ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ನಿಮ್ಮ ಮೊಬೈಲ್ ನಲ್ಲೂ ದೈನಂದಿನ ಇಂಟರ್ ನೆಟ್ ಡಾಟಾ ಉಳಿಯುತ್ತದೆಯೇ ? ಹಾಗಾದರೆ ಈ Honeygain ಆ್ಯಪ್‌ ಈಗಲೇ ಇನ್ ಸ್ಟಾಲ್ ಮಾಡಿಕೊಳ್ಳಿ.

ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಬಾಕಿ ಉಳಿದ ಡಾಟಾವನ್ನು ಶೇರ್ ಮಾಡಿಕೊಳ್ಳಬಹುದು. ಅದಕ್ಕೆ ಪ್ರತಿಯಾಗಿ ನಿಮಗೆ ಹಣ ಸಿಗುತ್ತದೆ.

ಹಾಗಾದರೆ ಎಷ್ಟು ಡಾಟಾ, ಎಷ್ಟು ಹಣ ಎಲ್ಲವನ್ನೂ ತಿಳಿಯೋಣ ಬನ್ನಿ. ಆದರೆ ಅದಕ್ಕೂ ಮೊದಲು, ಹನಿಗೈನ್ (Honeygain) ಆ್ಯಪ್‌ ನ ಬಗ್ಗೆ ವಿವರವಾಗಿ ತಿಳಿಯೋಣ.

ಹನಿಗೈನ್ ಎಂದರೇನು (What is Honeygain in Kannada)

ಇದೊಂದು ಇಂಟರ್ನೆಟ್ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಆಗಿದೆ. ಇದರ ಮೂಲಕ ನಿಮ್ಮ ಬಾಕಿ ಉಳಿದ ದೈನಂದಿನ ಮೊಬೈಲ್ ಡಾಟಾವನ್ನು ಸೇಲ್ ಮಾಡಿ, ಹಣ ಗಳಿಸಬಹುದಾಗಿದೆ.

ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ಒಂದೇ ಒಂದು MB ಯನ್ನು ಸಹ ಇದು ಉಳಿಯಲು ಬಿಡುವುದಿಲ್ಲ. ಇದರ ಮೂಲಕ ನೀವೂ ಸಹ ಪ್ಯಾಸಿವ್ ಇನ್ ಕಮ್ ಮಾಡಬಹುದು ಎಂದು Honeygain ನ ಅಧಿಕೃತ ವೆಬ್ ಸೈಟ್ ನಲ್ಲಿ ಬರೆಯಲಾಗಿದೆ.

ಹನಿಗೈನ್ ಹೇಗೆ ಕೆಲಸ ಮಾಡುತ್ತದೆ (How does Honeygain Work in Kannada)

ಇದು ನಿಮ್ಮ ಉಳಿದ ಮೊಬೈಲ್ ಡಾಟಾವನ್ನು ಬಳಸಿಕೊಂಡು ಹಲವು ಪ್ರತಿಷ್ಠಿತ ಕಂಪನಿಗಳಿಗೆ ಪ್ರಾಕ್ಸಿ (Proxy) ಸರ್ವಿಸ್ ಅನ್ನು ನೀಡುತ್ತದೆ. ಉದಾಹರಣೆಗೆ, ಡಾಟಾ ಸೈನ್ಟಿಸ್ಟ್, ಫಾರ್ಚೂನ್ 500 ಹಾಗೂ ಇತ್ಯಾದಿ.

ಫೇಸ್ ಬುಕ್ ವೀವ್ ಪಾಯಿಂಟ್ಸ್ ನಲ್ಲಿ ರಿವಾರ್ಡ್ಸ್ ಗೆಲ್ಲಿರಿ: ಕ್ಲಿಕ್ ಮಾಡಿ

ಈ ಅಪ್ಲಿಕೇಷನ್ ನ ನೆಟ್ ವರ್ಕ್ ನಲ್ಲಿ ಹಲವು ಇ-ಕಾಮರ್ಸ್, ಮಾರ್ಕೆಟ್ ರೀಸರ್ಚ್ ಕಂಪನಿಗಳು, ಬ್ರ್ಯಾಂಡ್ ಪ್ರೊಟೆಕ್ಷನ್ ಹಾಗೂ ವೆಬ್ ಇಂಟೆಲಿಜೆಂಟ್ ಕಂಪನಿಗಳು ಹೊಂದಿಕೊಂಡಿವೆ.

ಹನಿಗೈನ್ ನಲ್ಲಿ ಹಣ ಮಾಡಿ (Earn Money on Honeygain in Kannada)

ಹೆಚ್ಚಿನ ಜನರು ಹಣ ಮಾಡುವುದಕ್ಕೆಂದೇ ಈ ಅಪ್ಲಿಕೇಷನ್ ಅನ್ನು ಇನ್ ಸ್ಟಾಲ್ ಮಾಡುತ್ತಾರೆ. ಹಾಗಾದರೆ ಈ ಹನಿಗೈನ್ ಎಷ್ಟು ಹಣ ನೀಡುತ್ತದೆ ?

ಸಾಮಾನ್ಯವಾಗಿ ಇದರಲ್ಲಿ 10MB ಗೆ 1 ಕ್ರೆಡಿಟ್ ಪಾಯಿಂಟ್ ಸಿಗುತ್ತದೆ. ಅಂದರೆ ಸುಮಾರು 10GB ಗೆ 1000 ಕ್ರೆಡಿಟ್ ಪಾಯಿಂಟ್ ಗಳು ಲಭಿಸುತ್ತದೆ.

ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ಇದರಲ್ಲಿ 1000 ಪಾಯಿಂಟ್ ಗಳಿಗೆ (10GB ಗೆ) $1 ಸಿಗುತ್ತದೆ. ಈಗಿನ ಸಮಯದಲ್ಲಿ $1 ಎಂದರೆ ₹75 ರೂಪಾಯಿಗಳು.

ಒಂದು ವೇಳೆ ನಿಮಗೆ ಇನ್ನೂ ಹೆಚ್ಚಿನ ಹಣ ಬೇಕೆಂದರೆ, ನಿಮ್ಮಲ್ಲಿರುವ ಉಳಿದ ಡಿವೈಸ್ ಗಳಲ್ಲಿಯೂ ಈ ಹನಿಗೈನ್ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಿ. ಆದರೆ ಯಾವುದೇ VPN ಗಳನ್ನು ಬಳಸಬೇಡಿ.

ಮೊಬೈಲ್ ನೆಟ್ ವರ್ಕ್ ಅನ್ನು ಚೇಂಜ್ ಮಾಡುವುದರಿಂದ ಸ್ವಲ್ಪ ಹೆಚ್ಚು ದುಡ್ಡು ಸಂಪಾದಿಸಿಬಹುದು. ವಿಶೇಷವೆಂದರೆ ವೈಫೈ ಡಾಟಾ ಮೂಲಕವೂ ನೀವು ಹಣ ಮಾಡಬಹುದು.

ನಿಮ್ಮ ಗೆಳೆಯರಿಗೆ ಹಾಗೂ ಮನೆಯವರಿಗೆ ಈ ಅಪ್ಲಿಕೇಶನ್ ಅನ್ನು ನೀವು ರೆಫರ್ ಮಾಡಬಹುದು. ಅವರು Honeygain ಅನ್ನು ನಿಮ್ಮ ರೆಫರಲ್ ಲಿಂಕ್ ಮೂಲಕ ಇನ್ ಸ್ಟಾಲ್ ಮಾಡಿದರೆ, ನಿಮಗೆ ಅವರ 10% (ಕಮಿಷನ್) ಹಣ ಸಿಗುತ್ತದೆ.

ನಮ್ಮ ಹನಿಗೈನ್ ನ ರೆಫರಲ್ ಲಿಂಕ್ ಇಲ್ಲಿದೆ ನೋಡಿ: ಕ್ಲಿಕ್ ಮಾಡಿ

ಸೂಚನೆ
ಒಂದು ವೇಳೆ ನೀವು ನಮ್ಮ ರೆಫರಲ್ ಕೊಂಡಿಯ ಮೂಲಕ ಹನಿಗೈನ್ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿದರೆ, $5 (₹375) ನ ಬೋನಸ್ ಸಿಗುತ್ತದೆ.

ಹನಿಗೈನ್ ಎಷ್ಟು ಸೇಫ್ (Is Honeygain Safe in Kannada)

ಇವರ ಲೋಗೋ ಹೇಳುವಂತೆ, ಗ್ರಾಹಕರು ಅವರ ರಾಣಿ ಜೇನಿನಂತೆ. ನಿಮ್ಮ ಪರ್ಸನಲ್ ಡಾಟಾಗಳನ್ನು ಯಾವುದೇ ರೀತಿಯಲ್ಲೂ ಅವರು ಲೀಕ್ ಮಾಡುವುದಿಲ್ಲ.

ನಿಮ್ಮ ಇಮೈಲ್ ಅಡ್ರೆಸ್, ಐಪಿ ಲೊಕೇಶನ್ ಹಾಗೂ ಪೇಔಟ್ ಮೆಥಡ್ ಗಳಿಗೆ ಬೇಕಾಗುವ ಕೆಲವು ಸಾಮಾನ್ಯ ಇನ್ ಫಾರ್ಮೇಷನ್ ಗಳನ್ನು ಮಾತ್ರವೇ ಇದರಲ್ಲಿ ಕೇಳಲಾಗುತ್ತದೆ.

ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ಸುರಕ್ಷಿತ ಹಾಗೂ ದುರ್ಗಮ ಪ್ರೈವೇಟ್ ಸರ್ವರ್ ಗಳನ್ನು ಇವರು ಬಳಸುತ್ತಾರೆ. ಹಾಗಾಗಿ ಹ್ಯಾಕರ್ಸ್ ಗಳಿಗೆ ಹನಿಗೈನ್ ನ ಸರ್ವರ್ ಗಳನ್ನು ಹ್ಯಾಕ್ ಮಾಡುವುದು ಸುಲಭದ ಮಾತಲ್ಲ.

ಹನಿಗೈನ್ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (Withdraw Money from Honeygain in Kannada)

ಕನಿಷ್ಠ $20 ಡಾಲರ್ ಗೆ ನಿಮ್ಮ ವ್ಯಾಲೆಟ್ ತಲುಪಿದ ಮೇಲೆ ನೀವು ನಿಮ್ಮ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು.

ಜನಪ್ರಿಯ ಪೇಮೆಂಟ್ ಗೇಟ್ ವೇ ಗಳಾದ ಪೇಪಾಲ್ ಅಥವಾ ಬಿಟ್ ಕಾಯಿನ್ ಮೂಲಕ ನಿಮ್ಮ ಹಣವನ್ನು ವಿಥ್ ಡ್ರಾ ಮಾಡಿಕೊಳ್ಳಬಹುದು.

ಹನಿಗೈನ್ ನ ಹಲವು ಕಂಟೆಸ್ಟ್ ಗಳ ಮೂಲಕ ನೀವು ಅಧಿಕ ಹಣವನ್ನು ಗಳಿಸಬಹುದು. ಇವರ ಕಂಟೆಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ಕಾಣಬಹುದು.

ಸ್ನೇಹಿತರೇ ಇದಿಷ್ಟು ಹನಿಗೈನ್ ಅಪ್ಲಿಕೇಶನ್ ನ ಒಂದು ಸಣ್ಣ ವಿಮರ್ಶೆ. ಯಾವುದೇ ರೀತಿಯಲ್ಲಿಯೂ ನಾವು ಈ ಆ್ಯಪ್‌ ಅನ್ನು ಪ್ರಮೋಟ್ ಮಾಡುತ್ತಿಲ್ಲ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.


Posted

in

by

Comments

Leave a Reply

Your email address will not be published. Required fields are marked *