ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ – Tata Ace Gold Diesel Plus in Kannada

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅವರ ವಾಹನಗಳಿಗೆ ಭಾರಿ ಪ್ರಮಾಣದ ಬೇಡಿಕೆಯಿದೆ. ಅದರಲ್ಲೂ ಭಾರತೀಯ ಜನರು ಹೆಚ್ಚು ಇಷ್ಟ ಪಡುವುದು ಪಿಕ್-ಅಪ್ ಹಾಗೂ ಮಿನಿ ಟ್ರಕ್ ಗಳನ್ನು.

ಇದಕ್ಕೆ ಬಹುದೊಡ್ಡ ಕಾರಣವೆಂದರೆ, ಟಾಟಾ ಕಂಪೆನಿಯವರ ವಾಹನಗಳ ಬೆಲೆ ಹಾಗೂ ಅದರ ಗುಣಮಟ್ಟ.

2005 ನೇ ಇಸವಿಯಲ್ಲಿ ಲಾಂಚ್ ಆದ ಟಾಟಾ ಏಸ್ ಮಿನಿ ಟ್ರಕ್ ಅನ್ನು ನೀವೆಲ್ಲರೂ ನೋಡೇ ಇರುತ್ತೀರಾ. ಇದರ ಫೇಸ್ ಲಿಫ್ಟ್ ವೇರಿಯಂಟ್ ಅದ ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ [Tata Ace Gold Diesel Plus] ಅನ್ನು ಈಗ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ವೋಲ್ವೋ XC60 B5

ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆಂದೆ ಈ ಟಾಟಾ ಏಸ್ ಮಿನಿ ಟ್ರಕ್ ಅನ್ನು ತಯಾರಿಸಲಾಗಿದೆ.

ಟಾಟಾ ಏಸ್ ಗೋಲ್ಡ್ ಪ್ಲಸ್ ನ ವೈಶಿಷ್ಟ್ಯತೆಗಳು (Tata Ace Gold Plus Features in Kannada)

ಉತ್ತಮ ಮೈಲೇಜ್ ನೀಡುವ ಹಾಗೂ ಗಟ್ಟಿ ಮುಟ್ಟಾದ ವಾಹನಗಳನ್ನು ಟಾಟಾ ಮೋಟಾರ್ಸ್ ಅವರು ನೀಡುತ್ತಾರೆ. ಅದರ ಜೊತೆಗೆ ನೂತನ ಫೀಚರ್ಸ್ ಗಳನ್ನು ಸಹ ನೀಡುತ್ತಾರೆ.

ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ - Tata Ace Gold Diesel Plus in Kannada

ಈ ಟಾಟಾ ಏಸ್ ಮಿನಿ ಟ್ರಕ್, ಕಮರ್ಷಿಯಲ್ ಇಂಡಸ್ಟ್ರಿಗಳ ಕೆಲಸಗಳಿಗೆ ಹೆಸರುವಾಸಿಯಾಗಿದೆ. ಇದುವರೆಗೆ ಬರೋಬ್ಬರಿ 23 ಲಕ್ಷಕ್ಕೂ ಅಧಿಕ ಟಾಟಾ ಏಸ್ ಗಾಡಿಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಹೊಸ ಡ್ರೈವರ್ ಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. 27.5% ಗ್ರೇಡೆಬಿಲಿಟಿ ಅನ್ನು ಇದು ಹೊಂದಿದ್ದು, ಇದರಿಂದ ನಿಮಗೆ ಹೆಚ್ಚು ಲೋಡ್ ಕ್ಯಾರಿಂಗ್ ಕ್ಷಮತೆ ಸಿಗುತ್ತದೆ.

ಆಟೋಮೊಬೈಲ್ ಬಗ್ಗೆ ಇನ್ನಷ್ಟು ತಿಳಿಯಿರಿ: ಕ್ಲಿಕ್ ಮಾಡಿ

ಸುಮಾರು 3.8 ಮೀಟರ್ ಉದ್ದ ಹಾಗೂ 1.8 ಮೀಟರ್ ಎತ್ತರವನ್ನು ಇದು ಹೊಂದಿದೆ. 166mm ನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 4.3 ಮೀಟರ್ ಟರ್ನಿಂಗ್ ರೇಡಿಯಸ್ ಅನ್ನೂ ಸಹ ಇದು ಒಳಗೊಂಡಿದೆ.

ಕಾರ್ಗೋ ಬಾಡಿಯು 7.2 ಫೀಟ್ ಉದ್ದ ಮತ್ತು 4.9 ಫೀಟ್ ಅಗಲವನ್ನು ಹೊಂದಿದೆ.

ಮಹಿಂದ್ರ ಸುಪ್ರೋ ಗಿಂತ ಅತೀ ಹೆಚ್ಚು ಬೇಡಿಕೆ ಹಾಗೂ ರೀಸೇಲ್ ವ್ಯಾಲ್ಯೂ ಅನ್ನು ಟಾಟಾ ಏಸ್ [Tata Ace] ವಾಹನವು ಹೊಂದಿದೆ.

ಇನ್ನೂ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ.

750 ಕೆಜಿ ಲೋಡಿಂಗ್ ಕ್ಯಾಪಿಸಿಟಿ1675 ಕೆಜಿ ಗ್ರೋಸ್ ವೇಯ್ಟ್
ಅಪ್ ಟೈಮ್ ಪ್ಲಸ್ಮೈಲೇಜ್ ಪ್ಲಸ್
ಅರ್ನಿಂಗ್ಸ್ ಪ್ಲಸ್ಮೇನ್ ಟೆನೆನ್ಸ್ ಪ್ಯಾಕೇಜ್ (₹40/ ತಿಂಗಳು)
ಸರ್ವೀಸ್ ಗ್ಯಾರಂಟಿಡಿಜಿಟಲ್ ಕ್ಲಸ್ಟರ್

ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ - Tata Ace Gold Diesel Plus in Kannada

ಟಾಟಾ ಏಸ್ ಡೀಸೆಲ್ ಪ್ಲಸ್ ಇಂಜಿನ್
700 cc, ಇನ್ ಲೈನ್-2 ಸಿಲಿಂಡರ್, BS6, DI ಇಂಜಿನ್ ಅನ್ನು ಇದು ಹೊಂದಿದೆ. ಸುಮಾರು 20 HP ಯ ಪವರ್ ಹಾಗೂ 45 Nm ನ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. 30 ಲೀಟರ್ ನ ಇಂಧನ ಟ್ಯಾಂಕ್ ಹೊಂದಿದ್ದು, 23 kmpl ನ ಮೈಲೇಜ್ ಸಿಗುತ್ತದೆ. ಜೊತೆಗೆ 10.5 ಲೀಟರ್ ನ DEF ಟ್ಯಾಂಕ್ ಅನ್ನೂ ಸಹ ಒಳಗೊಂಡಿದೆ.

ವೇರಿಯಂಟ್: ಟಾಟಾ ಏಸ್ ಗೋಲ್ಡ್ ಪ್ಲಸ್
ವೀಲ್ಸ್: 12 inch ಸ್ಟೀಲ್
ಬೆಲೆ: ₹5.68 ಲಕ್ಷ ರೂಪಾಯಿಗಳು [Ex-showroom, Delhi]

Leave a comment