ಕನ್ನಡ ವೆಬ್ ಸೈಟ್ ಗಳನ್ನು ಮಾಡುವುದು ಹೇಗೆ | How to Make Kannada Blogs

ಸ್ನೇಹಿತರೇ ನಿಮ್ಮಲ್ಲಿ ಕೆಲವರಿಗೆ Kannada Blogs ಅಥವಾ Kannada Website ಗಳನ್ನು ತಯಾರಿಸಬೇಕು ಎಂದು ಅನಿಸಿರಬಹುದು.

ನೀವು ಇದು ತುಂಬಾ ಕಷ್ಟದ ಕೆಲಸ ಅಂದು ಕೊಂಡಿರಬಹುದು. ಆದರೆ ನಿಮ್ಮ ಆಲೋಚನೆ ತಪ್ಪು. ಯಾಕೆಂದರೆ ಕನ್ನಡ ಬ್ಲಾಗ್ [Kannada Blogs] ಅನ್ನು ತಯಾರಿಸುವುದು ಬಹು ಸುಲಭ.

ನಿಮ್ಮಲ್ಲಿ ಕ್ರಿಯೆಟಿವಿಟಿ ಇದ್ದರೆ, ಕೆಲವೇ ಗಂಟೆಗಳಲ್ಲೇ ನೀವೂ ಕೂಡ ನಮ್ಮ ತರಹದ ಬ್ಲಾಗ್ ಅನ್ನು ರಚಿಸಬಹುದು.

ಆದರೆ ಒಂದು ವಿಷಯ ಸದಾ ನೆನಪಿನಲ್ಲಿಡಿ. ಅದೇನೆಂದರೆ, ಬ್ಲಾಗ್ ಮತ್ತು ವೆಬ್ ಸೈಟ್ ಎರಡೂ ಒಂದೇ ಅಲ್ಲ. ಇವೆರಡಕ್ಕೂ ತುಂಬಾನೇ ವ್ಯತ್ಯಾಸ ಇದೆ.

ಬ್ಲಾಗ್ ಎಂದರೇನು (What is Blog in Kannada)

ಮೊದಲಿಗೆ ಬ್ಲಾಗ್ ಎಂದರೆ ಹಲವಾರು ವಿಷಯಗಳನ್ನು ನೀಡುವ ಪೇಜ್ ಆಗಿದೆ. ಉದಾಹರಣೆಗೆ ನಮ್ಮ ಬ್ಲಾಗ್ ಅನ್ನು ನೋಡಿ. ಇಲ್ಲಿ ನಿಮಗೆ ವಿಧ ವಿಧವಾದ ಕಂಟೆಂಟ್ ಗಳನ್ನು ನಾವು ನೀಡುತ್ತೇವೆ. ಇದನ್ನೇ ಬ್ಲಾಗ್ ಎಂದು ಕರೆಯುತ್ತಾರೆ.

ಕನ್ನಡ ವೆಬ್ ಸೈಟ್ ಗಳನ್ನು ಮಾಡುವುದು ಹೇಗೆ | How to Make Kannada Blogs

ಬ್ಲಾಗ್ ಗಳು ತರ ತರಹದ ಭಾಷೆಗಳನ್ನು ಹೊಂದಿರಬಹುದು. ಆದರೆ ಅವುಗಳಲ್ಲಿ ಇರುವ ಕಂಟೆಂಟ್ ಒಂದೇ ಆಗಿರಬಹುದು.

ಅಂದರೆ ಒಂದೇ ವಿಧವಾದ ನ್ಯೂಸ್, ಟೆಕ್ ನ್ಯೂಸ್ ಅಥವಾ ಇನ್ಯಾವುದೇ ಆರ್ಟಿಕಲ್ ಆಗಿರಬಹುದು. ಇವುಗಳ ಮೂಲ ಉದ್ದೇಶ ಒಂದೇ ಆಗಿದೆ.

ವೆಬ್ ಸೈಟ್ ಎಂದರೇನು (What is Website in Kannada)

ಈ ವೆಬ್ ಸೈಟ್ ಗಳು ಬ್ಲಾಗ್ ಗಳಿಗಿಂತ ಬೇರೆಯೇ ಆಗಿರುತ್ತದೆ. ಅಂದರೆ ಇಲ್ಲಿ ಯಾವುದೇ ತರಹದ ಲೇಖನಗಳು ಇರುವುದಿಲ್ಲ. ಬದಲಾಗಿ ಇಲ್ಲಿ ನಿಮಗೆ ಬಿಸ್ ನೆಸ್ ಪ್ರೊಫೈಲ್ ಗಳು ಅಥವಾ ಇನ್ಯಾವುದೇ ಇನ್ ಫಾರ್ಮೇಷನ್ ಗಳು ಕಾಣಲಿಕ್ಕೆ ಸಿಗುತ್ತದೆ.

ಉದಾಹರಣೆಗೆ ವೆಬ್ ಸೈಟ್ ಗಳಲ್ಲಿ ನಿಮಗೆ ಕಂಪನಿಗಳ ಪ್ರೊಫೈಲ್ ಗಳು ಅಥವಾ ರಿಜಿಸ್ಟ್ರೇಷನ್ ವೆಬ್ ಸೈಟ್ ತಾಣಗಳು.

ಆದರೆ ಒಮ್ಮೆ ನೀವು ಡೊಮೈನ್ ನೇಮ್ ಮತ್ತು ವೆಬ್ ಹೋಸ್ಟಿಂಗ್ ಅನ್ನು ಖರೀದಿಸಿದ ಮೇಲೆ, ಅದರಲ್ಲಿ ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡುವ ಮೊದಲು ನೀವು ನಿರ್ಧಾರ ಮಾಡಬೇಕು.

ಕನ್ನಡ ವೆಬ್ ಸೈಟ್ ಗಳನ್ನು ಮಾಡುವುದು ಹೇಗೆ | How to Make Kannada Blogs

ಅದೇನೆಂದರೆ ನೀವು ವೆಬ್ ಸೈಟ್ ಮಾಡ ಹೊರಟಿದ್ದೀರೋ ಅಥವಾ ಬ್ಲಾಗ್ ಮಾಡುತಿದ್ದಿರೋ ಅಂತ.

ಕನ್ನಡ ಬ್ಲಾಗ್ ಅನ್ನು ತಯಾರಿಸುವುದು ಹೇಗೆ (How to Create Kannada Blogs)

ಈ ಮೊದಲೇ ಹೇಳಿದಂತೆ, ಬ್ಲಾಗ್ ಅನ್ನು ತಯಾರಿಸಲು ವೆಬ್ ಹೋಸ್ಟಿಂಗ್ ಮತ್ತು ಡೊಮೈನ್ ನೇಮ್ ನ ಅಗತ್ಯ ವಿದೆ. ಇವೆರಡೂ ಬ್ಲಾಗ್ ರಚಿಸಲು ಮುಖ್ಯವಾಗಿ ಬೇಕಾಗಿರುವ ವಸ್ತುಗಳು.

ಡೊಮೈನ್ ನೇಮ್ & ವೆಬ್ ಹೋಸ್ಟಿಂಗ್ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದಿದ್ದರೆ, ಈ ಮೇಲಿನ ಹಸಿರು ಬಣ್ಣದ ಪದಗಳ ಮೇಲೆ ಕ್ಲಿಕ್ ಮಾಡಿ.

ಇವೆರಡನ್ನೂ ಖರೀದಿಸಿದ ನಂತರ ಇವುಗಳನ್ನು ಒಂದಕ್ಕೊಂದು ಜೋಡಿಸಬೇಕು. ಈ ಪ್ರಕ್ರಿಯೆಯನ್ನು ನೀವು ಯೂಟ್ಯೂಬ್ ನಲ್ಲಿ ನೋಡಬಹುದು.

ನಂತರ ಇದರಲ್ಲಿ ನೀವು ಒಂದು ಸಾಫ್ಟ್ ವೇರ್ ಅನ್ನು ಇನ್ ಸ್ಟಾಲ್ ಮಾಡಬೇಕು. ಅದುವೇ ವರ್ಡ್ ಪ್ರೆಸ್. ಇದೊಂದು ಜನಪ್ರಿಯ ಸಾಫ್ಟ್ ವೇರ್ ಆಗಿದೆ.

ಇವೆಲ್ಲಾ ಕೆಲಸ ಮುಗಿದ ಮೇಲೆ ನಿಮಗೆ ಇಷ್ಟ ಬಂದ ಥೀಮ್ ಗಳನ್ನು ಇನ್ ಸ್ಟಾಲ್ ಮಾಡಿಕೊಂಡು, ಲೇಖನಗಳನ್ನು ಬರೆಯಬಹುದು.

ಬ್ಲಾಗ್ ಅನ್ನು ಗೂಗಲ್ ನಲ್ಲಿ ತೋರಿಸುವುದು ಹೇಗೆ (How to Make Your Kannada Blog Live)

ಎಲ್ಲಾ ತಯಾರಾದ ಮೇಲೆ ಬಹು ಮುಖ್ಯವಾದ ಕೆಲಸವೊಂದಿದೆ. ಅದುವೇ SEO. ಈ ಮೊದಲೇ ನಾವು SEO ಬಗ್ಗೆ ಲೇಖನ ಒಂದನ್ನು ಬರೆದಿದ್ದೇವೆ.

ಕನ್ನಡ ವೆಬ್ ಸೈಟ್ ಗಳನ್ನು ಮಾಡುವುದು ಹೇಗೆ | How to Make Kannada Blogs

ಈ SEO ಅನ್ನು ಮಾಡಿದ ಮೇಲೆ ನಿಮ್ಮ ಬ್ಲಾಗ್ ತಾನಾಗಿಯೇ ಗೂಗಲ್ ನಲ್ಲಿ ಕಾಣಲು ಪ್ರಾರಂಭವಾಗುತ್ತದೆ. ಅದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಲೇಖನಗಳನ್ನು ಶೇರ್ ಮಾಡಿ.

ಕನ್ನಡ ಬ್ಲಾಗ್ ಮೂಲಕ ಹಣ ಮಾಡಿ (Earn Money from Kannada Blog)

ನಿಮ್ಮ ಬ್ಲಾಗ್ ಸಂಪೂರ್ಣವಾಗಿ ತಯಾರಾದ ಮೇಲೆ, ಕೊನೆಗೆ ನೀವು ನಿಮ್ಮ ಬ್ಲಾಗ್ ಅನ್ನು ಮೊನಿ ಟೈಸ್ ಮಾಡಬೇಕು. ಅಂದರೆ ಅದರಿಂದ ಹಣ ಬರುವ ಹಾಗೆ ಮಾಡಬೇಕು.

ಬ್ಲಾಗ್ ಗಳಿಂದ ಹಣ ಗಳಿಸುವುದಕ್ಕೆ ಇರುವ ಜನಪ್ರಿಯ ಫ್ಲ್ಯಾಟ್ ಫಾರ್ಮ್ ಎಂದರೆ Google Adsense. ಇದು ನಿಮ್ಮ ಬ್ಲಾಗ್ ನಲ್ಲಿ ಜಾಹೀರಾತುಗಳನ್ನು ಸರ್ವ್ ಮಾಡುವ ಕೆಲಸ ಮಾಡುತ್ತದೆ.

ಗೂಗಲ್ Adsense ಮೂಲಕ ಸಮ್ಮತಿ ಪಡೆಯಲು ನೀವು ಅವರ ಕೆಲವು ಪಾಲಿಸಿಗಳು ಹಾಗೂ ಗೈಡ್ ಲೈನ್ಸ್ ಗಳನ್ನು ಪಾಲಿಸಬೇಕು.

ಸ್ನೇಹಿತರೇ ಇದಿಷ್ಟು ಬ್ಲಾಗ್ ಹಾಗೂ ವೆಬ್ ಸೈಟ್ ಗಳ ಬಗ್ಗೆ ಕನ್ನಡದಲ್ಲಿ ಒಂದು ಸಣ್ಣ ಮಾಹಿತಿ. ನಿಮಗೆ ಇಷ್ಟವಾಗಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

3 thoughts on “ಕನ್ನಡ ವೆಬ್ ಸೈಟ್ ಗಳನ್ನು ಮಾಡುವುದು ಹೇಗೆ | How to Make Kannada Blogs”

Leave a comment