ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲಿಯೂ ಬೈಕ್ ಅಥವಾ ಸ್ಕೂಟರ್ ಗಳು ಇದ್ದೇ ಇರುತ್ತವೆ. ಇನ್ನೂ ಆ ಮೋಟಾರ್ ಸೈಕಲ್ ಗಳ ಮೈಲೇಜ್, ಬೆಲೆ, ಮೆನ್ ಟೆನೆನ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ.
ಬೈಕ್ ಗಳನ್ನು ಖರೀದಿ ಮಾಡುವಾಗ ನಾವು ನೂರಾರು ಬಾರಿ ಯೋಚಿಸಿ, ಆ ಬೈಕಾ, ಇಲ್ಲಾ ಈ ಬೈಕಾ ಅಂಥ ಅಲ್ಲಿಲ್ಲಿ ಕೇಳುತ್ತೀವಿ. ಕೊನೆಗೆ ಎಲ್ಲಾ ವಿಷಯಗಳನ್ನು ಅರಿತ ಮೇಲೆ ನಾವು ಆ ಬೈಕ್ ಅನ್ನು ಖರೀದಿಸುತ್ತೇವೆ.
ಭಾರತದಲ್ಲಿ ಹಲವಾರು ಮೋಟಾರ್ ಸೈಕಲ್ ಕಂಪನಿಗಳಿವೆ. ಅದರಲ್ಲಿ ಮಹಿಂದ್ರಾ ಕಂಪನಿ ಕೂಡಾ ಒಂದು. ಕಾರ್ ಗಳಿಗೆ ಫೇಮಸ್ ಆದ ಈ ಮಹಿಂದ್ರಾ ಕಂಪನಿಯವರು ಬೈಕ್ ಗಳನ್ನು ಕೂಡಾ ಬಿಡುಗಡೆ ಮಾಡಿದ್ದರು.
ಆಟೋ ಮೊಬೈಲ್ ಬಗ್ಗೆ ಇನ್ನಷ್ಟು: ಕ್ಲಿಕ್ ಮಾಡಿ
ಆದರೆ ಆ ಬೈಕ್ ಗಳು ಫ್ಲಾಪ್ ಆಗಿದ್ದವು. ಆ ಫ್ಲಾಪ್ ಆದ ಮೋಟಾರ್ ಸೈಕಲ್ ಗಳನ್ನು ನಾವಿಲ್ಲಿ ಲಿಸ್ಟ್ ಮಾಡಿದ್ದೇವೆ.
ಮಹಿಂದ್ರಾ ಮೊಜೋ (Mahindra Mojo in Kannada)
ಅಕ್ಟೊಬರ್ 16, 2015 ರಂದು ಮಹಿಂದ್ರಾ ಕಂಪೆನಿಯು ತನ್ನ ಅಡ್ವೆಂಚರ್ ಟೂರರ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿತು. ಅದುವೇ ಮೋಜೋ.
ಉತ್ತಮ ಸೌಲಭ್ಯಗಳನ್ನು ಈ ಬೈಕ್ ಹೊಂದಿತ್ತಾದರೂ, ಭಾರತದ ಮಾರುಕಟ್ಟೆಯಲ್ಲಿ ಇದು ಜನ ಮನ ಗೆಲ್ಲಲು ವಿಫಲವಾಯಿತು. ಇದರ ಅತೀಯಾದ ಡಿಸೈನ್ ಕೂಡ ಈ ಬೈಕ್ ಅನ್ನು ಫ್ಲಾಪ್ ಮಾಡಿತು ಎನ್ನಬಹುದು.
ಈ ಬೈಕ್ ನ ಕೆಲವು ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ.
ಮೈಲೇಜ್ | 25 ರಿಂದ 30km/L |
ಸೀಟ್ ನ ಎತ್ತರ | 814.5 ರಿಂದ 830 mm |
ಕರ್ಬ್ ವೇಯ್ಟ್ | 160 ರಿಂದ 186.2 kg |
ಇಂಧನ ಟ್ಯಾಂಕ್ ಸಾಮರ್ಥ್ಯ | 21 L |
ಆನ್ ರೋಡ್ ಬೆಲೆ | ₹1,65,003 ರಿಂದ ₹2,59,238 (includes RTO & insurance costs) |
ಇಂಜಿನ್ ಸಾಮರ್ಥ್ಯ | 294.72 cc |
ಬ್ಯಾಟರಿ | 12V |
ಮಹಿಂದ್ರಾ ಸೆಂಚುರೊ (Mahindra Centuro in Kannada)
ಸುಮಾರು 106cc ಯ ಇಂಜಿನ್ ಕ್ಯಾಪಿಸಿಟಿ ಅನ್ನು ಹೊಂದಿದ್ದು, 84km ಕ್ಕೂ ಅಧಿಕ ಮೈಲೇಜ್ ಅನ್ನು ಈ ಬೈಕ್ ನೀಡುತ್ತಿತ್ತು.
ಆದರೂ ಸಹ ಈ ಸೆಂಚುರೊ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಭಾಗವಹಿಸಲಿಲ್ಲ. ಕೊನೆಗೆ ಈ ಮೋಟಾರ್ ಸೈಕಲ್ ಅನ್ನು ಸ್ಥಗಿತಗೊಳಿಸಲಾಯಿತು.
ಈ ಬೈಕ್ ನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ.
ಮೈಲೇಜ್ | 60km/L |
ಸೀಟ್ ನ ಎತ್ತರ | 800 mm |
ಕರ್ಬ್ ವೇಯ್ಟ್ | 126 kg |
ಇಂಧನ ಟ್ಯಾಂಕ್ ಸಾಮರ್ಥ್ಯ | 12.7 L |
ಆನ್ ರೋಡ್ ಬೆಲೆ | ₹49,116 ರಿಂದ ₹71,297 (includes RTO & insurance costs) |
ಇಂಜಿನ್ ಸಾಮರ್ಥ್ಯ | 106.7 cc |
ಬ್ಯಾಟರಿ | 12V |
ಮಹಿಂದ್ರಾ ಗಸ್ಟೊ (Mahindra Gusto in Kannada)
2014 ರಲ್ಲಿ ಭಾರತೀಯ ಮಾರುಕಟ್ಟೆಗೆ ಆಗಮಿಸಿದ ಈ ಸ್ಕೂಟರ್ ಅನ್ನು 2020 ರಲ್ಲಿ ಸ್ಥಗಿತಗೊಳಿಸಲಾಯಿತು. ಸುಮಾರು 50 ರಿಂದ 60km ರವರೆಗೆ ಮೈಲೇಜ್ ಅನ್ನು ಈ ವಾಹನವು ನೀಡುತ್ತಿತ್ತು.
ಒಳ್ಳೆಯ ಲುಕ್ ಹಾಗೂ ಉತ್ತಮ ಇಂಜಿನ್ ಸೌಂಡ್ ಅನ್ನೂ ಸಹ ಈ ಸ್ಕೂಟರ್ ಹೊಂದಿತ್ತು. ಆದರೂ ಈ ವೈಶಿಷ್ಟ್ಯತೆಗಳು ಮಾರ್ಕೆಟ್ ನಲ್ಲಿ ಫಲಿತಾಂಶವನ್ನು ನೀಡಿಲ್ಲ.
ಈ ಸ್ಕೂಟರ್ ನ ಹೆಚ್ಚಿನ ವಿವರ ಈ ಕೆಳಗೆ ನೀಡಿದ್ದೇವೆ.
ಮೈಲೇಜ್ | 50 ರಿಂದ 61km/L |
ಸೀಟ್ ನ ಎತ್ತರ | 735 to 770 mm |
ಕರ್ಬ್ ವೇಯ್ಟ್ | 119 ರಿಂದ 123 kg |
ಇಂಧನ ಟ್ಯಾಂಕ್ ಸಾಮರ್ಥ್ಯ | 6 L |
ಆನ್ ರೋಡ್ ಬೆಲೆ | ₹58,697 ರಿಂದ ₹76,518 (includes RTO & insurance costs) |
ಇಂಜಿನ್ ಸಾಮರ್ಥ್ಯ | 109.6 cc |
ಬ್ಯಾಟರಿ | 12V VRLA |