ಗೂಗಲ್ ಟಾಸ್ಕ್ ಮೇಟ್ ಮೂಲಕ ಹಣ ಗಳಿಸಿ – Google Task Mate in Kannada

ಆನ್ ಲೈನ್ ನಿಂದ ಹಣ ಗಳಿಸುವುದು ಸುಲಭದ ಕೆಲಸವಲ್ಲ! ಆದರೆ ಕೆಲವೊಂದು ಅಪ್ಲಿಕೇಶನ್ ಗಳ ಸಹಾಯದಿಂದ ನಾವು ಪ್ರತಿನಿತ್ಯ ಹಣ ಸಂಪಾದನೆ ಮಾಡಬಹುದು.

ನಾವಿಲ್ಲಿ ಯಾವುದೋ ರೋಜ್ ಧನ್ ಅಥವಾ ಅರ್ನ್ ಕರೋ ಬಗ್ಗೆ ಹೇಳುತ್ತಿಲ್ಲ. ಬದಲಾಗಿ ಸ್ವತಃ ಗೂಗಲ್ ಸಂಸ್ಥೆಯವರೇ ರಚಿಸಿರುವ ಒಂದು ಅದ್ಭುತವಾದ ಆಪ್ ನ ಬಗ್ಗೆ ಹೇಳ ಹೊರಟಿದ್ದೇವೆ.

ಈ ಅಪ್ಲಿಕೇಷನ್ ನ ಹೆಸರು ಗೂಗಲ್ ಟಾಸ್ಕ್ ಮೇಟ್ [Google Task Mate] ಅಂತ. ನೀವೂ ಸಹ ಇದನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಇನ್ ಸ್ಟಾಲ್ ಮಾಡಿಕೊಳ್ಳಬಹುದು.

ಏನಿದು ಗೂಗಲ್ ಟಾಸ್ಕ್ ಮೇಟ್ (Google Task Mate in Kannada)

ಮೊದಲೇ ತಿಳಿಸಿದಂತೆ ಇದು ಸ್ವತಃ ಗೂಗಲ್ ಕಂಪನಿಯವರೇ ರಚಿಸಿರುವ ಅಪ್ಲಿಕೇಶನ್ ಆಗಿದೆ. ಇದರ ಮೂಲಕ ಸುಲಭವಾಗಿ ಸಾವಿರಾರು ರೂಪಾಯಿಗಳನ್ನು ದುಡಿಯಬಹುದು.

ಗೂಗಲ್ ಟಾಸ್ಕ್ ಮೇಟ್ ಮೂಲಕ ಹಣ ಗಳಿಸಿ - Google Task Mate in Kannada

ಗೂಗಲ್ ನ ಸರ್ಚ್ ರಿಸಲ್ಟ್ ಗಳನ್ನು ಇನ್ನಷ್ಟು ಉತ್ತಮಗೊಳಿಸಲು ಈ ಆಪ್ ಅನ್ನು ತಯಾರಿಸಲಾಗಿದೆ.

ಟಾಸ್ಕ್ ಮೇಟ್ ಅನ್ನು ಬಳಸುವುದು ಹೇಗೆ (How to Use Google Task Mate in Kannada)

ಇದನ್ನು ಇನ್ ಸ್ಟಾಲ್ ಮಾಡಿ ಬಳಸುವುದು ತುಂಬಾ ಸುಲಭ. ಸಧ್ಯಕ್ಕೆ ಇದು ಬೀಟಾ ಮೋಡ್ ನಲ್ಲಿದ್ದು, ಆಯ್ದ ಕೆಲವು ಟೆಸ್ಟರ್ ಗಳಿಗೆ ಮಾತ್ರ ತನ್ನ ರೆಫರಲ್ ಕೋಡ್ [Referral Code] ಅನ್ನು ನೀಡುತ್ತಿದೆ.

ಇದನ್ನೂ ಓದಿ: ಬ್ರೇವ್ ರಿವಾರ್ಡ್ಸ್ ಮೂಲಕ ಹಣ ಗಳಿಸಿ

ಸಧ್ಯದಲ್ಲೇ ಈ ಅಪ್ಲಿಕೇಶನ್ ಅನ್ನು ದೇಶದ ಎಲ್ಲಾ ಜನರಿಗೂ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಗೂಗಲ್ ಟಾಸ್ಕ್ ಮೇಟ್ ಬಿಡುಗಡೆಯಾದ ಬಳಿಕ ಸುಲಭವಾಗಿ ದುಡ್ಡು ಮಾಡಬಹುದು ಎನ್ನುವುದನ್ನು ಇವರ ಕೆಲವು ಸ್ಕ್ರೀನ್ ಶಾಟ್ ಗಳು ತಿಳಿಸುತ್ತವೆ.

ಈ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿದ ಬಳಿಕ ನಿಮಗೆ ಕೆಲವು ಟಾಸ್ಕ್ ಗಳನ್ನು ಇದು ನೀಡುತ್ತದೆ.

ಉದಾಹರಣೆಗೆ ಹತ್ತಿರದ ರೆಸ್ಟೋರೆಂಟ್ ಗಳ ಫೋಟೋಗಳನ್ನು ತೆಗೆಯುವುದು, ಸರ್ವೇಗಳನ್ನು ಪೂರ್ಣ ಮಾಡುವುದು ಹಾಗೂ ಪದಗಳನ್ನು ಅನುವಾದಿಸುವುದು.

ಇದು ಸಿಟ್ಟಿಂಗ್ ಟಾಸ್ಕ್ ಮತ್ತು ಫೀಲ್ಡ್ ಟಾಸ್ಕ್ ಎಂಬ ಎರಡು ಭಾಗಗಳನ್ನು ಹೊಂದಿದ್ದು, ಇದರ ಮೂಲಕ ವಿಧ ವಿಧವಾದ ರೀತಿಯಲ್ಲಿ ಹಣ ಮಾಡಬಹುದು.

ಗೂಗಲ್ ಟಾಸ್ಕ್ ಮೇಟ್ ನ ಪೇಮೆಂಟ್ (Google Task Mate Withdraw in Kannada)

ನಾವು ಗಳಿಕೆ ಮಾಡಿದ ಹಣವನ್ನು ವಿಥ್ ಡ್ರಾ ಮಾಡುವುದು ಹೇಗೆ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರ ನಿಮ್ಮ ಲೋಕಲ್ ಕರೆನ್ಸಿ. ಹೌದು, ಇದರಲ್ಲಿ ನಿಮಗೆ ಇಷ್ಟ ಬಂದ ಪೇಮೆಂಟ್ ಆಯ್ಕೆ ಇರುತ್ತದೆ.

ಗೂಗಲ್ ಟಾಸ್ಕ್ ಮೇಟ್ ಮೂಲಕ ಹಣ ಗಳಿಸಿ - Google Task Mate in Kannada

ಮೊದಲಿಗೆ ನಿಮಗೆ ನೀಡುವ ವ್ಯಾಲೆಟ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಜೋಡಿಸಿಕೊಳ್ಳಬೇಕು. ನಂತರ ನಿಮ್ಮ ವ್ಯಾಲೆಟ್ ನಲ್ಲಿರುವ ಹಣವನ್ನು ನೇರವಾಗಿ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಬಹುದು.

ಇದಿಷ್ಟು ಗೂಗಲ್ ಟಾಸ್ಕ್ ಮೇಟ್ ಬಗ್ಗೆ ಸಣ್ಣ ಮಾಹಿತಿ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇನ್ನು ನಿಮಗೆ ಈ ಅಪ್ಲಿಕೇಷನ್ ಬಗ್ಗೆ ಯಾವುದಾದರೂ ಸಂದೇಹವಿದ್ದರೆ, ಕಮೆಂಟ್ ಮೂಲಕ ತಿಳಿಸಿ.

Leave a comment