ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ಕಳೆದ ಒಂದೆರಡು ತಿಂಗಳಿಂದ ಕುಸಿಯುತ್ತಿರುವುದು ನಿಮಗೆಲ್ಲಾ ಗೊತ್ತಿರಬಹುದು. ಆದರೆ ಈ ಕುಸಿದ ಮಾರುಕಟ್ಟೆಯಲ್ಲೂ ಕೇಳಿ ಬರುತ್ತಿರುವುದು ಒಂದೇ ಹೆಸರು, ಅದುವೇ ಶಿಬಾ [Shiba Coin].
ಬಿಟ್ ಕಾಯಿನ್ ಪ್ರಕರಣದ ಪರಿಣಾಮವಾಗಿ ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯು ಭಾಗಶಃ ಮುಳುಗಿ ಹೋಗಿದೆ. ಆದರೆ ಈ ಸಮಯ ನಿಮಗೆ ಹಣವನ್ನು ಹೂಡಿಕೆ ಮಾಡಲು ಸುದಿನವಾಗಿದೆ.
ಮಾರುಕಟ್ಟೆಯಲ್ಲಿ ಈಗಲೂ ಸಹ ಉತ್ತಮ ಕಾಯಿನ್ ಗಳು ಪ್ರಚಲಿತದಲ್ಲಿವೆ. ಉದಾಹರಣೆಗೆ ಬಿಟ್ ಕಾಯಿನ್, ಇಥೀರಿಯಮ್, ಲೈಟ್ ಕಾಯಿನ್, ರಿಪ್ಪಲ್ ಹಾಗೂ ಇತ್ಯಾದಿ.
ಇವುಗಳನ್ನೆಲ್ಲ ಮೀರಿಯೂ ಶಿಬಾ ಇನು [Shiba Inu] ಎಂಬ ಕಾಯಿನ್ ಒಂದು ಎಲ್ಲರ ಮನದಲ್ಲಿಯೂ ಅಚ್ಚು ಮೂಡಿಸಿದೆ.
ಏನಿದು ಶಿಬಾ ಇನು ಕಾಯಿನ್ (Shiba Inu Coin Explained in Kannada)
ಇದೊಂದು ಮೀಮ್ ಕಾಯಿನ್ ಆಗಿದ್ದು, ಸರಿ ಸುಮಾರು $19 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದೆ. ಕಳೆದ ಅಕ್ಟೊಬರ್ ತಿಂಗಳಲ್ಲಿ 1000% ಗೂ ಅಧಿಕ ರಿಟರ್ನ್ಸ್ ಅನ್ನು ನೀಡಿದೆ.
ಇದರ ಪವರ್ ಅನ್ನು ಅರಿತ ಹಲವು ದೊಡ್ಡ ದೊಡ್ಡ ಕಂಪನಿಗಳು ಈಗಾಗಲೇ ಶಿಬಾ ಕಾಯಿನ್ ಮೇಲೆ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಈಗ ಇದರ ಪ್ರಸ್ತುತ ಬೆಲೆ ಸುಮಾರು ₹0.002563 ಯಷ್ಟಿದೆ [in Dec 11, 2021].
ಇತ್ತೀಚಿಗಷ್ಟೇ ಆಸ್ಟ್ರೇಲಿಯಾದ “ಪ್ಲೇ ಸೈಡ್” ಎನ್ನುವ ಗೇಮಿಂಗ್ ಕಂಪನಿಯೊಂದು ಪಾಲುದಾರಿಕೆಯನ್ನು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಶಿಬಾ ವು ಶೇರ್ ಮಾಡಿದೆ. ಇದು ಈ ಕಾಯಿನ್ ನ ಸಂಭಾವ್ಯ ವನ್ನು ಹೆಚ್ಚಿಸಿದೆ.
#ShibArmy we’re so excited for the future!
Let’s give a warm welcome to @PlaysideStudios x Shiba Inu Games! pic.twitter.com/adXVHrurIC
— Shib (@Shibtoken) December 8, 2021
ಶಿಬಾ ಕಾಯಿನ್ ನಲ್ಲಿ ಹೂಡಿಕೆ (Investment in Shiba in Kannada)
ಒಂದು ವೇಳೆ ನೀವು ದೀರ್ಘಾವಧಿಯವರೆಗೆ ನಿಮ್ಮ ಹಣವನ್ನು ಹೋಲ್ಡ್ ಮಾಡಲು ಬಯಸಿದರೆ ಶಿಬಾ ಕಾಯಿನ್ ನಿಮಗೆ ಉತ್ತಮ ರೀತಿಯ ರಿಟರ್ನ್ಸ್ ಅನ್ನು ನೀಡಬಹುದು.
ಬರೋಬ್ಬರಿ ಹತ್ತು ಲಕ್ಷಕ್ಕೂ ಅಧಿಕ ಜನರು ಈಗಾಗಲೇ ಸಾಕಷ್ಟು ಹಣವನ್ನು ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಅವರೆಲ್ಲರೂ ಶಿಬಾ ಕಾಯಿನ್ ನ ಪಂಪಿಂಗ್ ಗಾಗಿ ಕಾಯುತ್ತಿದ್ದಾರೆ.
ನಿಮ್ಮ ಬಳಿ ಕಡಿಮೆ ಹಣವಿದ್ದರೆ ಕಾಯಿನ್ ಡಿಸಿಎಕ್ಸ್ [Coin DCX] ಆಪ್ ನ ಮೂಲಕ ಕಡಿಮೆಯೆಂದರೂ ₹10 ರೂಪಾಯಿ ಮೂಲಕ ಬಿಟ್ ಕಾಯಿನ್, ಶಿಬಾ ಅಥವಾ ಇನ್ಯಾವುದೇ ಕ್ರಿಪ್ಟೋ ಕರೆನ್ಸಿಯ ಮೇಲೆ ಹೂಡಿಕೆ ಮಾಡಬಹುದು.
ಇಲ್ಲಿಂದ Coin DCX ಆಪ್ ಇನ್ ಸ್ಟಾಲ್ ಮಾಡಿ ಶಿಬಾ ಆರ್ಮಿ ಗೆ ಸೇರಿಕೊಳ್ಳಿ: Join Now
ಶಿಬಾ ಕಾಯಿನ್ ನ ಬೆಲೆ ಬಗ್ಗೆ ಮಾಹಿತಿ (Shiba Inu Coin Price Prediction)
ಈ ಕಾಯಿನ್ ನ ಬೆಲೆಯ ಬಗ್ಗೆ ಸರಿಯಾದ ಮಾಹಿತಿ ಯಾರಿಗೂ ದೊರೆತಿಲ್ಲ. ಆದರೆ ಹೂಡಿಕೆದಾರರು ಇದರ ಬೆಲೆ ₹1 ರೂಪಾಯಿ ತಲುಪಲೆಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಇದರ ಬೆಲೆ (Value) ₹1 ರೂಪಾಯಿಗೆ ತಲುಪಿದರೆ ಇದರ ಮಾರ್ಕೆಟ್ ಕ್ಯಾಪ್ ಸುಮಾರು $5 ಟ್ರಿಲಿಯನ್ ಡಾಲರ್ ನಷ್ಟು ಆಗುತ್ತದೆ. ಆದರೆ ಈ ಸಂದರ್ಭದಲ್ಲಿ ಎಲ್ಲಾ ಕಾಯಿನ್ ನ ಮಾರ್ಕೆಟ್ ಕ್ಯಾಪ್ ಅನ್ನು ಜೋಡಿಸಿದರೆ ಸರಿ ಸುಮಾರು $2 ಟ್ರಿಲಿಯನ್ ಡಾಲರ್ ನಸ್ಟಾಗುತ್ತದೆ.
ಹೇಳುವುದಾದರೆ ಒಂದು ಹಂತದಲ್ಲಿ ಇದು ₹1 ರೂಪಾಯಿಯನ್ನು ತಲುಪುವುದು ಅಸಾಧ್ಯದ ಮಾತು. ಆದರೆ ಕ್ರಿಪ್ಟೋ ಕರೆನ್ಸಿಯ ವಿಚಾರದಲ್ಲಿ ಏನು ಬೇಕಾದರೂ ನಡೆಯಬಹುದು.
ನೀವು ಮೊದಲ ಬಾರಿಗೆ ಹೂಡಿಕೆ ಮಾಡುತ್ತಿದ್ದರೆ, ದಯವಿಟ್ಟು ಅತೀ ಹೆಚ್ಚು ಹಣವನ್ನು ಹೂಡಿಕೆ ಮಾಡಬೇಡಿ. ಸೂಕ್ತವಾದ ಮಾಹಿತಿಯನ್ನು ಪಡೆದುಕೊಂಡು ಹೂಡಿಕೆ ಮಾಡುವುದು ಉತ್ತಮ.
ಇದಿಷ್ಟು ಶಿಬಾ ಕಾಯಿನ್ [Shiba Coin] ನ ಬಗ್ಗೆ ಸಣ್ಣ ಮಾಹಿತಿ. ಇಷ್ಟವಾಗಿದ್ದರೆ ಹೆಚ್ಚು ಹೆಚ್ಚು ಶೇರ್ ಮಾಡಿ.
Leave a Reply