ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ಎಸ್ | Range Rover Velar R-Dynamic S in Kannada

ಮಾರ್ಚ್ 1, 2017 ರಂದು ಬಿಡುಗಡೆಯಾದ ರೇಂಜ್ ರೋವರ್ ನ, ವೇಲಾರ್ ಸರಣಿಯ ಹೊಚ್ಚ ಹೊಸ “ವೇಲಾರ್ ಆರ್-ಡೈನಾಮಿಕ್ ಎಸ್” ಎಂಬ ಹೆಸರಿನ ಕಾರೊಂದನ್ನು ಲ್ಯಾಂಡ್ ರೋವರ್ ಕಂಪನಿಯು ಬಿಡುಗಡೆ ಮಾಡಿದೆ.

ಈ SUVಯು ಬ್ರಿಟಿಷ್ ಆಟೋಮೋಟಿವ್ ಕಂಪೆನಿಯಾದ ಜಾಗ್ವಾರ್ ನ ಅಡಿಯಲ್ಲಿ ತಯಾರಾಗಿದೆ.

ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ನ ವಿಶಿಷ್ಟತೆಗಳು (Range Rover Velar R-Dynamic Specifications)

ವೇಲಾರ್ ಕಾರು 2021 ರ ಹೊಸ ಡಿಸೈನ್ ಅನ್ನು ಹೊಂದಿದ್ದು, ಇದರ ಹಿಂದಿನ ಸರಣಿಯ Evoque ಮತ್ತು Sport ನ ರೀತಿಯಲ್ಲೆ ಕಾಣುತ್ತದೆ.

ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ಎಸ್ | Range Rover Velar R-Dynamic S in Kannada

ಸರಿ ಸುಮಾರು ₹83.33 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಈ ಕಾರು, ಪೆಟ್ರೋಲ್ & ಡೀಸೆಲ್ ಎರಡು ವಿಧದಲ್ಲಿ ಬರುತ್ತದೆ.

4.8 ಮೀಟರ್ ಉದ್ದ ಮತ್ತು 1.7 ಮೀಟರ್ ಎತ್ತರವನ್ನು ಇದು ಹೊಂದಿದೆ. ಈ ಕಾರನ್ನು ನೀವು 580mm ವರೆಗೆ ನೀರಿನಲ್ಲಿಯೂ ಸಹ ಓಡಿಸಬಹುದಾಗಿದೆ.

ಇಲೆಕ್ಟ್ರಾನಿಕ್ ಏರ್ ಸಸ್ಪೆನ್ಷನ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 50mm ವರೆಗೆ ಈ ಕಾರಿನ ಎತ್ತರವನ್ನು ಹೆಚ್ಚಿಸಬಹುದು. ಎಲ್ಲಾ ವೀಲ್ ಗಳಿಗೂ ಸಮನಾದ ಟಾರ್ಕ್ ಅನ್ನು ಪ್ರಸರಿಸಲು Rear Axle Open Differential ಅನ್ನು ಸಹ ಇದು ಹೊಂದಿದೆ.

ವೇಲಾರ್ ನ ಶೇಕಡಾ 82% ರಚನೆಯು ಅಲ್ಯೂಮಿನಿಯಂ ನಿಂದ ಕೂಡಿದೆ ಮತ್ತು ಕಾರಿನ 50% ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾಗಿದೆ.

ರೇಂಜ್ ರೋವರ್ ವೇಲಾರ್ ನ ಸುರಕ್ಷತಾ ವೈಶಿಷ್ಟ್ಯತೆಗಳು (Velar Safety Features in Kannada)

ಯಾವುದೇ ವಾಹನದಲ್ಲಾದರೂ ಸುರಕ್ಷತೆ ಎಂಬುದು ಬಹು ಮುಖ್ಯವಾಗಿದೆ. ರೇಂಜ್ ರೋವರ್ ನ ಈ ಕಾರಿನಲ್ಲಿ ಸುರಕ್ಷತಾ ಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಇನ್ನಷ್ಟು ಆಟೋಮೋಟಿವ್ ಸುದ್ದಿಗಳನ್ನು ಓದಿ: ಕ್ಲಿಕ್ ಮಾಡಿ

ಆರು (6) ಏರ್ ಬ್ಯಾಗ್, EBD and ABS, ಸೀಟ್ ಬೆಲ್ಟ್ ರಿಮೈಂಡರ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ರೋಲ್ ಸ್ಟೆಬಿಲಿಟಿ ಕಂಟ್ರೋಲ್, ಕೀ ಲೆಸ್ ಎಂಟ್ರಿ, Electronic Traction Control, ಹಿಲ್ ಲಾಂಚ್ ಅಸಿಸ್ಟ್, ಹಿಲ್ ಡೀಸೆಂಟ್ ಕಂಟ್ರೋಲ್, 3D Surround Camera, ಟಯರ್ ಪ್ರೆಷರ್ ಮೊನಿಟರ್, ಎಮರ್ಜೆನ್ಸಿ ಕಾಲ್, ಪವರ್ ಚೈಲ್ಡ್ ಲಾಕ್ ಮತ್ತು ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳನ್ನು ಇದು ಹೊಂದಿದೆ.

ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ಎಸ್ | Range Rover Velar R-Dynamic S in Kannada

ಎಲ್ಲಾ ರೀತಿಯ ವಿಧ ವಿಧವಾದ ಟೆಸ್ಟ್ ಗಳನ್ನು ಮಾಡಿದ ನಂತರ, ಈ ಕಾರಿಗೆ ಯುರೋ ಎನ್ ಕ್ಯಾಪ್ 5 ರಲ್ಲಿ 5 ಸ್ಟಾರ್ ಗಳನ್ನು ನೀಡಿದೆ.

ವೇಲಾರ್ ನ ಮತ್ತಿತರ ವೈಶಿಷ್ಟ್ಯತೆಗಳು (More About Velar in Kannada)

ಕಾರಿನ ಲಗೇಜ್ ಸ್ಪೇಸ್ ಅಥವಾ ಬೂಟ್ ಸ್ಪೇಸ್ ನ ಬಗ್ಗೆ ಹೇಳುವುದಾದರೆ, ಈ ಕಾರು 552 ಲೀಟರ್ ನ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ಹಿಂದಿನ ಸೀಟ್ ಗಳನ್ನು ಮಡಚಿದರೆ 1358 ಲೀಟರ್ ನಷ್ಟು ಜಾಗ ಸಿಗುತ್ತದೆ.

ಕಾರಿನ ನಾಲ್ಕು ಡೋರ್ ಗಳಲ್ಲಿ ರಿಕ್ವೆಸ್ಟ್ ಸೆನ್ಸಾರ್ ಗಳ ಜೊತೆಗೆ Flush Deployable ಡೋರ್ ಹ್ಯಾಂಡಲ್ ಗಳನ್ನು ಈ ಕಾರು ಹೊಂದಿದೆ. ಉತ್ತಮ ಗುಣಮಟ್ಟದ 400 ವ್ಯಾಟ್ ನ ಮೆರಿಡಿಯನ್ ಕಂಪನಿಯ Sound ಸಿಸ್ಟಮ್ ಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಸುಮಾರು ಹದಿನಾಲ್ಕು ತರ ತರಹದ ರೀತಿಯಲ್ಲಿ ಸರಿಪಡಿಸಿಕೊಳ್ಳಬಹುದಾದ ಫ್ರಂಟ್ ಸೀಟ್ ಗಳನ್ನು ಇದು ಹೊಂದಿದೆ. ಫಿಕ್ಸ್ಡ್ ಪ್ಯಾನರಾಮಿಕ್ ರೂಫ್ ಅನ್ನು ಸಹ ಈ ಕಾರಿನಲ್ಲಿ ನೋಡಬಹುದು.

  • ಹೊಸ ವೇಲಾರ್ ನ ಟ್ರಾನ್ಸ್ ಮಿಷನ್: ZF 8HP 45, 8 ಸ್ಪೀಡ್ ಆಟೋ ಮ್ಯಾಟಿಕ್ ಟ್ರಾನ್ಸ್ ಮಿಷನ್
  • ವೇಲಾರ್ ಎಸ್ ನ ಸ್ಟೇರಿಂಗ್: ಸ್ಪೀಡ್ ಪ್ರಪೋರ್ಶನಲ್ ಇಲೆಕ್ಟ್ರಾನಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್
  • ರೇಂಜ್ ರೋವರ್ ವೇಲಾರ್ ಎಸ್ ವೇರಿಯಂಟ್ಸ್: P250 AWD & D200 AWD
  • ವೇಲಾರ್ ಎಸ್ ನ ವೀಲ್: 20 inch, 7 ಸ್ಪೋಕ್ ಗ್ಲೋಸ್ ಸ್ಪಾರ್ಕಲ್ ಸಿಲ್ವರ್ ಅಲೋಯ್
  • ಡೈನಾಮಿಕ್ ವೇಲಾರ್ ಎಸ್ ನ ಕಲರ್ಸ್: ಬ್ಲ್ಯಾಕ್, ಸಿಲ್ವರ್, ಬ್ಲೂ & ಫ್ಯೂಜಿ ವೈಟ್
  • ನೂತನ ವೇಲಾರ್ ಎಸ್ ನ ಬೆಲೆ: ₹83.33 ಲಕ್ಷ [Ex-Showroom, Delhi]
ಪೆಟ್ರೋಲ್ ಇಂಜಿನ್ ವೇರಿಯಂಟ್
1997 cc, ಇನ್ ಲೈನ್-4 ಸಿಲಿಂಡರ್, ಟರ್ಬೋ ಚಾರ್ಜಡ್, P250, ಜಾಗ್ವಾರ್ ನ AJ200 ಇಂಜಿನ್ ಅನ್ನು ಇದು ಹೊಂದಿದೆ. ಸುಮಾರು 247 HP ಯ ಪವರ್ ಹಾಗೂ 365 Nm ನ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಸುಮಾರು 217 kmph ನ ಟಾಪ್ ಸ್ಪೀಡ್ ತಲುಪುತ್ತದೆ ಮತ್ತು 0-100 ರ ಸ್ಪೀಡ್ ಅನ್ನು 7.5 ಸೆಕೆಂಡ್ ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ. 82 ಲೀಟರ್ ನ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಸಾಮಾನ್ಯವಾಗಿ 13 kmpl ನ ಮೈಲೇಜ್ ಕೊಡುತ್ತದೆ.
ಡೀಸೆಲ್ ಇಂಜಿನ್ ವೇರಿಯಂಟ್
1998 cc, ಇನ್ ಲೈನ್-4 ಸಿಲಿಂಡರ್, ಟರ್ಬೋ ಚಾರ್ಜಡ್, D200, ಜಾಗ್ವಾರ್ ನ AJ200 ಇಂಜಿನ್ ಅನ್ನು ಇದು ಹೊಂದಿದೆ. ಸುಮಾರು 201 HP ಯ ಪವರ್ ಹಾಗೂ 430 Nm ನ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಸುಮಾರು 210 kmph ನ ಟಾಪ್ ಸ್ಪೀಡ್ ತಲುಪುತ್ತದೆ ಮತ್ತು 0-100 ರ ಸ್ಪೀಡ್ ಅನ್ನು 8.2 ಸೆಕೆಂಡ್ ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ. 66 ಲೀಟರ್ ನ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಸಾಮಾನ್ಯವಾಗಿ 18 kmpl ನ ಮೈಲೇಜ್ ಕೊಡುತ್ತದೆ.

ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ಎಸ್ | Range Rover Velar R-Dynamic S in Kannada

ವೇಲಾರ್ ನ ಮತ್ತಿತರ ವೈಶಿಷ್ಟ್ಯತೆಗಳು
ಇಲೆಕ್ಟ್ರಿಕ್ ಪವರ್ ಫೋಲ್ಡ್ ಮಿರರ್ ಗಳು ಅಪ್ರೋಚ್ ಲೈಟ್ & ಕ್ಯಾಮೆರಾದೊಂದಿಗೆ1900 KG ಕರ್ಬ್ ವೇಯ್ಟ್
2400 KG ಲೋಡ್ ಎಳೆಯಬಲ್ಲದು588mm ವರೆಗೆ ನೀರಿನಲ್ಲಿ ಇಳಿಯಬಲ್ಲದು
12 ಮೀಟರ್ ಟರ್ನಿಂಗ್ ಸರ್ಕಲ್196mm ಗ್ರೌಂಡ್ ಕ್ಲಿಯರೆನ್ಸ್
ಅಡಾಪ್ಟಿವ್ ಡೈನಾಮಿಕ್ಸ್ರಿಯರ್ ಎಕ್ಸೆಲ್ ಒಪೆನ್ ಡಿಫ್ರೆಂಶಿಯಲ್
ಟರೈನ್ ರೆಸ್ಪೋನ್ಸ್ 2ವೇಯ್ಟ್ ಸೆನ್ಸಿಂಗ್
ಸಿಂಗಲ್ ಸ್ಪೀಡ್ ಟ್ರಾನ್ಸ್ ಫರ್ ಬಾಕ್ಸ್ಪೇರಿಮೆಟ್ರಿಕ್ & ವಲ್ಯೂಮೆಟ್ರಿಕ್ ಪ್ರೊಟೆಕ್ಷನ್
ಲೋ ಟ್ರ್ಯಾಕ್ಷನ್ ಲಾಂಚ್ಆಲ್ ವೀಲ್ಹ್ ಡ್ರೈವ್

1 thought on “ರೇಂಜ್ ರೋವರ್ ವೇಲಾರ್ ಆರ್-ಡೈನಾಮಿಕ್ ಎಸ್ | Range Rover Velar R-Dynamic S in Kannada”

Leave a comment