ಗೂಗಲ್ ಒಪಿನಿಯನ್ ರಿವಾರ್ಡ್ಸ್: Google Opinion Rewards in Kannada

ಆನ್ ಲೈನ್ ನಲ್ಲಿ ಹಣ ಮಾಡುವುದು ಸುಲಭವಲ್ಲ. ಆದರೂ ಕೆಲವು ಒಳ್ಳೆಯ ಅಪ್ಲಿಕೇಶನ್ ಗಳ ಸಹಾಯದಿಂದ ನಾವು ಕುಳಿತಲ್ಲೇ ದುಡ್ಡು ಮಾಡಬಹುದು.

ಈ ಮೇಲಿನ ಮಾತಿಗೆ ಹೋಲುವ ಅಪ್ಲಿಕೇಶನ್ ಒಂದಿದೆ. ಅದುವೇ ಗೂಗಲ್ ಒಪಿನಿಯನ್ ರಿವಾರ್ಡ್ಸ್. ಸ್ವತಃ ಗೂಗಲ್ ಕಂಪೆನಿಯವರೇ ಸೃಷ್ಟಿಸಿರುವ ಈ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಕ್ರೆಡಿಟ್ಸ್ ಗಳನ್ನು ಗಳಿಸಬಹುದು.

ಬಾಕಿ ಉಳಿದ ಡಾಟಾ ಸೇಲ್ ಮಾಡಿ, ಹಣ ಮಾಡಿ: ಕ್ಲಿಕ್ ಮಾಡಿ

ಹಾಗಾದರೆ ಏನಿದು ಒಪಿನಿಯನ್ ರಿವಾರ್ಡ್ಸ್, ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಗೂಗಲ್ ಒಪಿನಿಯನ್ ರಿವಾರ್ಡ್ಸ್ ಎಂದರೇನು (What is Google Opinion Rewards in Kannada)

ಇದೊಂದು ಸರ್ವೇ ಅಪ್ಲಿಕೇಶನ್ ಆಗಿದ್ದು, ಗೂಗಲ್ ನವರೇ ಜನರಿಗೆ ಸಹಾಯ ಆಗಲೆಂದು ರಚಿಸಿದ್ದಾರೆ. ಟೈಮ್ ಪಾಸ್ ಗಾಗಿ ಮತ್ತು ಗೂಗಲ್ ನ ಸರ್ವಿಸ್ ಅನ್ನು ಉತ್ತಮಗೊಳಿಸಲು ಮುಖ್ಯವಾಗಿ ಇದನ್ನು ತಯಾರಿಸಲಾಗಿದೆ.

ಗೂಗಲ್ ರಿವಾರ್ಡ್ಸ್ ಹೇಗೆ ಕೆಲಸ ಮಾಡುತ್ತದೆ (How Google Rewards Work in Kannada)

ನೀವು ಈ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿದ ನಂತರ, ಸ್ವಲ್ಪ ಸ್ವಲ್ಪ ದಿನಗಳಲ್ಲೇ ಕೆಲವು ಪ್ರಶ್ನೆಗಳನ್ನು ಇದು ಕೇಳುತ್ತದೆ.

ಗೂಗಲ್ ಒಪಿನಿಯನ್ ರಿವಾರ್ಡ್ಸ್: Google Opinion Rewards in Kannada

ಎಲ್ಲಾ ಸಮಯದಲ್ಲೂ ಈ ಸರ್ವೆಗಳು ಲಭ್ಯವಿರುದಿಲ್ಲ. ಕೆಲವೊಮ್ಮೆ ಮಾತ್ರ ಇಲ್ಲಿ ನಿಮಗೆ ಸುಲಭವಾದ ಸರ್ವೇಗಳನ್ನು ಕೇಳಲಾಗುತ್ತದೆ. ಇದಕ್ಕೆ ತಪ್ಪಾಗಿ ಉತ್ತರ ಕೊಟ್ಟರೂ ಸಹ ಹಣ ಸಿಗುತ್ತದೆ.

ಸರ್ವೆಗಳು ಲಭ್ಯವಿದ್ದಾಗ, ಇದು ನಿಮ್ಮ ಮೊಬೈಲ್ ಗೆ ನೋಟಿಫಿಕೇಶನ್ ಅನ್ನು ಕಳುಹಿಸುತ್ತದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟರೆ, ಸುಮಾರು ₹32.20 ರ ವರೆಗೆ ಹಣ ಸಿಗುತ್ತದೆ.

ಆದರೆ ನೆನಪಿರಲಿ. ಈ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ. ಬದಲಾಗಿ ನಿಮ್ಮ ಗೂಗಲ್ ಅಕೌಂಟ್ ನ ಪ್ಲೇ ಕ್ರೆಡಿಟ್ ಗೆ ಜಮಾ ಆಗುತ್ತದೆ.

ಫೇಸ್ ಬುಕ್ ವೀವ್ ಪಾಯಿಂಟ್ಸ್ ನಿಂದ ರಿವಾರ್ಡ್ಸ್ ಗೆಲ್ಲಿ: ಕ್ಲಿಕ್ ಮಾಡಿ

ಇಲ್ಲಿ ಸಿಕ್ಕ ಹಣದಿಂದ ನೀವು ಪ್ಲೇ ಸ್ಟೋರ್ ನಲ್ಲಿರುವ ಗೇಮ್ಸ್ ಗಳನ್ನು, ಈ-ಬುಕ್ ಗಳನ್ನು, ಮೂವಿಗಳನ್ನು ಹಾಗೂ ಸಬ್ ಸ್ಕ್ರಿಪ್ಷನ್ ಗಳನ್ನು ಖರೀದಿ ಮಾಡಬಹುದು.

ನಾವಿಲ್ಲಿ ನಮಗೆ ಸಿಕ್ಕ ರಿವಾರ್ಡ್ಸ್ ನ ಸ್ಕ್ರೀನ್ ಶಾಟ್ ಅನ್ನು ನೀಡಿದ್ದೇವೆ. ನಿಮ್ಮಲ್ಲಿ ಯಾರಾದರೂ ಗೇಮ್ಸ್ ಪ್ರೇಮಿಗಳಿದ್ದರೆ, ಅವರಿಗೆ ಈ ಆ್ಯಪ್‌ ಹೆಚ್ಚಿನ ಉಪಯೋಗಕ್ಕೆ ಬರಲಿದೆ.

ಗೂಗಲ್ ಒಪಿನಿಯನ್ ರಿವಾರ್ಡ್ಸ್: Google Opinion Rewards in Kannada

ಯಾವುದೇ ಪರ್ಸನಲ್ ಪ್ರಶ್ನೆಗಳನ್ನು ಇಲ್ಲಿ ಕೇಳುವುದಿಲ್ಲ. ನೀವು ಯೂಟ್ಯೂಬ್ ನಲ್ಲಿ ಈ ವಿಡಿಯೋ ನೋಡಿದ್ದೀರಾ ? ನಿಮಗೆ ಯಾವ ಬಣ್ಣ ಇಷ್ಟ ? ನಿಮಗೆ ಈ ಹಾಡು ಇಷ್ಟವಾಯಿತೇ ? ಹೀಗೆಲ್ಲಾ ಬಹು ಸುಲಭದ ಸರ್ವೇಗಳನ್ನು ಇದು ಕೇಳುತ್ತದೆ ಅಷ್ಟೇ.

ನೀವೇನಾದರೂ ಈ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಲು ಉತ್ಸುಕರಾಗಿದ್ದಾರೆ, ಪ್ಲೇ ಸ್ಟೋರ್ ಅಥವಾ ಆ್ಯಪ್‌ ಸ್ಟೋರ್ ನ ಮೂಲಕ ಇನ್ ಸ್ಟಾಲ್ ಮಾಡಿಕೊಳ್ಳಬಹುದು.

ಗೆಳೆಯರೇ, ಇದಿಷ್ಟು ಗೂಗಲ್ ಒಪಿನಿಯನ್ ರಿವಾರ್ಡ್ಸ್ (Google Opinion Rewards) ನ ಬಗ್ಗೆ ಒಂದು ಸಣ್ಣ ಆಕರ್ಷಕ ಮತ್ತು ಪ್ರಯೋಜನಕಾರಿ ಲೇಖನ. ನಿಮಗೆ ಇಷ್ಟವಾಗಿದ್ದರೆ, ದಯವಿಟ್ಟು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

Leave a comment