Kalonji Seeds in Kannada: ಕಪ್ಪು ಜೀರಿಗೆಯ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ಜೀರಿಗೆ ಬಗ್ಗೆ ತಿಳಿದಿರುವ ನಿಮಗೇ ಕಪ್ಪು ಜೀರಿಗೆ ಎನ್ನುವ ಹೆಸರು ತುಂಬಾ ಅಪರೂಪ ಆಗಿರಬಹುದು. ಕೊಳಂಜಿ ಅಥವಾ ಕಪ್ಪು ಜೀರಿಗೆ (Kalonji Seeds in Kannada) ಅಂದರೆ ಏನು ಮತ್ತು ಅದರ ಅನುಕೂಲ ಅನಾನುಕೂಲಗಳನ್ನು ತಿಳಿದುಕೊಳ್ಳೋಣ.

ಕಪ್ಪು ಜೀರಿಗೆ ಅಂದರೆ ಏನು? What is Kalonji Seeds in Kannada

ಸಾಮಾನ್ಯವಾದ ಜೀರಿಗೆ ಅನ್ನು ನಾವೆಲ್ಲರೂ ನೋಡಿರುತ್ತಿವಿ. ಅದೇ ರೀತಿ ಆಗಿ ಕಪ್ಪು ಜೀರಿಗೆಯೂ (kalonji seeds) ಕೇವಲ ಬಣ್ಣದಲ್ಲಿ ಮಾತ್ರ ಬದಲಾವಣೆ ಅನ್ನು ಹೊಂದಿರುತ್ತದೆ. ಇದನ್ನು ಇಂಗ್ಲಿಷ್ನಲ್ಲಿ ಕೊಳಂಜಿ ಸೀಡ್ಸ್ ಎಂದು ಕರೆಯಲಾಗುತ್ತದೆ.

ಈ ಪುಟ್ಟ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಗಳು ಮುಖ್ಯವಾಗಿ ವಿಟಮಿನ್ ಡಿ, ಪ್ರೊಟೀನ್, ಕಬ್ಬಿಣ, ಕರಗದ ನಾರು, ಸೋಡಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಇರುತ್ತದೆ.

ಈ ಗಿಡಗಳನ್ನು ಸಾಮಾನ್ಯವಾಗಿ ಹೂ ಕುಂಡಗಳಲ್ಲಿ ಕೂಡ ಬೆಳೆಸಬಹುದು. ಬೀಜಗಳನ್ನು ಕೊಡುವ ಹಣ್ಣಿನ ರೂಪದಲ್ಲಿ ಈ ಗಿಡವು ಕಂಡುಬರುತ್ತದೆ.

ಕಪ್ಪು ಜೀರಿಗೆ ಅನ್ನು ಬಳಸುವುದು ಹೇಗೆ? How to Use Kalonji Seeds in Kannada

ಕಪ್ಪು ಜೀರಿಗೆ ಅನ್ನು ಬಳಕೆ ಮಾಡುವ ವಿಧಾನವೂ ತುಂಬಾ ಸರಳವಾಗಿರುತ್ತದೆ. ಇದನ್ನು ಮುಖ್ಯವಾಗಿ ಎರಡು ರೀತಿಯಾಗಿ ಉಪಯೋಗಿಸಬಹುದು. ಅಂದರೆ ಕಪ್ಪು ಜೀರಿಗೆ ಅನ್ನು ನೀವು ಸೇವನೆ ಕೂಡ ಮಾಡಬಹುದು. ಮತ್ತು ಅದರ ಜೊತೆಗೆ ಕಪ್ಪು ಜೀರಿಗೆಯ ಎಣ್ಣೆಯನ್ನು ಸಹ ತಯಾರಿಸಿಕೊಳ್ಳಬಹುದು.

ಕಪ್ಪು ಜೀರಿಗೆಯನ್ನು ನೀವು ಸೇವನೆ ಮಾಡುವುದಾದರೆ ಮೂರು ಬೆರಳುಗಳಲ್ಲಿ ಸಿಗುವಷ್ಟು ಕಪ್ಪು ಜೀರಿಗೆಯ ಕಾಲುಗಳನ್ನು ಸೇವನೆ ಮಾಡಬೇಕು. ಅಥವಾ ಕಪ್ಪು ಜೀರಿಗೆಯ ಪುಡಿಗಳನ್ನು ಮಾಡಿ ನೀರಿನ ಜೊತೆ ಮಿಶ್ರಣ ಮಾಡಿಕೊಂಡು ಸಹ ಇದನ್ನು ಸೇವನೆ ಮಾಡಬಹುದು.

ಕಪ್ಪು ಜೀರಿಗೆಯ ಎಣ್ಣೆ ತಯಾರಿಸುವುದು ಹೇಗೆ? How to Make kalonji Seeds oil in Kannada

ಒಂದು ಕಪ್ ಶುದ್ಧವಾದ ತೆಂಗಿನ ಎಣ್ಣೆ ಜೊತೆಗೆ ಒಂದೂವರೆ ಸ್ಪೂನ್ ಕಪ್ಪು ಜೀರಿಗೆ ಮತ್ತು ಒಂದೂವರೆ ಸ್ಪೂನ್ ಮೆಂತೆ ಕಾಳನ್ನು ತೆಗೆದುಕೊಳ್ಳಬೇಕು. ನೀವು ಯಾವ ಪ್ರಮಾಣದ್ಲಲಿ ಕಪ್ಪು ಜೀರಿಗೆ ಎಣ್ಣೆ ತಯಾರಿಸುತ್ತಿರೋ ಅಷ್ಟು ಪ್ರಮಾಣದಲ್ಲಿ ಈ ಅನುಪಾತ ಕೂಡ ಹೆಚ್ಚುತ್ತದೆ.

ಮೊದಲಿಗೆ ಕಪ್ಪು ಜೀರಿಗೆ ಮತ್ತು ಮೆಂತೆ ಕಾಲುಗಳನ್ನು ಒಂದೊಂದಾಗಿ ಗ್ರಿನ್ಡ್ ಮಾಡಿಕೊಳ್ಳಬೇಕು. ಹೀಗೆ ಗ್ರಿನ್ಡ್ ಮಾಡುವಾಗ ಮಿಕ್ಸಾರ್ ಬಿಸಿ ಆಗದ ಹಾಗೆ ನೋಡಿಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ನೀರನ್ನು ಇತ್ತು ಕಾಯಿಸಬೇಕು. ನೀರು ಕಾದ ನಂತರ ಆ ಕಾಯುತ್ತಿರುವ ನೀರಿನ ಮೇಲೆ ಮತ್ತೊಂದು ಪಾತ್ರೆಯನ್ನು ತೇಲಲು ಬಿಟ್ಟು ( ಡಬಲ್ ಬಾಯ್ಲ್ ಮೆಥಡ್ ) ಅದರಲ್ಲಿ ಶುದ್ಧ ತೆಂಗಿನ ಎಣ್ಣೆಯನ್ನು ಹಾಕಬೇಕು.

ಡೈರೆಕ್ಟ್ ಆಗಿ ಕಾಯಿಸುವುದರಿಂದ ಕಲಾವಂಜಿ ಅಲ್ಲಿ ಇರುವ ಅಂಶಗಳು ಹೋಗುತ್ತದೆ. ಹಾಗಾಗಿ ಡಬಲ್ ಬಾಯ್ಲ್ ಮೆಥಡ್ ಅನ್ನು ಉಪಯೋಗಿಸಬೇಕು.

ಎಣ್ಣೆ ಸ್ವಲ್ಪ ಕಾದ ನಂತರ ಕಪ್ಪು ಜೀರಿಗೆ ಮತ್ತು ಮೆಂತೆ ಕಾಳಿನ ಹುಡಿ ರೂಪದ ಮಿಶ್ರಣವನ್ನು ಹಾಕಬೇಕು. ನಂತರ ಸ್ಪೂನ್ ಇಂದ ಚೆನ್ನಾಗಿ ಮಿಕ್ಸ್ ಮಾಡಬೇಕು.

ನಂತರ ಗ್ಯಾಸ್ ಆಫ್ ಮಾಡಿ ಹದಿನೈದು ನಿಮಿಷಗಳ ಕಾಲ ಹಾಗೆ ಬಿಸಿ ನೀರಿನಮೇಲೆ ಆ ಪಾತ್ರೆಯನ್ನು ಬಿಟ್ಟುಬಿಡಬೇಕು.

ಇದೆಲ್ಲ ಮುಗಿದ ನಂತರ ಸುಮಾರು ಹದಿನೈದು ದಿನಗಳ ಕಾಲ ಈ ಎಣ್ಣೆಯನ್ನು ಸೂರ್ಯನ ಬೆಳಕಿಗೆ ಇಡಬೇಕು. ನಂತರ ನಿಮಗೆ ಫ್ರೆಶ್ ಆದ ಕಪ್ಪು ಜೀರಿಗೆ ಎಣ್ಣೆ (Black Seed Oil) ಸಿದ್ದವಾಗುತ್ತದೆ.

ನೀವೇನಾದರೂ ಕಪ್ಪು ಜೀರಿಗೆ ತೈಲವನ್ನು ಕೊಳ್ಳಲು ಬಯಸುತ್ತಿದ್ದೀರಾ?? How to Buy Kalonji Seeds in Kannada

ಮಾರಾಟಗಾರರ ಹೆಸರು: ಆನ್ ಲೈನ್ ಮಂಗಳೂರು ಸ್ಟೋರ್
ಖರೀದಿಸುವ ಲಿಂಕ್: ಕ್ಲಿಕ್ ಮಾಡಿ

ಕಪ್ಪು ಜೀರಿಗೆಯ ಅನುಕೂಲಗಳು Benefits of Kalonji Seeds in Kannada

ಕಪ್ಪು ಜೀರಿಗೆಯನ್ನು ಅಡುಗೆ ಮಾಡಲಾದ ರೀತಿಯಲ್ಲಿ ಬಳಸಲಾಗುತ್ತದೆ. ಇದರ ಸುವಾಸನೆಯು ಅಡುಗೆಗೆ ಒಂದು ಹುರುಪನ್ನು ನೀಡುತ್ತದೆ.

ಕಪ್ಪು ಜಿರಿಗೆಯಲ್ಲಿ ಔಷದೀಯ ಗುಣ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ಔಷಧಗಳ ತಯಾರಿಕೆಯಲ್ಲಿ ಮತ್ತು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಕಪ್ಪು ಜೀರಿಗೆಯಿಂದ ಆಗುವ ಆರೋಗ್ಯಕರ ಅನುಕೂಲಗಳು Healthy Benefits of Kalonji Seeds in Kannada
ಕೂದಲು ಉದುರುವಿಕೆಗೆ ನಿವಾರಣೆ ಹಾಗು ಕಪ್ಪಾದ ಮತ್ತು ಸದ್ರಡವಾದ ಕೂದಲು.

ನಾನು ಮೊದಲೇ ಹೇಳಿರುವ ಹಾಗೆ ಕಪ್ಪು ಜೀರಿಗೆಯ ಎಣ್ಣೆಯನ್ನು ತಯಾರಿಸಿಕೊಂಡು ನೀವು ಅದನ್ನು ಸ್ನಾನ ಮಾಡುವ ಅರ್ಧ ಅಥವಾ ಒಂದು ಗಂಟೆಯ ಮೊದಲು ಬಳಸಬಹುದು. ಇದರಿಂದ ನೀವು ನಿಮ್ಮ ಕೂದಲುಗಳ ರಕ್ಷಣೆ ಅನ್ನು ಮಾಡಬಹುದು.

ಅಂದರೆ ಕೂದಲು ಉದುರುವಿಕೆ ಅನ್ನು ತಡೆಗಟ್ಟಬಹುದು. ಅದರ ಜೊತೆ ಜೊತೆಗೆ ಕೂದಲನ್ನು ಬಲವಾಗಿ ಮತ್ತು ಸದ್ರಡವಾಗುವಂತೆ ಮಾಡಬಹುದು.

ಪುರುಷ ಬಂಜೆತನದ ನಿವಾರಣೆ

ಈ ಆಧುನಿಕ ಯುಗದಲ್ಲಿ ಆಧುನಿಕ ಸಮಸ್ಯೆಗಳ ಸಂಖ್ಯೆಗಳು ಸಹ ಜಾಸ್ತಿ ಆಗಿದೆ. ಪುರುಷರಲ್ಲಿ ಇತ್ತೀಚಿನ ಡೈಗಳಲ್ಲಿ ಕಂಡು ಬರುವ ಅತ್ಯಂತ ದೊಡ್ಡ ಸಮಸ್ಯೆ ಅಂದರೆ ಅದು ಪುರುಷ ಬಂಜೆತನ.

ನೀವು ಕಪ್ಪು ಜೀರಿಗೆಯನ್ನು ಸೇವನೆ ಮಾಡುವುದರಿಂದ ಅಥವಾ ಅದನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನೀವು ಪುರುಷ ಬಂಜೆತನದ ಸಮಸ್ಯೆ ಅನ್ನು ದೂರ ಮಾಡಿಕೊಳ್ಳಬಹುದು.

ಪ್ರಾಸ್ಟೇಟ್ ಕ್ಯಾನ್ಸರ್ ನಿವಾರಣೆ.

ಕೆಲವಂದು ಕಾಯಿಲೆ ಗಳಿಗೆ ಪ್ರಕೃತಿಯೇ ಮದ್ದು. ಕಪ್ಪು ಜೀರಿಗೆಯನ್ನು ಬೆಳಿಗ್ಗೆ ಮತ್ತು ರಾತ್ರಿ ನೀರಿನಲ್ಲಿ ಬೆರೆಸಿಕೊಂಡು ಕುಡಿಯುವುದರಿಂದ ನೀವು ಪ್ರಾಸ್ಟೇಟ್ ಎನ್ನುವಂತಹ ಮಾರಣಾಂತಿಕ ಕಾಯಿಲೆ ಇಂದ ಮುಕ್ತಿ ಪಡೆಯಬಹುದು.

ದೈಹಿಕ ಶಕ್ತಿ ಸುಧಾರಣೆ.

ಕೊಲಾಂಜಿ ಅಲ್ಲಿ ವಿಟಮಿನ್ ಡಿ ಮತ್ತು ಪ್ರೊಟೀನ್ ಅಂಶಗಳು ಜಾಸ್ತಿ ಇರುತ್ತದೆ. ಇದು ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸುವುದರಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಕಪ್ಪು ಜೀರಿಗೆಯ ಸೇವನೆಯಿಂದ ನೀವು ನಿಮ್ಮ ಆರೋಗ್ಯವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು.

ಚರ್ಮದ ಸಮಸ್ಯೆ ನಿವಾರಣೆ

ಕಪ್ಪು ಜೀರಿಗೆಯ ಎಣ್ಣೆಯನ್ನು ಸ್ನಾನಕ್ಕೆ 30 ನಿಮಿಷಗಳ ಮುಂಚೆ ನಿಮ್ಮ ದೇಹದ ಮೇಲೆ ಹಚ್ಚಿಕೊಳ್ಳಬೇಕು. ಇದರಿಂದ ನೀವು ನಿಮ್ಮ ಚರ್ಮದ ಮೇಲೆ ಆಗುವ ಸ್ಕಿನ್ ಅಲರ್ಜಿ ಅಥವಾ ಗುಳ್ಳೆಗಳು ಮುಂತಾದ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ಯಕೃತ್ತಿನ ಹಾನಿ ನಿವಾರಣೆ ಬದಲಾದ ಆಹಾರ ಪದ್ಧತಿ ಇಂದ ಶರೀರದ ಮೇಲೆ ಬಹಳಷ್ಟು ತೊಂದರೆಗಳು ಆಗುತ್ತಿವೆ. ಕಪ್ಪು ಜೀರಿಗೆಯನ್ನು ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದ ನೀವು ನಿಮ್ಮ ಯಕೃತ್ತಿನ ಹಾನಿಯನ್ನು ಸಹ ತಡೆಗಟ್ಟಬಹುದು.

ಮೆದುಳಿನ ಶಕ್ತಿ ಮತ್ತು ಏಕಾಗ್ರತೆಯ ಹೆಚ್ಚಿಕೆ.

ಕೊಲಾಂಜಿ ತೈಲವನ್ನು ನೀವು ತಲೆಗೆ ಸರಿಯಾದ ಪ್ರಮಾಣದಲ್ಲಿ ಹಚ್ಚಿಕೊಳ್ಳಬೇಕು. ಎಣ್ಣೆ ಹಚ್ಚಿಕೊಡು ಸರಿಯಾಗಿ ಬಾಚಣಿಗೆ ಇಂದ ತಲೆಯನ್ನು ಬಾಚಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ನೆತ್ತಿ ಹಾಗು ತಲೆಗೆ ಸರಿಯಾದ ಪ್ರಮಾಣದಲ್ಲಿ ಎಣ್ಣೆ ಅಪ್ಲೈ ಆಗುತ್ತದೆ.

ಇದರಿಂದ ನಿಮ್ಮ ತಲೆಯಲ್ಲಿ ನಿಷ್ಕ್ರಿಯವಾಗಿರುವ ಕೆಲವು ನರಗಳು ಕೂಡ ಪ್ರಚೋದನೆಗೆ ಒಳಗಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ತಲೆ ಚುರುಕಾಗುವುದರ ಜೊತೆಗೆ ನಿಮ್ಮ ನೆನಪಿನ ಶಕ್ತಿ ಕೂಡ ಜಾಸ್ತಿ ಆಗುತ್ತದೆ.

ಮುಖದ ಸಮಸ್ಯೆ ಗಳಿಗೆ ಪರಿಹಾರ.

ಅತಿಯಾದ ದೂಳು, ವಾಹನದ ಹೊಗೆ, ಮಾಲಿನ್ಯ ಮುಂತಾದವುಗಳಿಂದ ಮುಖದಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಕಪ್ಪು ಜೀರಿಗೆಯ ಸೇವನೆ ತುಂಬಾ ಮುಖ್ಯವಾಗಿದೆ.

ಕೇವಲ ಒಂದು ತಿಂಗಳುಗಳ ಕಾಲ ಕಪ್ಪು ಜೀರಿಗೆಯನ್ನು ದಿನಕ್ಕೆ 2 ಬಾರಿ ಸೇವನೆ ಮಾಡುವುದರಿಂದ, ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಮೊಡವೆ, ಕಪ್ಪು ಕಲೆ, ಒರಟಾದ ಮುಖ ಮುಂತಾದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ.

ಕಪ್ಪು ಜೀರಿಗೆಯ ಸೇವನೆಯನ್ನು ನೀವು ನಿಮ್ಮ ದಿನಚರಿಯಾಗಿ ಮಾಡಿಕೊಳ್ಳಬೇಕು. ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಕಾಲಿಕ ಹೆರ್ಟ್ಟ್ಯಾಕ್, ಮತ್ತು low BP ಮುಂತಾದ ಹೃದಯ ಸಂಭಂದಿ ಸಮಸ್ಯೆಗಳಿಗೆ ಕಪ್ಪು ಜಿರಿಜೆಯು ಮದ್ದಾಗಿದೆ.

ಕಪ್ಪು ಜೀರಿಗೆಯಿಂದ ಆಗುವ ಇನ್ನಷ್ಟು ಉಪಯೋಗಗಳು. Other Benefits of Kalonji Seeds in Kannada
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.
  • ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಆಗದಂತೆ ತಡೆಯುತ್ತದೆ.
  • ಹಲ್ಲುಗಳ ರಕ್ತ ಸ್ರಾವದ ನಿವಾರಣೆ ವಸಡುಗಳನ್ನು ಬಲವಾಗಿಸುತ್ತದೆ.
  • ಚರ್ಮದ ಕಾನ್ಸರ್ ತಡೆಯುತ್ತದೆ.

ಇದನ್ನೂ ಓದಿ :

Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

Flax seeds in Kannada: ಅಗಸೆ ಬೀಜದ ಉಪಯೋಗವನ್ನು ತಿಳಿಯಿರಿ

ಕಪ್ಪು ಜೀರಿಗೆಯಿಂದಾಗುವ ಅನಾನುಕೂಲಗಳು Disadvantages of Kalonji seeds in Kannada

ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ಕಪ್ಪು ಜೀರಿಗೆಯ ಯಾವುದೇ ರೀತಿ ಆದ ಸೈಡ್ ಎಫೆಕ್ಟ್ ಹೊಂದಿಲ್ಲ. ಆದರೂ ಕೂಡ ಇದನ್ನು ಅತಿಯಾದ ಪ್ರಮಾಣದಲ್ಲಿ ಕಪ್ಪು ಜೀರಿಗೆಯನ್ನು ಸೇವನೆ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕಪ್ಪು ಜೀರಿಗೆಯನ್ನು ಯಾವುದೇ ಕಾರಣಕ್ಕೂ ಆರು ವರ್ಷದೊಳಗಿನ ಮಕ್ಕಳಿಗೆ ಸೇವಿಸಬಾರದು.

Leave a comment