ಭಾರತದಲ್ಲಿ ಈಗಾಗಲೇ ಕೋಟಿಗಟ್ಟಲೆ ಜನರು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಅದರಲ್ಲಿ ಎಷ್ಟು ಜನ ಲಾಭದಲ್ಲಿದ್ದಾರೆ ಗೊತ್ತಾ ?
ಸ್ಟಾಕ್ ಮಾರ್ಕೆಟ್ ನಲ್ಲಿ (Stock Market) ನಲ್ಲಿ ಲಾಭ ಪಡೆಯಲು ನಿಮಗೆ ತಾಳ್ಮೆ ಇರಬೇಕು. ಏಕೆಂದರೆ ಇಲ್ಲಿ ನೀವು ನಿಮ್ಮ ಸ್ಟಾಕ್ ಅನ್ನು ಹೋಲ್ಡ್ ಮಾಡಿದರೆ ಮಾತ್ರ ನಿಮಗೆ ಉತ್ತಮ ರಿಟರ್ನ್ಸ್ ಸಿಗುತ್ತದೆ.
ಆದರೆ ಸಾಕಷ್ಟು ಜನರ ಬಳಿ ಹೆಚ್ಚಿನ ಹಣ ಇರುವುದಿಲ್ಲ. ಹಾಗಾಗಿ ಅವರುಗಳು ಪೆನ್ನಿ ಸ್ಟಾಕ್ (Penny Stocks) ಗಳನ್ನು ಹುಡುಕುತ್ತಿರುತ್ತಾರೆ.
ಯಾಕೆಂದರೆ ಕಡಿಮೆ ಬೆಲೆಯ ಸ್ಟಾಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂಬ ಉದ್ದೇಶದಿಂದ.
ಹಾಗಾದರೆ ಆ ಉತ್ತಮ ಕಡಿಮೆ ಬೆಲೆಯ ಪೆನ್ನಿ ಸ್ಟಾಕ್ ಗಳು ಯಾವ್ಯಾವು ಎಂಬುದನ್ನು ತಿಳಿಯೋಣ ಬನ್ನಿ.
ಇಂಡಿಯನ್ ಇನ್ಫೋ ಟೆಕ್ (Indian Infotech in Kannada)
ಇದೊಂದು ಸಾಫ್ಟ್ ವೇರ್ ಕಂಪನಿ ಆಗಿದ್ದು, ಪ್ರಸ್ತುತ ಇದರ ಒಂದು ಶೇರ್ ಬೆಲೆ ಕೇವಲ ₹10.74 ಆಗಿದೆ. ಕಳೆದ 1 ತಿಂಗಳಲ್ಲಿ ಇದು ಸುಮಾರು 161% ಗೂ ಅಧಿಕ ರಿಟರ್ನ್ಸ್ ಅನ್ನು ನೀಡಿದೆ.
ಲಾಂಗ್ ಟರ್ಮ್ ನಲ್ಲಿ ಹೇಳುವುದಾದರೆ ಕಳೆದ 6 ತಿಂಗಳಲ್ಲಿ ಬರೋಬ್ಬರಿ 1030% ರಿಟರ್ನ್ಸ್ ಹಾಗೂ 1 ವರ್ಷದಲ್ಲಿ 2653% ಗೂ ಅಧಿಕ ರಿಟರ್ನ್ಸ್ ಅನ್ನು ಈ ಮಲ್ಟಿ ಬ್ಯಾಗರ್ ಪೆನ್ನಿ ಸ್ಟಾಕ್ ನೀಡಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಬಗ್ಗೆ ತಿಳಿಯಿರಿ
ಈಗಲೂ ಸಹ ಈ ಸ್ಟಾಕ್ ಅನ್ನು ಖರೀದಿಸಿ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ನಿಮ್ಮಲ್ಲಿರುವ ಡಿಮ್ಯಾಟ್ ಅಕೌಂಟ್ ನಲ್ಲಿ ಈ ಶೇರ್ ಅನ್ನು ಒಮ್ಮೆ ನೋಡಿಕೊಳ್ಳಿ.
ಜೈ ಪ್ರಕಾಶ್ ಪವರ್ ವೆಂಚರ್ಸ್ (JaiPrakash Power Ventures in Kannada)
ಇದೂ ಸಹ ಪೆನ್ನಿ ಸ್ಟಾಕ್ ಆಗಿದ್ದು, ಇದರ ಬೆಲೆ ಈಗ ₹8.45 ರೂಪಾಯಿ ಆಗಿದೆ. ಆದರೆ ಇದರ ಆಲ್ ಟೈಮ್ ಹೆಚ್ಚಳ ₹150 ರೂಪಾಯಿಗೂ ಅಧಿಕ ಆಗಿದೆ.
ಕೋವಿಡ್ ನ ಹೆಚ್ಚಳದಿಂದ ಇದರ ಶೇರ್ ಬೆಲೆ ತುಂಬಾ ಕುಗ್ಗಿ ಹೋಗಿತ್ತು. ಆದರೆ ಇದೀಗ ಇದರ ಬೆಲೆ ಮರಳಿ ತನ್ನ ಮೊದಲ ಸ್ಥಾನಕ್ಕೆ ಬರುತ್ತಿದೆ.
ಸುಮಾರು ₹5400 ಕೋಟಿ ರೂಪಾಯಿಗೂ ಅಧಿಕ ಮಾರ್ಕೆಟ್ ಕ್ಯಾಪ್ ಅನ್ನು ಈ ಸ್ಟಾಕ್ ಅನ್ನು ಹೊಂದಿದೆ. ಹಾಗಾಗಿ ಇದು ಸೇಫ್ ಸ್ಟಾಕ್ ಅಂತಾನೆ ಹೇಳಬಹುದು.
ಕೇವಲ ಒಂದು ತಿಂಗಳಲ್ಲಿ ಜೈ ಪ್ರಕಾಶ್ ಪವರ್ ಸ್ಟಾಕ್ ಸುಮಾರು 53% ನಷ್ಟು ರಿಟರ್ನ್ಸ್ ಅನ್ನು ನೀಡಿದೆ. ಲಾಂಗ್ ಟರ್ಮ್ ಗಾಗಿ ಇದೊಂದು ಒಳ್ಳೆಯ ಪೆನ್ನಿ ಸ್ಟಾಕ್ ಆಗಿದೆ.
ವೊಡಾಫೋನ್ ಐಡಿಯಾ (Vodafone Idea in Kannada)
ಮೇಲಿನ ಎರಡು ಕಂಪನಿಗಳ ಬಗ್ಗೆ ನೀವು ಕೇಳಿರದೆ ಇರಬಹುದು. ಆದರೆ ವೊಡಾಫೋನ್ ಐಡಿಯಾ ಕಂಪನಿಯ ಬಗ್ಗೆ ಖಂಡಿತ ಕೇಳಿರುತ್ತೀರಿ.
ಇತ್ತೀಚಿಗಸ್ಟೇ ಇವೆರಡು ದೊಡ್ಡ ದೊಡ್ಡ ಕಂಪನಿಗಳು ಮರ್ಜ್ ಆಗಿದ್ದರ ಪರಿಣಾಮವಾಗಿ ಇದರ ಬೆಲೆ ಕೇವಲ ₹15.10 ರೂಪಾಯಿಯಷ್ಟಿದೆ.
ಮುಂದಿನ ದಿನಗಳಲ್ಲಿ ಈ ಶೇರ್ ನ ಬೆಲೆ ಖಂಡಿತವಾಗಿಯೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ನೀವೇನಾದರೂ ಈ ಸ್ಟಾಕ್ ಅನ್ನು ಖರೀದಿಸಲು ಬಯಸಿದರೆ, ಈಗಲೇ ಖರೀದಿ ಮಾಡುವುದು ಉತ್ತಮ.
ಕಳೆದ 6 ತಿಂಗಳಲ್ಲಿ ಇದು 67% ಗೂ ಅಧಿಕ ರಿಟರ್ನ್ಸ್ ಅನ್ನು ನೀಡಿದೆ. ಸುಮಾರು ₹43000 ಕೋಟಿ ರೂಪಾಯಿಗೂ ಹೆಚ್ಚಿನ ಮಾರ್ಕೆಟ್ ಕ್ಯಾಪ್ ಅನ್ನು ಈ ಸ್ಟಾಕ್ ಹೊಂದಿದೆ.
ಇವು ಮೂರು ಪೆನ್ನಿ ಸ್ಟಾಕ್ ಗಳು ಕಳೆದ ಕೆಲವು ತಿಂಗಳಲ್ಲಿ ಉತ್ತಮ ರಿಟರ್ನ್ಸ್ ಅನ್ನು ನೀಡಿವೆ.
ಇದನ್ನೂ ಓದಿ: ಉತ್ತಮ ಕ್ರಿಪ್ಟೋ ಕರೆನ್ಸಿಗಳು ಇಲ್ಲಿವೆ
ಆದರೆ ಒಂದು ವಿಷಯವನ್ನು ನೀವು ನೆನಪಿನಲ್ಲಿಡಿ. ಅದೇನೆಂದರೆ ಈ ಪೆನ್ನಿ ಸ್ಟಾಕ್ ಗಳಲ್ಲಿ ಹೆಚ್ಚಿನ ರಿಸ್ಕ್ ಇರುತ್ತದೆ.
ಏಕೆಂದರೆ ಈ ಸ್ಟಾಕ್ ಮಾರ್ಕೆಟ್ (Stock Market) ನ ಗೇಮ್ ಅನ್ನು ಚಲಾಯಿಸುವ ಆಪರೇಟರ್ಸ್ ಗಳು ಯಾವಾಗ ಬೇಕಾದರೂ ಈ ಸ್ಟಾಕ್ ಗಳ ಬೆಲೆಯನ್ನು ಬದಲಾವಣೆ ಮಾಡಬಹುದು.
ಹಾಗಾಗಿ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡುವ ಮೊದಲು ಸರಿಯಾದ ರೀತಿಯ ರೀಸರ್ಚ್ ಮಾಡಿ, ಸರಿಯಾದ ಮಾಹಿತಿ ತಿಳಿದುಕೊಂಡು ಇನ್ವೆಸ್ಟ್ ಮಾಡಿ.
ಗೆಳೆಯರೇ ಇದಿಷ್ಟು ಕೆಲವು ಬೆಸ್ಟ್ ಮಲ್ಟಿ ಬ್ಯಾಗರ್ ಪೆನ್ನಿ ಸ್ಟಾಕ್ (Penny Stocks) ಗಳ ಬಗ್ಗೆ ಒಂದು ಸಣ್ಣ ಮಾಹಿತಿ.
ಇನ್ನೂ ಹೆಚ್ಚಿನ ಪೆನ್ನಿ ಸ್ಟಾಕ್ ಗಳ ಬಗ್ಗೆ ಮುಂದಿನ ದಿನಗಳಲ್ಲಿ ನಾವು ತಿಳಿಸುತ್ತೇವೆ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.