ಭಾರತದಲ್ಲಿ ಅತೀ ಬಲಿಷ್ಠವಾದ ವಾಹನಗಳನ್ನು ತಯಾರಿಸುವ ಏಕೈಕ ಕಂಪನಿಯೆಂದರೆ ಅದು ಟಾಟಾ ಮೋಟಾರ್ಸ್.
ಇದೀಗ ಟಾಟಾ (Tata) ಕಂಪನಿಯು ತನ್ನ ಮೈಕ್ರೋ ಎಸ್.ಯು.ವಿ (Micro SUV) ಆದ ಟಾಟಾ ಪಂಚ್ ಅನ್ನು ಬಿಡುಗಡೆ ಮಾಡಿದೆ. ಇದರ ಬುಕ್ಕಿಂಗ್ ಈಗಾಗಲೇ ಚಾಲ್ತಿಯಲ್ಲಿದೆ.
ಅತೀ ಹೆಚ್ಚಿನ ಸುರಕ್ಷತೆಯೊಂದಿಗೆ ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಗ್ಲೋಬಲ್ ಎನ್.ಕ್ಯಾಪ್ ಈ ಕಾರಿಗೆ 5 ರಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ನೀಡಿದೆ. ಹಾಗಾದರೆ ಈ ಕಾರಿನ ಇನ್ನಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಟಾಟಾ ಪಂಚ್ ನ ವಿವರಗಳು (Tata Punch Specifications in Kannada)
ಹೊಚ್ಚ ಹೊಸ ಡಿಸೈನ್ ನೊಂದಿಗೆ ಈ ಟಾಟಾ ಪಂಚ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದರೆ ತುಂಬಾನೇ ಬೋಲ್ಡ್ ಆದ SUV ವಿನ್ಯಾಸವನ್ನು ಇದರಲ್ಲಿ ಅಳವಡಿಸಲಾಗಿದೆ.
ಇನ್ನಿದರ ವೈಶಿಷ್ಟ್ಯತೆಗಳು (Features) ಬೇರೆ ರೀತಿಯಲ್ಲೇ ಇವೆ. ಬಹಳ ಕಂಫರ್ಟ್ ಸೀಟ್ ಗಳನ್ನು ಹಾಗೂ ಅನುಕೂಲಕರ ಫೀಚರ್ಸ್ ಗಳನ್ನೂ ಇದು ಹೊಂದಿದೆ.
ರೇಂಜ್ ರೋವರ್ ವೇಲಾರ್ ನೋಡಲು: ಕ್ಲಿಕ್ ಮಾಡಿ
ಮುಂದುವರಿದ ಇನ್ಫೋಟೈನ್ ಮೆಂಟ್ ಮತ್ತು ಕನೆಕ್ಟಿವಿಟಿಯನ್ನು ಇದರಲ್ಲಿ ಇನ್ ಸ್ಟಾಲ್ ಮಾಡಲಾಗಿದೆ. ಅದು ಕೂಡ ಐ.ಆರ್.ಎ ಟೆಕ್ನಾಲಜಿಯೊಂದಿಗೆ.
ಟಾಟಾ ಪಂಚ್ ನ ವೈಶಿಷ್ಟ್ಯತೆಗಳು (Tata Punch Features in Kannada)
5 ಸ್ಪೀಡ್ AMT ಟ್ರ್ಯಾಕ್ಷನ್ ಪ್ರೋ ಮೋಡ್ ನೊಂದಿಗೆ | ಕ್ರೂಸ್ ಕಂಟ್ರೋಲ್ |
ಐ.ಎಸ್.ಎಸ್ (ಐಡಲ್ ಸ್ಟಾಪ್ ಸ್ಟಾರ್ಟ್) | ಇಕೋ & ಸಿಟಿ ಡ್ರೈವ್ ಮೋಡ್ಸ್ |
ಅಡ್ವಾನ್ಸ್ಡ್ ಕನೆಕ್ಟಿವಿಟಿ | ಪುಶ್ ಸ್ಟಾರ್ಟ್/ ಸ್ಟಾಪ್ |
ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ | ಲೆಥರ್ ಸ್ಟೀರಿಂಗ್ ವೀಲ್ಹ್ & ಗೇರ್ ನಾಬ್ |
ಆಟೋ ಫೋಲ್ಡ್ ORVM | ಕೂಲಡ್ ಗ್ಲೋವ್ ಬಾಕ್ಸ್ |
ರಿಯರ್ ಆರ್ಮ್ ರೆಸ್ಟ್ | ರಿಯರ್ ವೈಪರ್ & ವಾಷ್ |
25+ ಯುಟಿಲಿಟಿ ಸ್ಪೇಸ್ | ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ |
ಟಿಲ್ಟ್ ಸ್ಟೀರಿಂಗ್ | ಫಾಲೋ ಮೀ ಹೋಮ್ ಹೆಡ್ ಲ್ಯಾಂಪ್ಸ್ |
ಟಾಟಾ ಪಂಚ್ ನ ಸುರಕ್ಷತಾ ವೈಶಿಷ್ಟ್ಯತೆಗಳು (Tata Punch Safety Features in Kannada)
ಮೊದಲೇ ಹೇಳಿದಂತೆ ಟಾಟಾ ಮೋಟಾರ್ಸ್ ನವರು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಾರೆ. ಗ್ಲೋಬಲ್ ಎನ್. ಕ್ಯಾಪ್ ಸಹ ಟಾಟಾ ಪಂಚ್ ಗೆ 5 ರಲ್ಲಿ 5 ಸ್ಟಾರ್ ನೀಡಿದ್ದಾರೆ.
ಗಟ್ಟಿ ಮುಟ್ಟಾದ ಈ SUV ಯಲ್ಲಿ ಏನೇನು ಸುರಕ್ಷತಾ ವೈಶಿಷ್ಟ್ಯತೆಗಳಿವೆ ನೋಡೋಣ ಬನ್ನಿ.
ಡ್ಯುಯಲ್ ಏರ್ ಬ್ಯಾಗ್ಸ್ | ರಿವರ್ಸ್ ಪಾರ್ಕಿಂಗ್ ಕ್ಯಾಮರಾ |
ಫ್ರಂಟ್ ಫಾಗ್ ಲ್ಯಾಂಪ್, ಕಾರ್ನರಿಂಗ್ ಫಂಕ್ಷನ್ ನೊಂದಿಗೆ | ಆಟೋ ಹೆಡ್ ಲ್ಯಾಂಪ್ಸ್ |
ರೈನ್ ಸೆನ್ಸಿಂಗ್ ವೈಪರ್ಸ್ | ಫೋರ್ಟಿಫೈಡ್ ಕ್ಯಾಬಿನ್ |
ABS & EBD ಬ್ರೇಕ್ ಸ್ವೇ ಕಂಟ್ರೋಲ್ ನೊಂದಿಗೆ | ರಿಯರ್ ಡೀಫಾಗರ್ |
ISO ಫಿಕ್ಸ್ ಚೈಲ್ಡ್ ಸೀಟ್ | ಪವರ್ ಲಾಕ್ |
ಟಾಟಾ ಪಂಚ್ ನ ವೇರಿಯಂಟ್ಸ್ & ಬೆಲೆ (Tata Punch Variants & Pricing in Kannada)
ನಿಮಗೆ ಟಾಟಾ ಪಂಚ್ ಅತೀ ಕಡಿಮೆ ಬೆಲೆಯಲ್ಲಿ ಹಾಗೂ ವಿಧ ವಿಧವಾದ ವೇರಿಯಂಟ್ಸ್ ಗಳಲ್ಲಿ ಸಿಗುತ್ತದೆ.
ಪೆಟ್ರೋಲ್ | |
---|---|
ಪಂಚ್ ಪ್ಯೂರ್ | ₹5,49,000 |
ಪಂಚ್ ಪ್ಯೂರ್ ರಿಥಮ್ | ₹5,84,000 |
ಪಂಚ್ ಅಡ್ ವೆಂಚರ್ | ₹6,39,000 |
ಪಂಚ್ ಅಡ್ ವೆಂಚರ್ ರಿಥಮ್ | ₹6,74,000 |
ಪಂಚ್ ಎಕಾಂಪ್ಲಿಶ್ | ₹7,29,000 |
ಪಂಚ್ ಎಕಾಂಪ್ಲಿಶ್ ಡಾಝಲ್ | ₹7,74,000 |
ಪಂಚ್ ಕ್ರಿಯೇಟಿವ್ | ₹8,49,000 |
ಪಂಚ್ ಕ್ರಿಯೇಟಿವ್ ಇರಾ | ₹8,79,000 |
ಆಟೋಮ್ಯಾಟಿಕ್ | |
---|---|
ಪಂಚ್ ಅಡ್ ವೆಂಚರ್ | ₹6,99,000 |
ಪಂಚ್ ಅಡ್ ವೆಂಚರ್ ರಿಥಮ್ | ₹7,34,000 |
ಪಂಚ್ ಎಕಾಂಪ್ಲಿಶ್ | ₹7,89,000 |
ಪಂಚ್ ಎಕಾಂಪ್ಲಿಶ್ ಡಾಝಲ್ | ₹8,34,000 |
ಪಂಚ್ ಕ್ರಿಯೇಟಿವ್ | ₹9,09,000 |
ಪಂಚ್ ಕ್ರಿಯೇಟಿವ್ ಇರಾ | ₹9,39,000 |
ಪಂಚ್ ನ ಬಗ್ಗೆ ಇನ್ನಷ್ಟು (More About Punch in Kannada)
ಇದು 5 ಸ್ಪೀಡ್ AMT ಮತ್ತು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಬರುತ್ತದೆ. ಸುಮಾರು 3.8 ಮೀಟರ್ ಉದ್ದ, 1.7 ಮೀಟರ್ ಅಗಲ, 1.6 ಮೀಟರ್ ಎತ್ತರ, 2.4 ಮೀಟರ್ ವೀಲ್ ಬೇಸ್ ಹಾಗೂ 187 ಮಿ. ಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಂಡಿದೆ.
ಬೂಟ್ ಸ್ಪೇಸ್ ನ ಬಗ್ಗೆ ಹೇಳುವುದಾದರೆ ISO V215 ಯಲ್ಲಿ 366 ಲೀಟರ್ ಮತ್ತು ISO 210 ನಲ್ಲಿ 319 ಲೀಟರ್ ನ ಸ್ಪೇಸ್ ಸಿಗುತ್ತದೆ.
ಕಾರ್ ನ ಮುಂದಿನ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಹಾಗೂ ಹಿಂದಿನ ಚಕ್ರಗಳಿಗೆ ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ.
ವೇರಿಯಂಟ್ಸ್: 14 (ಪೆಟ್ರೋಲ್ & ಆಟೋಮ್ಯಾಟಿಕ್ ಸೇರಿ)
ಕಲರ್ಸ್: 7 (ಟೊರ್ನಾಡೊ ಬ್ಲೂ, ಕ್ಯಾಲಿಪ್ಸೋ ರೆಡ್, ಮೇಟಿಯೊರ್ ಬ್ರೋನ್ಜ್, ಅಟೋಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೊನಾ ಗ್ರೇ & ಆರ್ಕಸ್ ವೈಟ್)
ಬೆಲೆ: ₹5.49 ಲಕ್ಷ ರೂಪಾಯಿಗಳು (Ex-showroom, Delhi)
ಇದಿಷ್ಟು ಟಾಟಾ ಪಂಚ್ ಕಾರ್ ನ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.