ನಮ್ಮ ಮೆಟ್ರೋ ಬಗೆಗಿನ ಸಂಪೂರ್ಣವಾದ ಮಾಹಿತಿ, Namma Metro Map, Namma Metro Timming, and Namma Metro Recharge in Kannada

ನಮಸ್ಕಾರ ಸ್ನೇಹಿತರೇ, ಬೆಂಗಳೂರು ( Bangalore ) ಎಂದ ತಕ್ಷಣ ನೆನಪಾಗುವುದು ನಮ್ಮ ಮೆಟ್ರೋ ( Namma Metro ). ಹೌದು ಅತಿಯಾದ ಟ್ರಾಫಿಕ್ ಗೆ ಬೆಂಗಳೂರಿನಲ್ಲಿ ಕಂಡುಕೊಂಡ ಉತ್ತಮವಾದ ಪರಿಹಾರವೆಂದರೆ ಅದು ನಮ್ಮ ಮೆಟ್ರೋ.

ಮೆಟ್ರೋದಲ್ಲಿ ನೀವು ಟ್ರಾಫಿಕ್ ಫ್ರೀ ಆಗಿ ತುಂಬಾ ಸರಳವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬಹುದು. ಬೆಂಗಳೂರಿನಲ್ಲಿ ಈಗ ಸದ್ಯಕ್ಕೆ ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ಸಂಚಾರವನ್ನು ಕಾಣಬಹುದು. ಮೆಟ್ರೋ ಸಂಚಾರವನ್ನು 2011 ರಲ್ಲಿ ಪ್ರಾರಂಭಿಸಲಾಯಿತು.

  • ಈ ಮೆಟ್ರೋ ಸೇವೆ ಬೆಂಗಳೂರಿನ ಯಾವ ಯಾವ ಸ್ಥಳಗಳಲ್ಲಿ ಲಭ್ಯವಿದೆ namma metro map
  • ಮೆಟ್ರೋ ಟೈಮಿಂಗ್ namma metro timings
  • ಮೆಟ್ರೋದಲ್ಲಿ ಪ್ರಯಾಣಿಸಲು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು,
  • ಮೆಟ್ರೋ ಕಾರ್ಡ್ ಪಡೆದುಕೊಳ್ಳುವುದು ಹೇಗೆ ಹಾಗೂ ಅದನ್ನು ರೀಚಾರ್ಜ್ ಮಾಡುವುದು ಹೇಗೆ namma metro recharge
  • ಮೆಟ್ರೋ ಕಾರ್ಡ್ ಇಲ್ಲದೆ ಪ್ರಯಾಣಿಸುವುದು ಹೇಗೆ?
  • ಹಾಗೂ ಇನ್ನೂ ಕೆಲವು ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ

ನಮ್ಮ ಮೆಟ್ರೋ ಮ್ಯಾಪ್ namma metro map

ಬೆಂಗಳೂರಿನಲ್ಲಿ ಈಗ ಸದ್ಯಕ್ಕೆ ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ಸಂಚಾರವನ್ನು ಕಾಣಬಹುದು. ಇನ್ನು ಮುಂದೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಮಾರ್ಗಗಳನ್ನು ಸ್ಥಾಪಿಸಲು ಕಾಮಗಾರಿ ಚಾಲ್ತಿಯಲ್ಲಿದೆ. 

ನೇರಳೆ ಮಾರ್ಗ purple line metro

ನೇರಳೆ ಮಾರ್ಗದ ರೈಲು ಬಯ್ಯಪ್ಪನಹಳ್ಳಿ ಇಂದ ಪ್ರಾರಂಭವಾಗಿ ಕೆಂಗಿರಿ ತನಕ ಪ್ರಯಾನಿಸುತ್ತದೆ. ( Purple Line Metro In Bangalore)

ಬೈಯಪ್ಪನಹಳ್ಳಿ
ಸ್ವಾಮಿ ವಿವೇಕಾನಂದ ರಸ್ತೆ
ಇಂದಿರಾನಗರ
ಹಲಸೂರು
ಟ್ರಿನಿಟಿ
ಮಹಾತ್ಮ ಗಾಂಧಿ ರಸ್ತೆ
ಕಬ್ಬನ್ ಪಾರ್ಕ್
ಡಾ, ಬಿ ಆರ್, ಅಂಬೇಡ್ಕರ್ ನಿಲ್ದಾಣ, ವಿಧಾನ ಸೌಧ
ಸರ್, ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು
ನಾಡಪ್ರಭು ಕೆಪೇಗೌಡ ನಿಲ್ದಾಣ, ಮೆಜೆಸ್ಟಿಕ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ
ಮಾಗಡಿ ರಸ್ತೆ
ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ
ವಿಜಯನಗರ
ಅತ್ತಿಗುಪ್ಪೆ
ದೀಪಾಂಜಲಿ ನಗರ
ಮೈಸೂರು ರಸ್ತೆ
ನಾಯಂಡಹಳ್ಳಿ
ರಾಜರಾಜೇಶ್ವರಿ ನಗರ
ಜ್ಞಾನ ಭಾರತಿ
ಪಟ್ಟನಗೆರೆ
ಕೆಂಗೇರಿ ಬಸ್ ಟರ್ಮಿನಲ್
ಕೆಂಗೇರಿ

ಹಸಿರು ಮಾರ್ಗ green line metro

ಹಸಿರು ಮಾರ್ಗದ ರೈಲು ರೇಷ್ಮೆ ಸಂಸ್ಥೆ ಇಂದ ಪ್ರಾರಂಭವಾಗಿ ನಾಗಸಂದ್ರ ತನಕ ಪ್ರಯಾನಿಸುತ್ತದೆ.

ರೇಷ್ಮೆ ಸಂಸ್ಥೆ
ತಲಘಟ್ಟಪುರ ವಾಜರಹಳ್ಳಿ
ದೊಡ್ಡ ಕಲ್ಲಸಂದ್ರ
ಕೊಣನಕುಂಟೆ ಕ್ರಾಸ್
ಯಲಚೆನಹಳ್ಳಿ
ಜಯಪ್ರಕಾಶ ನಗರ
ಬನಶಂಕರಿ
ರಾಷ್ಟ್ರೀಯ ವಿದ್ಯಾಲಯ ರಸ್ತೆ
ಜಯನಗರ
ಸೌತ್ ಎಂಡ್ ಸರ್ಕಲ್
ಲಾಲ್ ಬಾಗ್
ನೇಷನಲ್ ಕಾಲೇಜ್
ಕೃಷ್ಣ ರಾಜೇಂದ್ರ ಮಾರುಕಟ್ಟೆ
ಚಿಕ್ಕಪೇಟೆ
ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ
ಶ್ರೀರಾಮ್ ಪುರ
ಮಹಾಕವಿ ಕುವೆಪು ರಸ್ತೆ
ರಾಜಾಜಿನಗರ
ಮಹಾಲಕ್ಷ್ಮಿ
ಸ್ಯಾಂಡಲ್ ಸೋಪ್ ಫ್ಯಾಕ್ಟರಿ
ಯಶವಂತಪುರ
ಗೋರುಗುಂಟೆ ಪಾಳ್ಯ
ಪೀಣ್ಯ
ಪೀಣ್ಯ ಇಂಡಸ್ಟ್ರಿ
ಜಾಲಹಳ್ಳಿ
ದಾಸರಹಳ್ಳಿ
ನಾಗಸಂದ್ರ

ಹರಿಸು ಮತ್ತು ನೇರಳೆ ಮಾರ್ಗದ ಎರಡು ರೈಲುಗಳು ಮೆಜೆಸ್ಟಿಕ್ ಅಲ್ಲಿ ಸಿಗುತ್ತದೆ ಹಾಗಾಗಿ ನೀವು ಮೆಜೆಸ್ಟಿಕ್ ಅಲ್ಲಿ ಇಳಿದುಕೊಂಡು ರೈಲು ಬದಲಾಯಿಸಬಹುದು.

ಮೆಟ್ರೋ ಸ್ಟೇಷನ್ ಒಳಗಡೆ ಪಾಲಿಸಬೇಕಾದ ಕ್ರಮಗಳು

ಸದ್ಯದ ಪರಿಸ್ಥಿತಿ ಅಲ್ಲಿ ಮೆಟ್ರೋ ಸ್ಟೇಷನ್ ಒಳಗೆ ಪ್ರವೇಶಿಸಲು ಮಾಸ್ಕ್ ಕಡ್ಡಾಯವಾಗಿದೆ. ಒಮ್ಮೆ ನೀವು ಒಳಗಡೆ ಪ್ರವೇಶಿಸಿದ ನಂತರ ನೀವು ನಿಮ್ಮ ಕಾರ್ಡಿನ ಬ್ಯಾಲೆನ್ಸ್ ಕನಿಷ್ಟ 50 ರೂಪಯಿಗಿಂತ ಕಡಿಮೆ ಇದ್ದರೆ ಅಲ್ಲೇ ಇರುವ ಕೌಂಟರ್ ಗೆ ಹೋಗಿ ರೀಚಾರ್ಜ್ ಮಾಡಿಕೊಳ್ಳಬೇಕು.

ನಿಮ್ಮ ಬಳಿ ಕಾರ್ಡ್ ಇಲ್ಲವಾದರೆ ಕೌಂಟರ್ ಗೆ ಹೋಗಿ ನೀವು ಹೋಗಬೇಕಾದ ಸ್ಥಳವನ್ನು ಹೇಳಿದರೆ ಅವರು ನಿಮಗೆ ನಿಮ್ಮ ಪ್ರಯಾಣಕ್ಕೆ ಅನುಗುಣವಾದ ಟೋಕನ್ ಅನ್ನು ನೀಡುತ್ತಾರೆ. ನಂತರ ನಿಮ್ಮ ಹಾಗು ನಿಮ್ಮ ಬ್ಯಾಗ್ ಪರಿಶೀಲನೆ ನಡೆಯುತ್ತದೆ.

ನೀವು ನಿಮ್ಮ ಮೆಟ್ರೋ ಕಾರ್ಡ್ ಅಥವಾ ಟೋಕನ್ ಅನ್ನು ಸ್ಕ್ಯಾನ್ ಮಾಡಿ ಒಳಗಡೆ ಪ್ರವೇಶಿಸಬೇಕು. ಅಲ್ಲಿ ನೀವು ಸರಿಯಾಗಿ ಓದಿಕೊಂಡು ನೀವು ಹೋಗಬೇಕಾದ ಪ್ಲಾಟ್ ಫಾರ್ಮ್ ಅನ್ನು ಆರಿಸಿಕೊಂಡು ಹೋಗಬೇಕು.

ಉದಾಹರಣೆಗೆ : ನೀವು ರಾಜಾಜಿನಗರದಲ್ಲಿದ್ದು ಯಶವಂತಪುರ ಕಡೆಗೆ ಹೊರಟಿರುವುದು ಆಗಿದ್ದಾರೆ, ನಾಗಸಂದ್ರ ಎಂದು ಬರೆದಿರುವ ಪ್ಲಾಟ್ ಫಾರ್ಮ್ ಆರಿಸಿಕೊಳ್ಳಬೇಕು.

“ನೇರಳೆ ಮಾರ್ಗದ ಎಲ್ಲ ಮೆಟ್ರೋ ಸ್ಟೇಷನ್ ಗಳಲ್ಲಿ ಪ್ಲಾಟ್ ಫಾರ್ಮ್ ನಂಬರ್ ಜೊತೆಗೆ ಬೈಯಪ್ಪನಹಳ್ಳಿ ಕಡೆಗೆ ಹಾಗೂ ಕೆಂಗೇರಿ ಕಡೆಗೆ ಎಂದು ಬರೆದಿರುತ್ತದೆ.”

“ಹಸಿರು ಮಾರ್ಗದ ಎಲ್ಲ ಮೆಟ್ರೋ ಸ್ಟೇಷನ್ ಗಳಲ್ಲಿ ಪ್ಲಾಟ್ ಫಾರ್ಮ್ ನಂಬರ್ ಜೊತೆಗೆ ನಾಗಸಂದ್ರ ಕಡೆಗೆ ಹಾಗೂ ರೇಷ್ಮೆ ಸಂಸ್ಥೆ ಕಡೆಗೆ ಎಂದು ಬರೆದಿರುತ್ತದೆ.”

ಈ ರೀತಿ ನಿಮ್ಮ ಆಯ್ಕೆಯ ಪ್ಲಾಟ್ ಫಾರ್ಮ್ ಹೋಗಿ ನಿಂತಾಗ ನಂತರ ಬರುವ ಯಾವ ಮೆಟ್ರೋವನ್ನು ಬೇಕಾದರೂ ನೀವು ಹತ್ತಬಹುದು.

ಮೆಟ್ರೋದಲ್ಲಿ ನಿಮಗೆ ನಮ್ಮ ಮೆಟ್ರೋ ಮ್ಯಾಪ್ namma metro map ಇರುತ್ತದೆ, ಅದರ ಜೊತೆಗೆ ಕನ್ನಡ ಮತ್ತು English ಎರಡು ಭಾಷೆಗಳಲ್ಲಿ ಮುಂದಿನ ನಿಲ್ದಾಣದ ಬಗ್ಗೆ ಸ್ಪಷ್ಟವಾದ ಪ್ರಕಟಣೆ ಪ್ರಸಾರವಾಗುತ್ತದೆ.

ನಂತರ ನೀವು ಮೆಟ್ರೋ ಸ್ಟೇಷನ್ ಅನ್ನು ನಿರ್ಗಮಿಸುವ ಮುನ್ನ ನಿಮ್ಮ ಬಳಿ ಕಾರ್ಡ್ ಇದ್ದರೆ ಅದನ್ನು ಸ್ಕ್ಯಾನ್ ಮಾಡಬೇಕು ಇದರಿಂದ ನಿಮ್ಮ ಪ್ರಯಾಣದ ಶುಲ್ಕ ಪಾವತಿ ಆಗುತ್ತದೆ.

ಒಂದುವೇಳೆ ನೀವು ಟೋಕನ್ ಕಾಯಿನ್ ಪಡೆದು ಪ್ರಯಾಣಿಸಿದ್ದಾದರೆ ನಿಮ್ಮ ಬಳಿ ಇರುವ ಟೋಕನ್ ಕಾಯಿನ್ ಅನ್ನು ಮೆಟ್ರೋ ಟೋಕನ್ ಹುಂಡಿ ಒಳಗೆ ಹಾಕಬೇಕು.

Also Read this : DON’T WATCH “VIRAL VIDEOS” IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

ನಮ್ಮ ಮೆಟ್ರೋ ಟೈಮಿಂಗ್ namma metro timings

ಸೋಮವಾರ – ಶನಿವಾರ
ಬೆಳಿಗ್ಗೆ 5.00 ಗಂಟೆ ಪ್ರಾರಂಭ
ರಾತ್ರಿ 11.೦೦ ಗಂಟೆ ಮುಕ್ತಾಯ

ಭಾನುವಾರ
ಬೆಳಿಗ್ಗೆ 7.00 ಗಂಟೆ ಪ್ರಾರಂಭ
ರಾತ್ರಿ 11.00 ಗಂಟೆ ಮುಕ್ತಾಯ

ಮೆಟ್ರೋ ಕಾರ್ಡ್ ಪಡೆದುಕೊಳ್ಳುವ ವಿಧಾನ How to get metro card


ನೀವು ಕೂಡ ಮೆಟ್ರೋ ಕಾರ್ಡ್ ಪಡೆದುಕೊಳ್ಳಲು ಬಯಸುವುದಾದರೆ ತುಂಬ ಸರಳವಾಗಿ ಪಡೆದುಕೊಳ್ಳಬಹುದು. ಮೆಟ್ರೋ ಟಿಕೆಟ್ ಕೌಂಟರ್ ಬಳಿ ಹೋಗಿ ಮೆಟ್ರೋ ಕಾರ್ಡ್ ಬಗ್ಗೆ ಕೇಳಿದರೆ ಅವರು ನಿಮಗೆ ಒಂದು ಕಾರ್ಡ್ ಅನ್ನು ಆಕ್ಟೀವ್ ಮಾಡಿ ಕೊಡುತ್ತಾರೆ. ಮೆಟ್ರೋ ಕಾರ್ಡ್ ನಿಮಗೆ ಕೇವಲ 50 ರೂಪಾಯಿಗೆ ದೊರೆಯುತ್ತದೆ.

ನಮ್ಮ ಮೆಟ್ರೋ ಕಾರ್ಡ್ ರೀಚಾರ್ಜ್ ( namma metro recharge )
ನೀವು ಮೆಟ್ರೋದಲ್ಲಿ ನಿರಂತರ ಪ್ರಯಾಣವನ್ನು ಪ್ರಾರಂಬಿಸುವುದಾದರೆ ಮುಖ್ಯವಾಗಿ ಮೆಟ್ರೊ ಕಾರ್ಡ್ ಪಡೆದುಕೊಳ್ಳಿ. ಏಕೆಂದರೆ ಇದರಿಂದ ನೀವು ಮೆಟ್ರೋ ಟೋಕನ್ ಪಡೆದುಕೊಳ್ಳಲು ಪ್ರತಿದಿನ ಕ್ಯೂ ನಲ್ಲಿ ನಿಲ್ಲುವುದು ತಪ್ಪುತ್ತದೆ.

ನೀವು ಒಂದು ಬಾರಿ ಮೆಟ್ರೋ ಕಾರ್ಡ್ ಪಡೆದರೆ ತುಂಬಾ ಸರಳವಾಗಿ ನಿಮ್ಮ ಮೊಬೈಲ್ ಫೋನ್ ನಿಂದ ರೀಚಾರ್ಜ್ ಮಾಡಿಕೊಳ್ಳಬಹುದು. ನಮ್ಮ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಲು ಬಿ ಎಮ್ ಆರ್ ಸಿ ಎಲ್ ( BMRCL namma metro mobile app) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಲ್ಲಿ, ಇಲ್ಲವಾದರೆ webbtopup.bmrc.co.in ವೆಬ್ಸೈಟ್ ಗೆ ಬೇಟಿ ನೀಡಿ.

Leave a comment