ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವುದಾದರೂ ಫೋಟೋ, ವಿಡಿಯೋ ಅಥವಾ ಇನ್ಯಾವುದೇ ಪೋಸ್ಟ್ ಗಳನ್ನು ಅಪ್ ಲೋಡ್ ಮಾಡಿದರೆ, ಸಾಮಾನ್ಯವಾಗಿ ಅದು ಅಷ್ಟೇನು ವೈರಲ್ ಆಗಲ್ಲ.
ಇದಕ್ಕೆ ಮುಖ್ಯ ಕಾರಣ ನಿಮ್ಮ ಪೋಸ್ಟ್ ನಲ್ಲಿ ಮಾಡಬೇಕಾಗಿರುವ SEO. ಇದರ ಕಾರಣದಿಂದ ನಿಮ್ಮ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದಿಲ್ಲ. ಹಾಗಾದರೆ ಇದಕ್ಕೆ ಪರಿಹಾರ ಏನು ?
ನಮ್ಮ ಪೋಸ್ಟ್ ಗಳನ್ನು ಯಾವ ರೀತಿಯಲ್ಲಿ SEO Friendly ಮಾಡಬೇಕು ? ಏನು ಈ SEO ಎಂಬುದನ್ನು ನಾವಿಲ್ಲಿ ವಿವರವಾಗಿ ವಿಸ್ತಾರ ಪಡಿಸಿದ್ದೇವೆ.
SEO ಎಂದರೇನು (What is SEO in Kannada)
ಸರ್ಚ್ ಇಂಜಿನ್ ಆಪ್ಟಿಮೈಸೇಷನ್ [Search Engine Optimization] ಎಂಬುದು ಇದರ ಪೂರ್ಣ ರೂಪ. ನಾವು ನಮ್ಮ ಪೋಸ್ಟ್ ನಲ್ಲಿ ಮಾಡುವ ಕೆಲವೊಂದು ರೀತಿಯ ಸೆಟ್ಟಿಂಗ್ ಗಳನ್ನು SEO ಎನ್ನುತ್ತಾರೆ.
ಉದಾಹರಣೆಗೆ, ಪೋಸ್ಟ್ ನಲ್ಲಿ ಹ್ಯಾಶ್ ಟ್ಯಾಗ್ ಗಳನ್ನು ಅಥವಾ ಟ್ಯಾಗ್ ಗಳನ್ನು ಬಳಸುವುದು. ಜಾಹೀರಾತುಗಳನ್ನು ರನ್ ಮಾಡುವುದು. ಅದರಲ್ಲಿ ಲೊಕೇಶನ್ ಗಳನ್ನು ಜೋಡಿಸುವುದು ಮತ್ತು ಹೆಚ್ಚು ಹೆಚ್ಚು ಶೇರ್ ಮಾಡುವುದು.
ಇನ್ನೂ ಸುಲಭವಾಗಿ ಹೇಳುವುದಾದರೆ ನಿಮ್ಮ ಕಂಟೆಂಟ್ ಗಳನ್ನು ಗೂಗಲ್ ನಲ್ಲಿ ಅಥವಾ ಯಾವುದೇ ಫ್ಲ್ಯಾಟ್ ಫಾರ್ಮ್ ನಲ್ಲಿ Rank ಮಾಡಲು ಅವುಗಳನ್ನು ಉತ್ತಮಗೊಳಿಸುವುದು.
ಪವರ್ ಫುಲ್ SEO ಟಿಪ್ಸ್ (SEO Tips in Kannada)
ನಿಮ್ಮ ಫೋಟೋ ಅಥವಾ ವಿಡಿಯೋ ಗಳನ್ನು ಗೂಗಲ್ ನಲ್ಲಿ Rank ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲನೆ ಮಾಡಿ.
- ಸರಿಯಾದ ವಿಷಯವನ್ನು ಆಯ್ಕೆ ಮಾಡಿ
- ಉತ್ತಮ ಗುಣಮಟ್ಟದ ಕೀವರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳಿ
- ಆಕರ್ಷಕ ಫೋಟೋ ಗಳನ್ನು ಬಳಸಿ
- ಸೂಕ್ತ ಕೀವರ್ಡ್ ಗಳನ್ನು ಬಳಸಿ, ಒಳ್ಳೆಯ ಪೋಸ್ಟ್ ಅನ್ನು ತಯಾರಿಸಿ
- ನೀವು ವೆಬ್ ಸೈಟ್ ಅನ್ನು ಬಳಸುತ್ತಿದ್ದರೆ, ಅದರ ಲೋಡ್ ಟೈಮ್ ಅನ್ನು ಸುಧಾರಿಸಿ
- ಮೆಟಾ ಡಿಸ್ ಕ್ರಿಪ್ಷನ್ ಅನ್ನು ಫೋಕಸ್ ಕೀವರ್ಡ್ ಬಳಸಿ ಬರೆಯಿರಿ
- ಹೆಡ್ಡಿಂಗ್ ಮತ್ತು ಟ್ಯಾಗ್ ಲೈನ್ ಅನ್ನು ಆಕರ್ಷಕ ರೀತಿಯಲ್ಲಿ ಬರೆಯಿರಿ
- ಇಂಟರ್ ನಲ್ ಲಿಂಕಿಂಗ್ ಮಾಡಿ
ಈ ಎಲ್ಲಾ ಸುಲಭ ವಿಧಾನದ ಟಿಪ್ಸ್ ಗಳನ್ನು ನೀವು ಸರಿಯಾಗಿ ಪಾಲಿಸಿದರೆ, ನಿಮ್ಮ ಪೋಸ್ಟ್ ಗಳು ಸುಲಭವಾಗಿ ಬೂಸ್ಟ್ [Boost] ಆಗುತ್ತದೆ.
ಗಮನಿಸಬೇಕಾದ SEO ಮೆಟ್ರಿಕ್ಸ್ ಗಳು ( SEO Metrics to Track)
ಯಾವುದೇ ಪೋಸ್ಟ್ ನ SEO ಮಾಡುವಾಗ ಅಥವಾ ಮಾಡಿದ ಮೇಲೆ ಕೆಲವು ಮೆಟ್ರಿಕ್ಸ್ ಗಳನ್ನು ಗಮನಿಸಬೇಕು. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
- ಓದುವಿಕೆ [Readability]
- ನೋಡುಗರ ಸಂಖ್ಯೆ [Impressions]
- ಕ್ಲಿಕ್ ಥ್ರೂ ರೇಟ್ [CTR]
- ಬ್ಯಾಕ್ ಲಿಂಕ್ಸ್ [Backlinks]
- ಆಪ್ಟಿಮೈಸೇಷನ್ ಸ್ಕೋರ್ [Optimization Score]
- ಬೌನ್ಸ್ ರೇಟ್ [Bounce Rate]
- ಶ್ರೇಯಾಂಕ [Ranking]
ಇವಿಷ್ಟು ಮುಖ್ಯವಾಗಿ ಗಮನಿಸಬೇಕಾದ ಮೆಟ್ರಿಕ್ಸ್ ಗಳು. ಇದನ್ನು ಬಿಟ್ಟು ಇನ್ನೂ ಹಲವು ಮೆಟ್ರಿಕ್ಸ್ ಗಳು ನಿಮಗೆ ಆನ್ ಲೈನ್ ನಲ್ಲಿ ಕಾಣ ಸಿಗುತ್ತದೆ.
SEO ಮೂಲಕ ಯೂಟ್ಯೂಬ್ ವಿಡಿಯೋ ವೈರಲ್ ಮಾಡಿ (SEO on YouTube Video)
ಭಾರತದಲ್ಲಿ ಅತೀ ಹೆಚ್ಚು ಬಳಸುವ ಸಾಮಾಜಿಕ ಜಾಲತಾಣವೆಂದರೆ ಅದು ಯೂಟ್ಯೂಬ್. ಇದರಲ್ಲಿ ಚಾನೆಲ್ ಗಳನ್ನು ಮಾಡಿ ಸಾಕಷ್ಟು ಜನ ಹಣ ಗಳಿಸುತ್ತಿದ್ದಾರೆ.
ಆದರೆ ಹಣ ಮಾಡಲು ಮುಖ್ಯವಾಗಿ ವಿಡಿಯೋನಲ್ಲಿ ವೀವ್ಸ್ ಬರಬೇಕು. ವೀವ್ಸ್ ಬರಲು ನಿಮ್ಮ ವಿಡಿಯೋ ನಲ್ಲಿ SEO ಅನ್ನು ಮಾಡಬೇಕು.
ಮೊದಲಿಗೆ ನಿಮ್ಮ ವಿಡಿಯೋ ದ ಟೈಟಲ್ ಸರಿಯಾಗಿ ಬರೆಯಬೇಕು ಮತ್ತು ಅದರ ಡಿಸ್ ಕ್ರಿಪ್ಷನ್ ಸರಿಯಾಗಿರಬೇಕು.
ಉದಾಹರಣೆಗೆ: ನಮ್ಮ ವಿಡಿಯೋ ರೇಂಜ್ ರೋವರ್ ಕಾರ್ ನ ಬಗ್ಗೆ ಅಂದು ಕೊಳ್ಳೋಣ. ನಾವು ಅದರ SEO ಈ ಕೆಳಗಿನಂತೆ ಮಾಡುತ್ತೇವೆ.
Title: Range Rover Explained in Kannada.
Description: ಇದರಲ್ಲಿ ನಮ್ಮ ಟಾಪಿಕ್ ನ ಸಾರಾಂಶವನ್ನು ಬರೆಯಬೇಕು. ಸಾಧ್ಯವಾದರೆ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ.
Thumbnail: ಆಕರ್ಷಕ Thumbnail ಹಾಕುವುದು ಬಹು ಮುಖ್ಯವಾದ ಕೆಲಸ.
ಇದಾದ ಮೇಲೆ ಯೂಟ್ಯೂಬ್ ಸ್ಟುಡಿಯೋದ ಮೂಲಕ SEO ಮಾಡಬೇಕಾಗುತ್ತದೆ. ಅದರಲ್ಲಿ ನಿಮ್ಮ ವಿಡಿಯೋಗೆ ಟ್ಯಾಗ್ ಗಳನ್ನು Add ಮಾಡಬೇಕು. ಹಾಗೆಯೇ ಅದರ ಕ್ಯಾಟಗರಿಯನ್ನು ಸಹ ಆಯ್ಕೆ ಮಾಡಿ.
ಇದಿಷ್ಟು SEO ದ ಪ್ರಮುಖ ಅಂಶಗಳು. ಈ ಲೇಖನ ಹೇಗಿದೆ ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.