ಡೊಮೇನ್ ನೇಮ್ ಬಗ್ಗೆ ಸಂಪೂರ್ಣ ಮಾಹಿತಿ | Ultimate Guide about Domain Name in Kannada

0
ಡೊಮೇನ್ ನೇಮ್ ಬಗ್ಗೆ ಸಂಪೂರ್ಣ ಮಾಹಿತಿ | Ultimate Guide about Domain Name in Kannada

Domain Name ನ ಬಗ್ಗೆ Kannada ದಲ್ಲಿ ಉತ್ತಮ ಹಾಗೂ ಸಂಪೂರ್ಣ ವಿವರಣೆ. TLDs or Domain Names Explained in Kannada.

ವೆಬ್ ಸೈಟ್ ಅಥವಾ ಬ್ಲಾಗ್ ಮೂಲಕ ಹಣ ಗಳಿಸಬಹುದು ಎಂದು ಹೇಳಿರುವುದು ನೀವೆಲ್ಲಾ ಈಗಾಗಲೇ ತುಂಬಾ ವಿಡಿಯೋಗಳಲ್ಲಿ ನೋಡಿರಬಹುದು.

ನಿಮ್ಮಲ್ಲಿ ಸಾಕಷ್ಟು ಮಂದಿಗೆ ಆನ್ ಲೈನ್ ನಲ್ಲಿ ಹಣ ಗಳಿಸುವ ವಿಧಾನ ತಿಳಿದಿರಬಹುದು. ಈ ಲೇಖನದಲ್ಲಿ ನಿಮಗೆ ವೆಬ್ ಸೈಟ್ ಅಥವಾ ಬ್ಲಾಗ್ ಗೆ ಬೇಕಾಗುವ ಬಹುಮುಖ್ಯ Domain Name ನ ಬಗ್ಗೆ ಕನ್ನಡದಲ್ಲಿ ವಿವರಿಸಲಾಗಿದೆ.

ಡೊಮೇನ್ ನೇಮ್ ಎಂದರೇನು ( What is Domain Name )

ಮೊದಲಿಗೆ ಯಾವುದೇ ಬ್ಲಾಗ್ ಅನ್ನು ತಯಾರಿಸುವ ಮೊದಲು ಅದಕ್ಕೆ ಒಂದು ಹೊಸ ಹೆಸರನ್ನು ಇಡಬೇಕು. ನೀವು ಈಗಾಗಲೇ ಹಲವಾರು ವೆಬ್ ಸೈಟ್ ಅಥವಾ ಬ್ಲಾಗ್ ಗಳನ್ನು ನೋಡಿರುತ್ತೀರಿ. ನೀವು ನೋಡಿದ ಆ ವೆಬ್ ಸೈಟ್ ನ ಮೇಲೆ ಒಂದು URL ಇರುತ್ತದೆ. ಅದುವೇ ಆ ಸೈಟ್ ನ Domain Name.

ಉದಾಹರಣೆಗೆ ನಮ್ಮ ಬ್ಲಾಗ್ ನ URL ಅನ್ನು ನೋಡಿ. KannadaGeeks.com ಅಂತ ಇದೆ ಅಲ್ಲವೇ ? ಇದರಲ್ಲಿ KannadaGeeks ಅನ್ನುವುದು ನಮ್ಮ Domain Name. ಮತ್ತೆ com ಅನ್ನುವುದು ಅದರ Extension ಅಥವಾ ವಿಸ್ತರಣೆ ಆಗಿದೆ.

ಡೊಮೇನ್ ನೇಮ್ ನ ವಿಸ್ತರಣೆ ( Domain Name Extension )

ಡೊಮೇನ್ ನೇಮ್ ನ ಮುಂದೆ ಇರುವ ವಿಸ್ತರಣೆಯನ್ನು ಅದರ Extension ಎಂದು ಕರೆಯುತ್ತಾರೆ. ಉದಾಹರಣೆಗೆ .com .in .org .net .edu .gov ಮುಂತಾದವುಗಳು.

ಇಂತಹ ಹಲವಾರು Domain Extension ಗಳನ್ನು ನೀವು ನಿಮ್ಮ ವೆಬ್ ಸೈಟ್ ಗಾಗಿ ಖರೀದಿಸಬಹುದು. ( ಇದರಲ್ಲಿ .gov ಎನ್ನುವುದು ಸರ್ಕಾರಿ ವೆಬ್ ಸೈಟ್ ಗಳಿಗೆ ಮಾತ್ರ ಸೀಮಿತವಾಗಿರುತ್ತದೆ ).

ಡೊಮೇನ್ ನೇಮ್ ಅನ್ನು ಖರೀದಿಸುವುದು ಹೇಗೆ ( How to Purchase Domain Name )

ಡೊಮೇನ್ ನೇಮ್ ಬಗ್ಗೆ ಸಂಪೂರ್ಣ ಮಾಹಿತಿ | Ultimate Guide about Domain Name in Kannada

ಮೊದಲು ನೀವು ನಿಮ್ಮ ವೆಬ್ ಸೈಟ್ ಅಥವಾ ಬ್ಲಾಗ್ ಗೆ ಒಂದು ಒಳ್ಳೆಯ ಹೆಸರನ್ನು ಆಯ್ಕೆ ಮಾಡಿ. ನೆನಪಿಡಿ, ನೀವು ಆಯ್ಕೆ ಮಾಡುವ ಹೆಸರು, ನಿಮ್ಮ ಬ್ಲಾಗ್ ನಲ್ಲಿ ಬರೆಯುವ ವಿಷಯಕ್ಕೆ ಸಂಬಂಧ ಪಡಬೇಕು. ಉದಾಹರಣೆಗೆ ನೀವು Food ನ ಬಗ್ಗೆ ಲೇಖನ ಬರೆಯುತ್ತೀರಿ ಅಂದರೆ ನಿಮ್ಮ Domain Name ಈ ರೀತಿಯಲ್ಲಿರಬೇಕು ( foodlovers.com, healthyfoods.in, foods4you.net ಇತರೆ ).

ಈ ರೀತಿಯ Related ಅಥವಾ ಸಂಬಂಧಿತ ಹೆಸರನ್ನು ಆಯ್ಕೆ ಮಾಡುವುದರಿಂದ ಜನರಿಗೆ ನಿಮ್ಮ ಬ್ಲಾಗ್ ಮತ್ತು ಲೇಖನಗಳು ಸುಲಭವಾಗಿ Google ನಲ್ಲಿ ಸಿಗುತ್ತದೆ.

ಡೊಮೇನ್ ನೇಮ್ ಗಳನ್ನು ಹಲವಾರು ಕಂಪನಿಗಳು ನಿಮಗೆ ನೀಡುತ್ತದೆ. ಈ ಕಂಪನಿಗಳಲ್ಲೇ ತುಂಬಾ ಜನಪ್ರಿಯ ಕಂಪನಿ ಎಂದರೆ ಅದು GoDaddy. ಇಲ್ಲಿ ನೀವು ಕಡಿಮೆ ಖರ್ಚಿನಲ್ಲಿ ಉತ್ತಮವಾದ Domain Name ಅನ್ನು ಖರೀದಿ ಮಾಡಬಹುದು ಮತ್ತು ಇವರ ಸೇವೆಗಳು ಸಹ ವೇಗವಾಗಿದೆ.

ಡೊಮೇನ್ ಅನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: GoDaddy Link

ಕಡಿಮೆ ಬೆಲೆಯಲ್ಲಿ ಡೊಮೇನ್ ನೇಮ್ ಖರೀದಿ ( Domain Name at Lowest Price )

ಉತ್ತಮ ಡೊಮೇನ್ ನೇಮ್ ಗಳು ಸಾಮಾನ್ಯವಾಗಿ ದುಬಾರಿ ಬೆಲೆಯನ್ನು ಹೊಂದಿರುತ್ತದೆ. ನೀವು ಯಾವುದೇ Domain Name ಅನ್ನು ಖರೀದಿ ಮಾಡುವ ಮೊದಲು ಅದರ Discount ಕೂಪನ್ ಗಳಿಗಾಗಿ ಗೂಗಲ್ ನಲ್ಲಿ ಹುಡುಕಬೇಕು. ಉದಾಹರಣೆಗೆ .com ನ ಬೆಲೆ ಸುಮಾರು ₹800 ರೂಪಾಯಿಗಳ ಆಸುಪಾಸಿನಲ್ಲಿರುತ್ತದೆ. ನೀವು ಇದರ ಬೆಲೆಯನ್ನು ಕಡಿಮೆ ಮಾಡಲು, Google ನಲ್ಲಿ GoDaddy Domain Discount Coupon ಎಂದು ಹುಡುಕಬೇಕು.

ಕೂಪನ್ ಕೋಡ್ ಗಳನ್ನು ಬಳಸುವುದರಿಂದ ನೀವು ಖರೀದಿ ಮಾಡುವ ಡೊಮೇನ್ ನೇಮ್ ಗಳ ಮೇಲೆ ರಿಯಾಯಿತಿ ದೊರೆಯುತ್ತದೆ. ಖರೀದಿಸುವ ಮೊದಲು Promo Code ನ ವಿಭಾಗದಲ್ಲಿ ಈ ಕೂಪನ್ ಕೋಡ್ ಅನ್ನು ಬಳಸಬೇಕು.

ಉತ್ತಮವಾದ ಡೋಮೆನ್ ನೇಮ್ ಗಳು ( Best TLDs for Kannada Website/ Blog )

ಯಾವುದೇ ಬ್ಲಾಗ್ ಅನ್ನು ಗೂಗಲ್ ನಲ್ಲಿ Rank ಮಾಡಲು ಉತ್ತಮವಾದ TLD ಅನ್ನು ಖರೀದಿಸಬೇಕು. ಇಲ್ಲಿ TLD ಅಂದರೆ Top Level Domain ( ಟಾಪ್ ಲೆವೆಲ್ ಡೊಮೇನ್ ) ಎಂದರ್ಥ.

ಈ ಕೆಳಗೆ ನಾವು ಕೆಲವೊಂದು TLDs ಗಳನ್ನು ನೀಡಿದ್ದೇವೆ. ನಿಮಗೆ ಇಷ್ಟವಾದ Extension ಅನ್ನು ಖರೀದಿಸಬಹುದು.

EXTENSIONS
.com .in .net .org .edu .co .co.in .biz .live .tech .info .health .store .space .website

ಇನ್ನು ಮುಂತಾದ ಡೊಮೇನ್ ನೇಮ್ ಗಳನ್ನು ನೀವು ಆನ್ ಲೈನ್ ನಲ್ಲಿ ಖರೀದಿ ಮಾಡಬಹುದು.

ಸೂಚನೆ: ga, ml, tk, cf, gq, xyz ಈ ತರಹದ extension ಗಳನ್ನು ಕೊಂಡುಕೊಳ್ಳಬೇಡಿ.

ನೆನಪಿಡಬೇಕಾದ ಅಂಶಗಳು ( Things to Remember Before Buying a Domain Name )

ಡೊಮೇನ್ ನೇಮ್ ಅನ್ನು ಖರೀದಿ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಡಿ.

ಡೊಮೇನ್ ನೇಮ್ ಬಗ್ಗೆ ಸಂಪೂರ್ಣ ಮಾಹಿತಿ | Ultimate Guide about Domain Name in Kannada

  • ನಿಮ್ಮ ಡೊಮೇನ್ ನೇಮ್ ನೀವು ಬರೆಯುವ Topic ಗೆ ಸಂಬಂಧ ಪಡಬೇಕು.
  • ಉತ್ತಮವಾದ TLD ಅಥವಾ ಟಾಪ್ ಲೆವೆಲ್ ಡೊಮೇನ್ ಅನ್ನು ಖರೀದಿ ಮಾಡಬೇಕು.
  • ನಿಮ್ಮ ಡೊಮೇನ್ ನೇಮ್ ಯಾವುದೇ ರೀತಿಯ ಅಕ್ರಮ ಅಥವಾ ಕಾನೂನು ಬಾಹಿರವಾದ ಪದಗಳನ್ನು ಹೊಂದಿರಬಾರದು. ಉದಾಹರಣೆಗೆ ಜೂಜು, ಡ್ರಗ್ಸ್ ಹಾಗೂ ಇತರೆ.
  • ನಿಮ್ಮ ಡೊಮೇನ್ ನೇಮ್ ಬಹಳ ಪದಗಳಿಂದ ಕೂಡಿರಬಾರದು. ಅಂದರೆ ಅದರ ಹೆಸರು ಬಹಳ ಉದ್ದವಾಗಿರಬಾರದು.
  • ಡೊಮೇನ್ ಖರೀದಿಸುವ ಮುನ್ನ Discount Coupon ಕೋಡ್ ಅನ್ನು ನಮೂದಿಸಿ.

ಇದಿಷ್ಟು Domain Name ನ ಬಗ್ಗೆ Kannada ದಲ್ಲಿ ಸಂಪೂರ್ಣ ಮಾಹಿತಿ. ನಿಮಗೆ ಈಗ ಡೊಮೇನ್ ನೇಮ್ ನ ಬಗ್ಗೆ ಉತ್ತಮ ಮಾಹಿತಿ ದೊರೆತಿದೆ ಎಂದು ನಾವು ಭಾವಿಸುತ್ತೇವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗೆ ಕಮೆಂಟ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here