ಸೆಡಾನ್ ಕಾರುಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಐಷಾರಾಮಿ ಕಾರ್ ಎಂದರೆ ಹಲವರಿಗೆ ಪಂಚಪ್ರಾಣ.
ಜರ್ಮನ್ ಕಂಪನಿಯಾದ ಪೋರ್ಷಾ ವು ತನ್ನ ಹೊಸ ಇಲೆಕ್ಟ್ರಿಕ್ ಕಾರ್ ಆದ ಟೈಕಾನ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದರ ಅಪ್ರತಿಮ ವೈಶಿಷ್ಟ್ಯತೆಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.
ಕಂಪನಿಯ ಸರಣಿ ನಿರ್ಮಾಣದಲ್ಲಿ ತಯಾರಾದ ಮೊದಲ ಮಾಡೆಲ್ ಕಾರು ಇದಾಗಿದೆ. ಐಷಾರಾಮಿ ಇಲೆಕ್ಟ್ರಿಕ್ ಕಾರ್ ಇದಾಗಿದ್ದು, ಏ.ಸಿ ಹಾಗೂ ಡಿ.ಸಿ ಕರೆಂಟ್ ಮೂಲಕ ಚಾರ್ಜ್ ಮಾಡಬಹುದಾಗಿದೆ.
ಟೈಕಾನ್ ಕಾರ್ ನ ವೈಶಿಷ್ಟ್ಯತೆ ಗಳು (Taycan Features in Kannada)
ಹೊಚ್ಚ ಹೊಸ ಪೋರ್ಷಾ ಚಾರ್ಜ್ ಪ್ಲ್ಯಾನರ್ ಅನ್ನು ಇದು ಹೊಂದಿದೆ. ಇದರ ಮೂಲಕ ನೀವು ನಿಮ್ಮ ಗುರಿ (Destination) ಅನ್ನು ತಲುಪಲು ಎಷ್ಟು ಚಾರ್ಜ್ ಬೇಕಾಗಬಹುದು ಎಂಬುದನ್ನು ತಿಳಿಯಬಹುದು.
ಇಲೆಕ್ಟ್ರಿಕ್ ಕಾರ್ ನ Exhaust ಸೌಂಡ್ ಬೇಕು ಎನ್ನುವವರಿಗೆ ಇದರಲ್ಲಿ “ಪೋರ್ಷಾ ಇಲೆಕ್ಟ್ರಿಕ್ ಸ್ಪೋರ್ಟ್ಸ್ ಸೌಂಡ್” ಎನ್ನುವ ಮೋಡ್ ಕೂಡ ಇದೆ.
11 kw ನ ಏ.ಸಿ ಚಾರ್ಜರ್ ಮೂಲಕ 8 ಗಂಟೆಗಳಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ. 22kw ನ ಏ.ಸಿ ಚಾರ್ಜರ್ ಮೂಲಕ 4.5 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ ಹಾಗೂ 50kw ಡಿ.ಸಿ ಚಾರ್ಜರ್ ಮೂಲಕ 93 ನಿಮಿಷದಲ್ಲಿ 83% ಚಾರ್ಜ್ ಆಗುತ್ತದೆ.
225kw ನ ಡಿ.ಸಿ ಚಾರ್ಜರ್ ಮೂಲಕ ಕೇವಲ 22.5 ನಿಮಿಷಗಳಲ್ಲಿ 80% ಚಾರ್ಜ್ ಆಗುತ್ತದೆ. ಫುಲ್ ಚಾರ್ಜ್ ಮಾಡಿದರೆ 431 km ಅನ್ನು ಇದು ಕ್ರಮಿಸಬಲ್ಲದು.
ಇದನ್ನೂ ಓದಿ: ಹೊಸ ಟಾಟಾ ಪಂಚ್ ವಿಮರ್ಶೆ
ಕಂಪನಿಯ ಪ್ರಕಾರ ಕಾರಿನಲ್ಲಿ ಸ್ವಲ್ಪ ಚಾರ್ಜ್ ಉಳಿದಿದ್ದರೂ ಸಹ ಇದು ತನ್ನ ಸಾಮರ್ಥ್ಯದಲ್ಲಿ ಯಾವುದೇ ಕೊರತೆಯನ್ನು ತೋರುವುದಿಲ್ಲವಂತೆ.
ಪೋರ್ಷಾ ಚಾರ್ಜಿಂಗ್ ಪ್ಲ್ಯಾನರ್ | ಪೋರ್ಷಾ ಇಲೆಕ್ಟ್ರಿಕ್ ಸ್ಪೋರ್ಟ್ಸ್ ಸೌಂಡ್ |
ಪೋರ್ಷಾ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ಮೆಂಟ್ | ಅಡಾಪ್ಟಿವ್ ಏರ್ ಸಸ್ಪೆನ್ಷನ್ |
ಪೋರ್ಷಾ ಡೈನಾಮಿಮ್ ಚಾಸಿಸ್ ಕಂಟ್ರೋಲ್ | ಪೋರ್ಷಾ 4D ಚಾಸಿಸ್ ಕಂಟ್ರೋಲ್ |
ಆಟೋಮ್ಯಾಟಿಕ್ ಡಿಸ್ಟೆನ್ಸ್ ಕಂಟ್ರೋಲ್ | ಟಾರ್ಕ್ ವೆಕ್ಟ್ ರಿಂಗ್ |
ಸುಮಾರು 5 ಮೀಟರ್ ಉದ್ದ ಹಾಗೂ 1.4 ಮೀಟರ್ ಎತ್ತರವನ್ನು ಇದು ಹೊಂದಿದೆ. 127 ಮಿಲಿಮೀಟರ್ ನ ಗ್ರೌಂಡ್ ಕ್ಲಿಯರೆನ್ಸ್, 2100 ಕೆ.ಜಿ ಕರ್ಬ್ ವೇಯ್ಟ್ ಮತ್ತು 11.7 ಮೀಟರ್ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿದೆ.
2 ಸ್ಪೀಡ್ ಆಟೋಮ್ಯಾಟಿಕ್ ಟ್ರ್ಯಾನ್ಸ್ ಮಿಷನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ವಿವಿಧ ರೀತಿಯ ಡ್ರೈವ್ ಮೋಡ್ ಗಳೊಂದಿಗೆ ಇದು ಲಭ್ಯವಿದೆ. 407 ಲೀಟರ್ ನ ಬೂಟ್ ಸ್ಪೇಸ್ ಅನ್ನೂ ಸಹ ಈ ಟೈಕಾನ್ ಕಾರ್ ನಲ್ಲಿದೆ.
ಟೈಕಾನ್ ನ ಸುರಕ್ಷತಾ ವೈಶಿಷ್ಟ್ಯತೆಗಳು (Taycan Safety Features in Kannada)
ಯಾವುದೇ ವಾಹನವನ್ನು ನಾವು ಕೊಂಡುಕೊಳ್ಳುವ ಮೊದಲು ಅದರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.
ಈ ಪೋರ್ಷಾ ಟೈಕಾನ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಗ್ಲೋಬಲ್ ಎನ್. ಕ್ಯಾಪ್ ಸಹ ಇದಕ್ಕೆ 5 ರಲ್ಲಿ 5 ಸ್ಟಾರ್ ರೇಟಿಂಗ್ ನೀಡಿದೆ.
ಏ.ಬಿ.ಎಸ್ | 10 ಏರ್ ಬ್ಯಾಗ್ಸ್ |
ಪೋರ್ಷಾ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ | ಸೀಟ್ ಬೆಲ್ಟ್ ವಾರ್ನಿಂಗ್ |
ಆಕ್ಟಿವ್ ಲೇನ್ ಕೀಪಿಂಗ್ | ಲೇನ್ ಚೇಂಜ್ ಅಸಿಸ್ಟ್ |
ನೈಟ್ ವಿಷನ್ ಅಸಿಸ್ಟ್ | ರಿಮೋಟ್ ಪಾರ್ಕ್ ಅಸಿಸ್ಟ್ |
ಆಕ್ಟಿವ್ ಪಾರ್ಕಿಂಗ್ ಅಸಿಸ್ಟೆನ್ಸ್ | ಸರೌಂಡ್ 3D ವೀವ್ |
ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ | ಪೋರ್ಷಾ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ |
ಮಲ್ಟಿ ಕೊಲ್ಯೂಷನ್ ಬ್ರೇಕ್ | ವೆಹಿಕಲ್ ಮೊನಿಟರಿಂಗ್ |
ರಿಮೋಟ್ ಸೆಂಟರ್ ಲಾಕಿಂಗ್ | ರೆಡಾರ್ ಇಂಟಿರೀಯರ್ ಸರ್ವೈಲೆನ್ಸ್ |
ISO ಫಿಕ್ಸ್ ಚೈಲ್ಡ್ ಸೀಟ್ ಮೌಂಟಿಂಗ್ | ಪ್ರೀ ಟೆನ್ಷನರ್ ಸೀಟ್ ಬೆಲ್ಟ್ಸ್ |
ರಿಯರ್ ಡೀಫಾಗರ್ | ಟಯರ್ ಪ್ರೆಷರ್ ಮೊನಿಟರಿಂಗ್ |
ಟೈಕಾನ್ ನ ವೇರಿಯಂಟ್ಸ್: RWD, Turbo, 4S, Turbo S
ಟೈಕಾನ್ ನ ಬಣ್ಣಗಳು: ಬ್ಲ್ಯಾಕ್, ವೈಟ್, ಫ್ರೋಜನ್ ಬ್ಲೂ, ಬ್ರೌನ್, ರೆಡ್, ಪಿಂಕ್, ಗ್ರೇ, ಸಿಲ್ವರ್, ಗ್ರೀನ್, ಬೀಜ್ ಸೇರಿದಂತೆ 17 ಬಣ್ಣಗಳಲ್ಲಿ ಲಭ್ಯವಿದೆ
ಟೈಕಾನ್ ನ ವೀಲ್ಹ್: 19, 20, 21 ಇಂಚ್ ನ ಅಲೋಯ್ಸ್
ಟೈಕಾನ್ ನ ಬೆಲೆ: ₹1.5 ಕೋಟಿ – ₹2.29 ಕೋಟಿ ರೂಪಾಯಿಗಳು (Ex-showroom, Delhi)
ಸ್ನೇಹಿತರೇ, ಇದಿಷ್ಟು ಪೋರ್ಷಾ ಟೈಕಾನ್ ಐಷಾರಾಮಿ ಇಲೆಕ್ಟ್ರಿಕ್ ಕಾರ್ ನ ಬಗ್ಗೆ ಒಂದು ಸಣ್ಣ ಮಾಹಿತಿ. ಇಷ್ಟವಾಗಿದ್ದರೆ, ನಿಮ್ಮವರೊಂದಿಗೆ ಹಂಚಿಕೊಳ್ಳಿ.