ಗೆಳೆಯರೇ ಕಾರ್ ಗಳಲ್ಲಿ ನಿಮಗೆ ಯಾವ ಕಂಪನಿಯ ಕಾರು ಇಷ್ಟ ? ಒಂದು ವೇಳೆ ನಿಮಗೆ ವೋಲ್ವೋ ಕಂಪನಿಯ ಕಾರು ಇಷ್ಟವಾಗಿದ್ದರೆ ಇದನ್ನು ನೀವು ನೋಡಲೇ ಬೇಕು.
ವೋಲ್ವೋ ಕಂಪನಿಯು ತನ್ನ ಸೆಕೆಂಡ್ ಜನರೇಷನ್ ನ ಫೇಸ್ ಲಿಫ್ಟ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. XC60 B5 ಎಂಬ ಹೆಸರಿನ ಈ SUV ಯು ಪೆಟ್ರೋಲ್ ಫ್ಯೂಯಲ್ ಆಯ್ಕೆಯಲ್ಲಿ ನಿಮಗೆ ಸಿಗಲಿದೆ.
ಇದನ್ನೂ ನೋಡಿ: ರೇಂಜ್ ರೋವರ್ ವೇಲಾರ್
ವರ್ಷಕ್ಕೆ 2 ಲಕ್ಷಕ್ಕೂ ಅಧಿಕ XC60 ಕಾರುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತದೆ ಹಾಗೂ ವೋಲ್ವೋ [Volvo] ಕಂಪನಿಯ ಅತೀ ಹೆಚ್ಚು ಮಾರಾಟವಾಗುವ SUV ಆಗಿದೆ.
XC60 B5 ನ ಫೀಚರ್ಸ್ ಗಳು (Volvo XC60 B5 Features in Kannada)
ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ ವೋಲ್ವೋ ಕಂಪನಿಯ ವಾಹನಗಳು ಉತ್ತುಂಗದಲ್ಲಿರುತ್ತದೆ. ಹಾಗೆಯೇ XC60 ಮಾಡೆಲ್ ನಲ್ಲಿಯೂ ಕಂಪನಿಯು ಉತ್ತಮ ಫೀಚರ್ಸ್ ಗಳನ್ನು ನೀಡಿದೆ.
48 ವೋಲ್ಟ್ ಬ್ಯಾಟರಿ, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ | ಮೈಲ್ಡ್ ಹೈಬ್ರಿಡ್ ಸಿಸ್ಟಮ್ |
ಇಂಸ್ಟೆಂಟ್ ಟ್ರ್ಯಾಕ್ಷನ್ | ಸನ್ ರೂಫ್ |
ಪವರ್ ಫೋಲ್ಡಿಂಗ್ ORVM ಕ್ಯಾಮರಾದೊಂದಿಗೆ | 11.4 ಮೀಟರ್ ಟರ್ನಿಂಗ್ ಸರ್ಕಲ್ |
ಲ್ಯಾಮಿನೇಟೆಡ್ ಸೈಡ್ ವಿಂಡೋಸ್ | ಪೈಲೆಟ್ ಅಸಿಸ್ಟ್ |
ಸಿಟಿ ಸೇಫ್ಟಿ | ಆನ್ ಕಮಿಂಗ್ ಮಿಟಿಗೇಶನ್ ಬೈ ಬ್ರೇಕಿಂಗ್ |
ರನ್ ಆಫ್ ರೋಡ್ ಮಿಟಿಗೇಶನ್ | Blind ಸ್ಪೋಟ್ ಇನ್ ಫಾರ್ಮೇಷನ್ ಸಿಸ್ಟಮ್ |
ಈ ಕಾರು 4.7 ಮೀಟರ್ ಉದ್ದವನ್ನು ಹೊಂದಿದ್ದು 1.6 ಮೀಟರ್ ಎತ್ತರವನ್ನು ಹೊಂದಿದೆ. ಸುಮಾರು 1900 ಕೆಜಿ ಕರ್ಬ್ ವೇಯ್ಟ್ ಅನ್ನು ಹೊಂದಿದೆ ಮತ್ತು TG-81 SC 8 ಸ್ಪೀಡ್ ಗೇರ್ ಟ್ರಾನಿಕ್ ಆಟೋ ಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.
ವೋಲ್ವೋ XC60 B5 ಸೇಫ್ಟಿ ಫೀಚರ್ಸ್ (Volvo XC60 B5 Safety Features)
ಸುರಕ್ಷತೆಗೆ ವೋಲ್ವೋ ಕಂಪನಿಯು ಬಹು ದೊಡ್ಡ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಕಾರಿನಲ್ಲೂ ಸಹ ಉತ್ತಮ ರೀತಿಯ ಸುರಕ್ಷಿತ ವೈಶಿಷ್ಟ್ಯತೆಗಳನ್ನು ನೀಡಿದೆ. ಈ ಕೆಳಗೆ ನಾವು ಕೆಲವು ಫೀಚರ್ಸ್ ಗಳನ್ನು ಪಟ್ಟಿ ಮಾಡಿದ್ದೇವೆ.
6 ಏರ್ ಬ್ಯಾಗ್ಸ್ | ಅಲಾರಂ ಸಿಸ್ಟಮ್ |
ಇಂಟೀರಿಯರ್ ಮೋಷನ್ ಸೆನ್ಸಾರ್ | ಕೀ ಲೆಸ್ ಎಂಟ್ರಿ |
ಇಂಕ್ಲಿಲೇಶನ್ ಸೆನ್ಸಾರ್ | ಪ್ರೈವೇಟ್ ಲಾಕಿಂಗ್ |
ಫರ್ಸ್ಟ್ ಎಡ್ ಕಿಟ್ | ಸೆಂಟರ್ ಲಾಕಿಂಗ್ |
ಪವರ್ ಡೋರ್ ಚೈಲ್ಡ್ ಲಾಕ್ | ವಾರ್ನಿಂಗ್ ಟ್ರೈ ಆಂಗಲ್ |
ಕೊಲ್ಯೂಷನ್ ಮಿಟಿಗೇಶನ್ ಸಪೋರ್ಟ್ | 360 ಡಿಗ್ರಿ ಕ್ಯಾಮರಾ |
ಲೇನ್ ಕೀಪ್ ಅಸಿಸ್ಟ್ | ಹಿಲ್ ಸ್ಟಾರ್ಟ್ ಅಸಿಸ್ಟ್ |
ಹಿಲ್ ಡೀಸೆಂಟ್ ಕಂಟ್ರೋಲ್ | ISO ಫಿಕ್ಸ್ ಚೈಲ್ಡ್ ಸೀಟ್ ಮೌಂಟಿಂಗ್ |
ಸೀಟ್ ಬೆಲ್ಟ್ ರಿಮೈಂಡರ್ | ಇಂಟೆಲಿಜೆಂಟ್ ಡ್ರೈವರ್ ಇನ್ ಫಾರ್ಮೇಷನ್ ಸಿಸ್ಟಮ್ IDBS |
ಟೈರ್ ಪ್ರೆಷರ್ ಮೊನಿಟರಿಂಗ್ ಸಿಸ್ಟಮ್ | ಪೈರೋಟೆಕ್ನಿಕ್ & ಪ್ರೀ ಟೆನ್ಶನರ್ ಸೀಟ್ ಬೆಲ್ಟ್ಸ್ |
ವೋಲ್ವೋ XC60 B5 ಬಗ್ಗೆ ಇನ್ನಷ್ಟು (More About Volvo XC60 B5 in Kannada)
ಈ ಕಾರಿನ ಬಗ್ಗೆ ಹೇಳುವುದಕ್ಕೆ ಬಹಳಷ್ಟಿದೆ. ಆದರೆ ಎಲ್ಲವನ್ನು ನಾವಿಲ್ಲಿ ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವು ಮುಖ್ಯವಾದ ವಿವರಗಳನ್ನು ಈ ಕೆಳಗೆ ಲಿಸ್ಟ್ ಮಾಡಿದ್ದೇವೆ.
ವೇರಿಯಂಟ್ಸ್: 1 [B5 Inscription]
ವೀಲ್ಸ್: 19 inch 5-ಮಲ್ಟಿ ಸ್ಪೋಕ್ ಬ್ಲ್ಯಾಕ್ ಡೈಮಂಡ್ ಕಟ್ ಅಲೋಯ್
ಬೂಟ್ ಸ್ಪೇಸ್: 483 ಲೀಟರ್
ಕಲರ್ಸ್: ಕ್ರಿಸ್ಟಲ್ ವೈಟ್ ಪರ್ಲ್, ಬ್ಲೂ, ಗ್ರೇ, ಥಂಡರ್ ಗ್ರೇ ಮತ್ತು ಬ್ಲ್ಯಾಕ್
ಬೆಲೆ: ₹61.90 ಲಕ್ಷ [Ex-showroom, Delhi]