ನಮ್ಮ ಭಾರತದಲ್ಲಿರುವ ಸಾಕಷ್ಟು ಮಂದಿ ಫೋನ್ ಪೇ [PhonePe], ಗೂಗಲ್ ಪೇ [Google Pay] ಅಥವಾ ಇನ್ನಿತರ ಡಿಜಿಟಲ್ ಪೇಮೆಂಟ್ ಸರ್ವೀಸ್ ಗಳನ್ನು ಬಳಸುತ್ತಾರೆ.
ಹಾಗೆಯೇ ಆ ಎಲ್ಲಾ ಡಿಜಿಟಲ್ ಪೇಮೆಂಟ್ ಕಂಪನಿಗಳು ತಮ್ಮ ಅಪ್ಲಿಕೇಷನ್ ಗಳಲ್ಲಿ ವ್ಯಾಲೆಟ್ ಗಳನ್ನು [Wallet] ಸೇರಿಸಿರುತ್ತಾರೆ. ಕೆಲವೊಂದು ಆಪ್ ಗಳ ವ್ಯಾಲೆಟ್ ನಲ್ಲಿರುವ ಹಣವನ್ನು ನೀವು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಬಹುದು.
ಆದರೆ ಫೋನ್ ಪೇ ಅಪ್ಲಿಕೇಶನ್ ಯಿಂದ ವ್ಯಾಲೆಟ್ ನಲ್ಲಿರುವ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಕಳುಹಿಸಲು ಸಾಧ್ಯವಿಲ್ಲ.
ನಾವು ಇಲ್ಲಿ ಸೂಚಿಸಿರುವ ಕೆಲವು ವಿಧಾನಗಳನ್ನು ನೀವು ಅನುಕರಿಸಿದರೆ, ಸುಲಭವಾಗಿ ನೀವು ನಿಮ್ಮ ವ್ಯಾಲೆಟ್ ನಲ್ಲಿರುವ ದುಡ್ಡನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು.
ಫೋನ್ ಪೇ ವ್ಯಾಲೆಟ್ ಎಂದರೇನು (PhonePe Wallet in Kannada)
ಇದೊಂದು ಉತ್ತಮವಾದ ಹಾಗೂ ಬಳಸಲು ಸುಲಭವಾದ ಸಾಮಾನ್ಯ ವ್ಯಾಲೆಟ್ ಆಗಿದೆ. ಈ ವ್ಯಾಲೆಟ್ [Wallet] ಅನ್ನು ಬಳಕೆ ಮಾಡಲು ಮೊದಲು ನೀವು KYC ಅನ್ನು ಪೂರ್ಣಗೊಳಿಸಬೇಕಾಗುತ್ತದೆ.
ಇದನ್ನೂ ಓದಿ: ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ
ನಂತರ ನೀವು ಈ ಫೋನ್ ಪೇ ವ್ಯಾಲೆಟ್ ಮೂಲಕ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಫೋನ್ ಪೇ ವ್ಯಾಲೆಟ್ ನಿಂದಾಗುವ ಲಾಭಗಳು (Benefits from PhonePe Wallet in Kannada)
ಮೊದಲೇ ಹೇಳಿದಂತೆ ಫೋನ್ ಪೇ ವ್ಯಾಲೆಟ್ ಅನ್ನು ಬಳಸುವುದರಿಂದ ಹಲವಾರು ಲಾಭಗಳನ್ನು ನೀವು ಪಡೆಯಬಹುದು. ಆ ಲಾಭಗಳು ಈ ಕೆಳಗಿನಂತಿವೆ,
- ಫೋನ್ ಪೇ ವ್ಯಾಲೆಟ್ ನ ಮೂಲಕ ನೀವು ವೇಗವಾದ ಪೇಮೆಂಟ್ ಗಳನ್ನು ಮಾಡಬಹುದು. ಅದು ಕೂಡ ಯಾವುದೇ OTP ಅಥವಾ Pin ಗಳ ಜಂಜಾಟವಿಲ್ಲದೆ.
- ಇದರಲ್ಲಿ ಟಾಪ್-ಅಪ್ ಫೀಚರ್ ಅನ್ನು ಇನ್ ಬಿಲ್ಟ್ ಮಾಡಲಾಗಿದೆ. ಇದರಿಂದ ನಿಮ್ಮ ವ್ಯಾಲೆಟ್ ನಲ್ಲಿ ಹಣದ ಕೊರತೆಯನ್ನು ನಿಯಂತ್ರಣ ಮಾಡಬಹುದು.
- ಸಾಮಾನ್ಯವಾಗಿ ಫೋನ್ ಪೇ ಅಪ್ಲಿಕೇಷನ್ ನಲ್ಲಿ ಕ್ಯಾಷ್ ಬ್ಯಾಕ್ ಗಳು ಸಿಗುವುದು ತುಂಬಾ ವಿರಳ. ಆದರೆ ಅದರ ವ್ಯಾಲೆಟ್ ನಲ್ಲಿ ಈ ಸಮಸ್ಯೆ ಖಂಡಿತಾ ಇರುವುದಿಲ್ಲ.
- ಯಾವುದೇ ರೀತಿಯ ಪೇಮೆಂಟ್ ಗೇಟ್-ವೇ ಯನ್ನು ಬಳಸಿಕೊಂಡು ನಿಮ್ಮ ವ್ಯಾಲೆಟ್ ಅನ್ನು ಟಾಪ್-ಅಪ್ ಮಾಡಬಹುದು. ಉದಾಹರಣೆಗೆ ಕ್ರೆಡಿಟ್ ಕಾರ್ಡ್ & ಯು.ಪಿ.ಐ.
- ಒಂದು ವೇಳೆ ನೀವು ತಪ್ಪಾದ ಪೇಮೆಂಟ್ ಮಾಡಿದ್ದರೆ ಅಥವಾ ನಿಮ್ಮ ವ್ಯವಹಾರ [Transaction] ವಿಫಲವಾದರೆ, ತ್ವರಿತ ರೀಫಂಡ್ ಗಳ [Instant Refund] ಸೌಲಭ್ಯ ಇರುತ್ತದೆ.
- ಉತ್ತಮ ಗುಣಮಟ್ಟದ ಸೆಕ್ಯುರಿಟಿಯೊಂದಿಗೆ ಹಾಗೂ ಯಾವುದೇ ರೀತಿಯ ಸರ್ವರ್ ಡೌನ್ ನ ತೊಂದರೆಯಿಲ್ಲದೆ ತಡೆರಹಿತ ವ್ಯವಹಾರಗಳನ್ನು ನಡೆಸಬಹುದು.
ಫೋನ್ ಪೇ ವ್ಯಾಲೆಟ್ ಅನ್ನು ಸಕ್ರಿಯಗೊಳಿಸಿ (Activate PhonePe Wallet in Kannada)
ಇದು ತುಂಬಾ ಸುಲಭದ ಕೆಲಸ. ಮೊದಲಿಗೆ ಅಪ್ಲಿಕೇಶನ್ ನಲ್ಲಿರುವ ವ್ಯಾಲೆಟ್ ಮೇಲೆ ಕ್ಲಿಕ್ ಮಾಡಿ. ನಂತರ ಐಡಿ ಟೈಪ್ ಅನ್ನು ಆಯ್ಕೆ ಮಾಡಿ [Ex: Pan Card or Voter ID].
ಕೊನೆಗೆ ನಿಮ್ಮ ಐಡಿಯ ನಂಬರನ್ನು ಅಲ್ಲಿ ನಮೂದಿಸುವ ಮೂಲಕ ನಿಮ್ಮ ವ್ಯಾಲೆಟ್ [PhonePe Wallet] ಅನ್ನು ಸಕ್ರಿಯಗೊಳಿಸಬಹುದು.
ಫೋನ್ ಪೇ ನಲ್ಲಿರುವ ಹಣವನ್ನು ಬ್ಯಾಂಕ್ ಗೆ ವರ್ಗಾವಣೆ ಮಾಡಿ (Transfer Money from Wallet to Bank Account)
ಇದು ಹೆಚ್ಚಿನ ಜನರಿಗೆ ಗೊಂದಲ ಹಾಗೂ ತೊಂದರೆ ಮಾಡುವ ವಿಷಯವಾಗಿದೆ. ಫೋನ್ ಪೇ ವ್ಯಾಲೆಟ್ ನಲ್ಲಿರುವ ಹಣವನ್ನು ಹೇಗಪ್ಪಾ ವರ್ಗಾವಣೆ ಮಾಡುವುದು ಎಂದು ಸಾಕಷ್ಟು ಜನ ಚಿಂತೆಗೀಡಾಗಿದ್ದಾರೆ.
ಇದಕ್ಕೆ ಯಾವುದೇ ನೇರವಾದ ವಿಧಾನವಿಲ್ಲದಿದ್ದರೂ, ಒಂದು ಉಪಾಯವನ್ನು ಬಳಸಿ ನಿಮ್ಮ ವ್ಯಾಲೆಟ್ ನಲ್ಲಿರುವ ಹಣ ವರ್ಗಾಗಿಸಬಹುದಾಗಿದೆ. ಅದುವೇ “ಇನ್ವೆಸ್ಟ್” ಮಾಡುವ ಮೂಲಕ.
ಮೊದಲಿಗೆ ನೀವು ಫೋನ್ ಪೇ ಅಪ್ಲಿಕೇಶನ್ ನಲ್ಲಿ ಗೋಲ್ಡ್ ಅಥವಾ ಸಿಲ್ವರ್ ಅನ್ನು ವ್ಯಾಲೆಟ್ ಹಣವನ್ನು ಉಪಯೋಗಿಸಿ ಖರೀದಿ ಮಾಡಬೇಕು.
ನಂತರ ಅದನ್ನು 24 ಗಂಟೆಗಳ ನಂತರ ಪುನಃ ಸೇಲ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಲೆಟ್ ನಲ್ಲಿರುವ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಸುಲಭವಾಗಿ ಬರುತ್ತದೆ.
ಒಮ್ಮೆ ನೀವು ಗೋಲ್ಡ್ ಅಥವಾ ಸಿಲ್ವರ್ ಅನ್ನು ಖರೀದಿಸಿದ ನಂತರ ಅದನ್ನು ತಕ್ಷಣ ಮಾರಾಟ ಮಾಡಲು ಸಾಧ್ಯವಾಗುದಿಲ್ಲ. ಮುಂದಿನ 24 ಗಂಟೆಗಳ ನಂತರವೇ ನೀವು ಅದನ್ನು ಸೇಲ್ ಮಾಡಬಹುದು.
ಫೋನ್ ಪೇ ಅಪ್ಲಿಕೇಷನ್ ಅನ್ನು ಇನ್ ಸ್ಟಾಲ್ ಮಾಡಿ: ಕ್ಲಿಕ್ ಮಾಡಿ