ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ – Online Scams Explained in Kannada

ನಿಮಗಿದು ತಿಳಿದು ಶಾಕ್ ಆಗಬಹುದು. ನಿಮ್ಮ ಬಳಿ ಇರುವ ಆನ್ ಲೈನ್ ಅಕೌಂಟ್ ಗಳು ಎಷ್ಟು ಸೇಫ್ ಆಗಿವೆ ? ಅದರ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ ಗೊತ್ತಾ.

ಇಂಟರ್ ನೆಟ್ ನಲ್ಲಿ ಎಷ್ಟೇ ಸುರಕ್ಷಿತವಾಗಿದ್ದರೂ ಸಾಲದು. ಹ್ಯಾಕರ್ ಗಳು ಮತ್ತು ಸ್ಕ್ಯಾಮರ್ಸ್ ಗಳು ಯಾವ ಕ್ಷಣದಲ್ಲಾದರೂ ನಿಮ್ಮ ಹಣ ಇರುವ ಖಾತೆಗೆ ಖನ್ನ ಹಾಕಬಹುದು.

ಕೆಲವರಿಗಂತೂ ಈ ಸ್ಕ್ಯಾಮ್ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಅರಿವೇ ಇರುವುದಿಲ್ಲ. ಅಂತವರಲ್ಲಿ ಜಾಗ್ರತೆ ಮೂಡಿಸಲು ನಾವು ಈ ಲೇಖನವನ್ನು ಬರೆದಿದ್ದೇವೆ.

ಆನ್ ಲೈನ್ ಸ್ಕ್ಯಾಮ್ ಎಂದರೇನು (What is Online Scam in Kannada)

ಕಳ್ಳರು ಹೇಗೆ ಮನೆ ಮನೆಗೆ ಹಾಗೂ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕುತ್ತಾರೋ ಹಾಗೆಯೇ ಇದು. ಆದರೆ ಈ ಕಳ್ಳತನ ನಿಮ್ಮ ಆನ್ ಲೈನ್ ನಲ್ಲಿರುವ ಅಕೌಂಟ್ ಗಳಲ್ಲಿ ನಡೆಯುತ್ತದೆ.

ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ - Online Scams Explained in Kannada

ಈ ವಿಧಾನದ ಮೂಲಕ ಯಾವುದೇ ಸಮಯದಲ್ಲೂ ಸ್ಕ್ಯಾಮರ್ಸ್ ಗಳು ನಿಮ್ಮ ಪರ್ಸನಲ್ ಮಾಹಿತಿಗಳನ್ನು ಮತ್ತು ಹಣಗಳನ್ನು ಎಗರಿಸಬಹುದು.

ಇಲ್ಲಿ ವಿಧ ವಿಧವಾದ ರೀತಿಯಲ್ಲಿ ನಿಮಗೆ ಸ್ಕ್ಯಾಮ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.

ಓ.ಟಿ.ಪಿ ಸ್ಕ್ಯಾಮ್ (OTP Scam in Kannada)

ನಿಮ್ಮಲ್ಲಿ ಸಾಕಷ್ಟು ಮಂದಿಗೆ ಈ OTP ಸ್ಕ್ಯಾಮ್ ಬಗ್ಗೆ ತಿಳಿದಿದೆ. ಈ ವಿಧಾನವನ್ನು ಬಳಸಿಕೊಂಡು ಸ್ಕ್ಯಾಮರ್ಸ್ ಗಳು ನಿಮ್ಮ ಖಾಸಗಿ ಮಾಹಿತಿಯನ್ನು & ಹಣವನ್ನು ದೋಚುತ್ತಾರೆ.

ಮೊದಲು ಇವರು ನಿಮ್ಮ ಮೊಬೈಲ್ ಗೆ OTP ಯನ್ನು ಕಳುಹಿಸುತ್ತಾರೆ. ಆ ನಂತರ ನಿಮಗೆ ಕಾಲ್ ಮಾಡಿ, ಬಂದಿರುವ OTP ಯನ್ನು ಕೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮಗೆ ಕಳುಹಿಸಿರುವ OTP ಯನ್ನು ಹೇಳಲೇ ಬೇಡಿ.

ಇವರುಗಳು ಹಲವಾರು ಹೆಸರುಗಳಿಂದ ನಿಮಗೆ ಕರೆ ಮಾಡಬಹುದು. ಉದಾಹರಣೆಗೆ ಬ್ಯಾಂಕ್ ಮ್ಯಾನೇಜರ್, ಫೈನಾನ್ಸ್ ಕಂಪನಿ, ಟಿವಿ ಚಾನಲ್ ಹಾಗೂ ಇತ್ಯಾದಿ.

ಲೋನ್ ಸ್ಕ್ಯಾಮ್ (Loan Scam in Kannada)

ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ - Online Scams Explained in Kannada

ನಿಮಗೆ ಹಣದ ಆಮಿಷ ತೋರಿಸಿ, ನಿಮ್ಮಲ್ಲಿರುವ ಹಣವನ್ನೇ ಈ ವಿಧಾನದ ಮೂಲಕ ದೋಚುತ್ತಾರೆ. ಅಂದರೆ ಲೋನ್ ಕೊಡುತ್ತೇವೆ ಅಂತ ಹೇಳಿ.

ಮೊದಲು ನಿಮ್ಮ ಮೊಬೈಲ್ ಗೆ ಕೆಲವೊಂದು ಮೆಸೇಜ್ ಗಳನ್ನು ಕಳುಹಿಸುತ್ತಾರೆ. ಆ ಮೆಸೇಜ್ ಗಳು ನೋಡುವುದಕ್ಕೆ ಬ್ಯಾಂಕ್ ಗಳು ಸೆಂಡ್ ಮಾಡುವ ಮೆಸೇಜ್ ತರಹವೇ ಇರುತ್ತದೆ.

ಒಂದು ವೇಳೆ ನಿಮಗೂ ಈ ರೀತಿಯ ಮೆಸೇಜ್ ಗಳು ಬಂದರೆ, ಮೊದಲು ಅದನ್ನು ಸೆಂಡ್ ಮಾಡಿರುವ ವ್ಯಕ್ತಿಯ ನಂಬರನ್ನು ಮತ್ತದರ ಫಾರ್ಮ್ಯಾಟ್ ಅನ್ನು ನೋಡಿಕೊಳ್ಳಿ.

ಸ್ಪೆಷಲ್ ಗಿಫ್ಟ್ ಸ್ಕ್ಯಾಮ್ (Special Gift Scam in Kannada)

ಈ ಸಂದರ್ಭದಲ್ಲಿ ಹೆಚ್ಚಿನ ಜನರು ಮೋಸ ಹೋಗುತ್ತಾರೆ. ಇಲ್ಲಿ ಆಕರ್ಷಕ ಬಹುಮಾನಗಳನ್ನು ಕೊಡುವುದಾಗಿ ಆಕರ್ಷಕ ಮೆಸೇಜ್ ಗಳನ್ನು ಸೆಂಡ್ ಮಾಡಲಾಗುತ್ತದೆ.

ನೀವೂ ಎಲ್ಲಾದರೂ ಗಿಫ್ಟ್ ಸಿಗುತ್ತದೆ ಎಂದು ಈ ತರಹದ ಮೆಸೇಜ್ ಗಳನ್ನು ಅದರಲ್ಲಿರುವ ಲಿಂಕ್ ಗಳನ್ನು ತೆರೆಯಲೇ ಬೇಡಿ.

ಫ್ಲಿಫ್ ಕಾರ್ಟ್, ಅಮೆಜಾನ್, ಮಿಂತ್ರಾ ಮುಂತಾದ ಶಾಪಿಂಗ್ ವೆಬ್ ಸೈಟ್ ಗಳ ಅಧಿಕೃತ ಮೆಸೇಜ್ ಗಳಿಂದ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ.

ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ - Online Scams Explained in Kannada

ಆದರೆ ಇದೇ ತರಹದ ಹೆಸರುಗಳನ್ನಿಟ್ಟುಕೊಂಡು ನಿಮಗೆ ಸ್ಕ್ಯಾಮರ್ಸ್ ಗಳು ಲಿಂಕ್ ಗಳನ್ನು ಕಳುಹಿಸಬಹುದು. ಒಂದು ವೇಳೆ ಈ ರೀತಿಯ ಲಿಂಕ್ ಗಳು ಬಂದರೆ, ಅದರ ಡೊಮೈನ್ ನೇಮ್ ಅನ್ನು ಚೆಕ್ ಮಾಡಿ ನೋಡಿ.

ಸ್ನೇಹಿತರೇ, ಇವಿಷ್ಟು ಸ್ಕ್ಯಾಮರ್ಸ್ ಗಳು ಅನುಸರಿಸುವ ಕೆಲವು ಜನಪ್ರಿಯ ಸ್ಕ್ಯಾಮಿಂಗ್ ಮಾರ್ಗಗಳಾಗಿವೆ. ಇದರ ಹೊರತಾಗಿಯೂ ಇನ್ನೂ ಹಲವು ವಿಧಗಳಿವೆ.

ಮುಂದಿನ ದಿನಗಳಲ್ಲಿ ನಾವು ಈ ಲೇಖನವನ್ನು ಆಧುನಿಕರಿಸುತ್ತೇವೆ. ಅಲ್ಲಿಯವರೆಗೆ ಈ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿಕೊಳ್ಳಿ.

1 thought on “ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ – Online Scams Explained in Kannada”

Leave a comment