿಗೆ ಪೋಷಣೆ ನೀಡುತ್ತದೆ. ಊಟದ ನಂತರ ಅಗಸೆ ಬೀಜಗಳನ್ನು ಸೇವನೆ ಮಾಡುವುದರಿಂದ ತೂಕವನ್ನು ಸಹ ಇಳಿಸಿಕೊಳ್ಳಬಹುದು.

ಅಗಸೆ ಬೀಜಗಳು ಎಲ್ಲಿ ಸಿಗುತ್ತದೆ? Where to Buy Flax Seeds

ಈ ಬೀಜಗಳು ಸಾಮಾನ್ಯವಾಗಿ ನಿಮ್ಮ ಹತ್ತಿರದ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತದೆ. ಹಾಗೇನಾದರೂ ಇದು ನಿಮಗೆ ಸಿಗದ ವೇಳೆಯಲ್ಲಿ ನೀವಿದನ್ನು ಆನ್ ಲೈನ್ ನಲ್ಲಿಯೂ ಖರೀದಿ ಮಾಡಬಹುದು.

ಆನ್ ಲೈನ್ ನಲ್ಲಿ ಖರೀದಿ ಮಾಡಲು ಲಿಂಕ್ : Buy Now

ಈ ರೀತಿಯ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಈ ಅಗಸೆ ಬೀಜವನ್ನು ಎಲ್ಲರೂ ತಿನ್ನಲೆ ಬೇಕು. ನಿಮ್ಮವರಿಗೆ ಯಾರಿಗಾದರೂ ಪೋಷಕಾಂಶದ ಕೊರತೆ ಇದ್ದಲ್ಲಿ, ಈ ಲೇಖನವನ್ನು ಅವರೊಂದಿಗೆ ಹಂಚಿಕೊಳ್ಳಿ.

1 thought on “Flax seeds in Kannada: ಅಗಸೆ ಬೀಜದ ಉಪಯೋಗವನ್ನು ತಿಳಿಯಿರಿ”

Leave a comment