ಒಂದು ಬ್ಲಾಗ್ ಅಥವಾ ವೆಬ್ ಸೈಟ್ ರಚಿಸಲು ಮುಖ್ಯವಾಗಿ ಬೇಕಾಗುವುದು Domain Name ಮತ್ತು Web Hosting. ಈ ಲೇಖನದಲ್ಲಿ ನಾವು Web Hosting ನ ಬಗ್ಗೆ ಕನ್ನಡದಲ್ಲಿ ( Kannada ) ವಿವರಿಸಲಿದ್ದೇವೆ.
ನಿಮಗೆ ಡೊಮೇನ್ ನೇಮ್ ನ ಏನೆಂದು ತಿಳಿಯದಿದ್ದರೆ, ನಾವು ಈಗಾಗಲೇ ಇದರ ಬಗ್ಗೆ ಒಂದು ಲೇಖನವನ್ನು ಬರೆದಿದ್ದೇವೆ. ಅದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ಲೇಖನಗಳನ್ನು ವೆಬ್ ಸೈಟ್ ನಲ್ಲಿ ಓದುತ್ತೇವೆ. ಒಂದೊಂದು ಸಲ ನಿಮಗೂ ಅನಿಸಿರಬಹುದು ಅದೇನೆಂದರೆ ನಾನು ಕೂಡ ಒಂದು ವೆಬ್ ಸೈಟ್ ಮಾಡಬಹುದೇ ಎಂದು.
ಇದಕ್ಕೆ ಉತ್ತರ ಖಂಡಿತ ಹೌದು. ನೀವು ಸಹ ನಮ್ಮದೇ ರೀತಿಯ ಬ್ಲಾಗ್ ಅನ್ನು ಸುಲಭವಾಗಿ ತಯಾರಿಸಬಹುದು. ನೆನಪಿಡಿ, Blog ಮತ್ತು Website ಎರಡೂ ಒಂದೇ ಅಲ್ಲ. ಇವುಗಳ ಮಧ್ಯೆ ತುಂಬಾ ಅಂತರವಿದೆ.
ನಾನಿಲ್ಲಿ ಒಂದು ಬ್ಲಾಗ್ ಅಥವಾ ವೆಬ್ ಸೈಟ್ ರಚಿಸಲು ಮುಖ್ಯವಾಗಿ ಬೇಕಾಗುವ ವೆಬ್ ಹೋಸ್ಟಿಂಗ್ ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ವಿವರಿಸುತ್ತೇನೆ.
ವೆಬ್ ಹೋಸ್ಟಿಂಗ್ ಎಂದರೇನು ( What is Web Hosting )
ನೀವು ಎಲ್ಲಾ ವೆಬ್ ಸೈಟ್ ಅಥವಾ ಬ್ಲಾಗ್ ಗಳಲ್ಲಿ Articles, Photos ಮತ್ತು Videos ಗಳನ್ನು ನೋಡಿರುತ್ತೀರಾ. ಸೈಟ್ ನಲ್ಲಿ ಹೊಂದಿರುವ ಎಲ್ಲಾ ತರಹದ ವಿಧ ವಿಧವಾದ Text, Documents, Images, File & Folders, Colours ಗಳನ್ನು ಸಂಗ್ರಹ ಮಾಡಲು ಇರುವ ಜಾಗವೇ Web Hosting.
ವೆಬ್ ಹೋಸ್ಟಿಂಗ್ ಅನ್ನು ಸಾಮಾನ್ಯವಾಗಿ ವೆಬ್ ಸರ್ವರ್ ( Web Server ) ಎಂದು ಕರೆಯುತ್ತಾರೆ. ಇಲ್ಲಿ ಸರ್ವರ್ ಎಂದರೆ ಯಾವುದೇ ರೀತಿಯ ವಸ್ತುಗಳನ್ನು ಅಥವಾ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ಸಂಗ್ರಾಹಕ ಎಂದರ್ಥ.
ವೆಬ್ ಹೋಸ್ಟಿಂಗ್ ನ ಕಾರ್ಯ ವೈಖರಿ ( Working Process of Web Hosting )
ಹೋಸ್ಟಿಂಗ್ ಅಥವಾ ಸರ್ವರ್ ಅನ್ನು ಇಂಟರ್ ನೆಟ್ ನೊಂದಿಗೆ ಜೋಡಿಸಲಾಗಿರುತ್ತದೆ. ಮೊದಲಿಗೆ ನಿಮ್ಮ ಡೊಮೇನ್ ನೇಮ್ ಅನ್ನು ಹೋಸ್ಟಿಂಗ್ ನೊಂದಿಗೆ ಜೋಡಿಸಬೇಕು. ನಂತರ ನಿಮ್ಮ ವೆಬ್ ಸೈಟ್ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ.
ನಿಮ್ಮ ಬ್ಲಾಗ್ ಗೆ ಬರುವ ಜನರು, ಯಾವುದಾದರೂ ಫೋಟೋಗಳನ್ನು ಅಥವಾ ವಿಡಿಯೋವನ್ನು ಡೌನ್ಲೋಡ್ ಮಾಡಲು ಹೊರಟರೆ, ಆಗ ನಿಮ್ಮ ವೆಬ್ ಹೋಸ್ಟಿಂಗ್ ನಲ್ಲಿ ಮೊದಲೇ ಸ್ಟೋರ್ ಆಗಿರುವ ಆ ಫೋಟೋ ಅಥವಾ ವಿಡಿಯೋ ಅವರ ಮೊಬೈಲ್ ನ Storage ಗೆ ಟ್ರಾನ್ಸ್ ಫರ್ ಆಗುತ್ತದೆ.
ಹೇಳಬೇಕೆಂದರೆ ಈ ರೀತಿಯ ಸರ್ವರ್ ಗಳು ಇಂಟರ್ನೆಟ್ ನೊಂದಿಗೆ ಹೊಂದಿಕೊಂಡು, ಡಾಟಾ ಸ್ಟೋರ್ ಮಾಡುವ ಹಾಗೂ ಡಾಟಾ ಟ್ರಾನ್ಸ್ ಫರ್ ಮಾಡುವ ಕೆಲಸವನ್ನು ಮಾಡುತ್ತವೆ.
ವೆಬ್ ಹೋಸ್ಟಿಂಗ್ ನ ವಿಧಗಳು ( Types of Web Hosting )
ವೆಬ್ ಸೈಟ್ ಗಳಲ್ಲಿ ಉಪಯೋಗಿಸುವ ಸರ್ವರ್ ಗಳಲ್ಲಿ 4 ವಿಧಗಳಿವೆ.
- ಶೇರಡ್ ಹೋಸ್ಟಿಂಗ್ ( Shared Hosting )
- ವಿಪಿಎಸ್ ಹೋಸ್ಟಿಂಗ್ ( VPS Hosting )
- ಡೆಡಿಕೇಟೆಡ್ ಸರ್ವರ್ ( Dedicated Server )
- ಕ್ಲೌಡ್ ಹೋಸ್ಟಿಂಗ್ ( Cloud Hosting )
ಶೇರಡ್ ಹೋಸ್ಟಿಂಗ್ ( Shared Hosting )
ಸಾಮಾನ್ಯವಾಗಿ ಹಲವಾರು ಜನರ ಬಳಿ ಹಣದ ಕೊರತೆ ಇರುತ್ತದೆ. ಇಂತಹ ಸಮಯದಲ್ಲಿ ಅವರು Shared Hosting ಅನ್ನು ಖರೀದಿ ಮಾಡುತ್ತಾರೆ. ಈ ವಿಧಾನದಲ್ಲಿ ಒಂದೇ ಸರ್ವರ್ ಅನ್ನು ಹಲವಾರು ಜನರಿಗೆ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ.
ಒಂದು ವೇಳೆ ನೀವು ಈ ಸರ್ವರ್ ಅನ್ನು ಖರೀದಿ ಮಾಡಿದ್ದೀರಿ ಅಂದುಕೊಳ್ಳೋಣ. ಅದೇ ರೀತಿ ಈ ಸರ್ವರ್ ಗೆ ಕನೆಕ್ಟ್ ಆಗಿರುವ ಬೇರೊಂದು ಸೈಟ್ ನ ಟ್ರಾಫಿಕ್ ( Visitors ) ಹೆಚ್ಚಾದಲ್ಲಿ, ನಿಮ್ಮ Web Site Down ಆಗುತ್ತದೆ.
ವಿಪಿಎಸ್ ಹೋಸ್ಟಿಂಗ್ ( VPS Hosting )
ವಿಪಿಎಸ್ ಸರ್ವರ್ ( Virtual Private Server ) ಅಂದರೆ ಒಂದು ರೀತಿಯಲ್ಲಿ ಪ್ರೈವೇಟ್ ಸರ್ವರ್ ಅಂದುಕೊಳ್ಳಬಹುದು. ಆದರೆ ನಿಜವಾಗಿ ಇಲ್ಲಿಯೂ ಸಹ ನಿಮ್ಮ ಜೊತೆಗೆ ಕೆಲವು ಮಂದಿ ಅದೇ ಸರ್ವರ್ ಅನ್ನು ಉಪಯೋಗಿಸುತ್ತಾರೆ. ಶೇರಡ್ ಹೋಸ್ಟಿಂಗ್ ಗೆ ಹೋಲಿಸಿದರೆ ಇದರ ಬೆಲೆ ತುಂಬಾ ಹೆಚ್ಚಾಗಿರುತ್ತದೆ.
ಸಾಮಾನ್ಯವಾಗಿ ಈ ಸರ್ವರ್ ನಲ್ಲಿ ನಿಮಗೆ ಯಾವುದೇ ರೀತಿಯ ಸೈಟ್ ಡೌನ್ ತೊಂದರೆಗಳು ಬರುವುದಿಲ್ಲ. ಆದರೆ ಎಲ್ಲಾದರೂ ನಿಮ್ಮ ಸೈಟ್ ಗೆ ಬರುವ ಟ್ರಾಫಿಕ್ ಅತೀ ಹೆಚ್ಚಾದಲ್ಲಿ ಸೈಟ್ ನ Uptime ನಲ್ಲಿ ತೊಂದರೆಯಾಗಬಹುದು.
ವಿಪಿಎಸ್ ಸರ್ವರ್ ಗಳು ತುಂಬಾ ಪವರ್ ಫುಲ್ Cores ಗಳನ್ನು ಹೊಂದಿರುತ್ತದೆ. ಇವು ನಿಮ್ಮ ವೆಬ್ ಸೈಟ್ ನ ಸ್ಪೀಡ್ ಅನ್ನು ಸಹ ಹೆಚ್ಚಿಸುತ್ತದೆ. ವಿಪಿಎಸ್ ಸರ್ವರ್ ಗಳಲ್ಲಿರುವ 6 ವಿಧಗಳು ಈ ಕೆಳಗಿನಂತಿವೆ.
- Unmanaged VPS
- Cloud Server
- Managed VPS
- Cloud VPS
- Self-managed VPS
- High-Availability VPS
ಡೆಡಿಕೇಟೆಡ್ ಸರ್ವರ್ ( Dedicated Server )
ಇಲ್ಲಿ ನಿಮಗೆ ಪ್ರತ್ಯೇಕವಾಗಿ ಒಂದು ಹೊಸ ಸರ್ವರ್ ಅನ್ನು ನೀಡಲಾಗುತ್ತದೆ. ಈ ಸರ್ವರ್ ಗಳು ಉಳಿದ ಸರ್ವರ್ ಗಳಿಗಿಂತ ಅತ್ಯಂತ ಬಲಶಾಲಿಯಾಗಿರುತ್ತದೆ. ಇವುಗಳನ್ನು ಮಿಲಿಯನ್ ಗಟ್ಟಲೆ ವೀಕ್ಷಕರಿರುವ ವೆಬ್ ಸೈಟ್ ಗಳಿಗೆ ಬಳಸಲಾಗುತ್ತದೆ.
ಡೆಡಿಕೇಟೆಡ್ ಸರ್ವರ್ ನಲ್ಲಿ ಹ್ಯಾಕಿಂಗ್ ಅಥವಾ ಮಾಲ್ ವೇರ್ ನಂತಹ ಅಟ್ಯಾಕ್ ಗಳ ಭಯ ಇರುವುದಿಲ್ಲ. ಏಕೆಂದರೆ ಇವುಗಳು ಉತ್ತಮ ಸೆಕ್ಯೂರಿಟಿ ಪ್ಯಾಚ್ ಗಳೊಂದಿಗೆ ಬಂದಿರುತ್ತದೆ.
ಇನ್ನು ಈ ಸರ್ವರ್ ನ ಸ್ಪೀಡ್ ಬಗ್ಗೆ ಹೇಳುವುದೇ ಬೇಡ. ಈ ಸರ್ವರ್ ನಲ್ಲಿರುವ ಪ್ರೊಸೆಸರ್ ಗಳು ಉತ್ತಮ ಗುಣಮಟ್ಟದಾಗಿರುತ್ತದೆ. ಹಾಗಾಗಿ ಇವು ವೆಬ್ ಪೇಜ್ ನ ಸ್ಪೀಡ್ ಅನ್ನು ದ್ವಿಗುಣಗೊಳಿಸುತ್ತವೆ.
ನೆನಪಿಡಿ, ಈ ರೀತಿಯ ಸರ್ವರ್ ಗಳನ್ನು ತಲಾ ಒಬ್ಬೊಬ್ಬರಿಗೆ ನೀಡಲಾಗುತ್ತದೆ ಮತ್ತು ಇವುಗಳ ಬೆಲೆ ತುಂಬಾ ಅಧಿಕವಾಗಿರುತ್ತದೆ.
ಕ್ಲೌಡ್ ಹೋಸ್ಟಿಂಗ್ ( Cloud Hosting )
ಸಾಮಾನ್ಯವಾಗಿ ಈ ಹೋಸ್ಟಿಂಗ್ ಅನ್ನು ನಾರ್ಮಲ್ ವೆಬ್ ಸೈಟ್ ಗಳಿಗೆ ಬಳಸುವುದಿಲ್ಲ. ಏಕೆಂದರೆ ಇವು ತುಂಬಾ ದುಬಾರಿ ಹಾಗೂ ಅಂತ್ಯಂತ ಪವರ್ ಫುಲ್ ಆಗಿದೆ.
ಇಲ್ಲಿ ದೇಶ ವಿದೇಶಗಳಲ್ಲಿರುವ ಎಲ್ಲಾ ಸರ್ವರ್ ಗಳನ್ನು ಇಂಟರ್ನೆಟ್ ಮೂಲಕ ಒಂದೇ ಕ್ಲೌಡ್ ಸರ್ವರ್ ನೊಂದಿಗೆ ಜೋಡಿಸಿಟ್ಟಿರುತ್ತಾರೆ.
ನಾವು ಯಾವುದೇ ವೆಬ್ ಸೈಟ್ ಅನ್ನು ಒಪೆನ್ ಮಾಡಿದಾಗ ಆ ವೆಬ್ ಸೈಟ್ ನ ಸರ್ವರ್ ಯಾವ ದೇಶದಲ್ಲಿ ನೆಲೆಸಿದೆಯೋ ಆ ದೇಶದಲ್ಲಿರುವ ಸರ್ವರ್ ನ ಮೂಲಕ ನಮಗೆ ವಿಷಯವನ್ನು ತಂದು ಕೊಡುತ್ತದೆ.
ಆದರೆ ಕ್ಲೌಡ್ ಸರ್ವರ್ ನಲ್ಲಿ ಹೀಗಾಗುವುದಿಲ್ಲ.
ಕ್ಲೌಡ್ ಸರ್ವರ್ ಗಳಿಗೆ ಹೊಂದಿಕೊಂಡಿರುವ ವೆಬ್ ಸೈಟ್ ಗಳು ಉತ್ತಮ ಕಾರ್ಯ ಕ್ಷಮತೆಯನ್ನು ಹೊಂದಿರುತ್ತದೆ. ಇವುಗಳು ಒಂದೇ ವೇಳೆಗೆ ಕೋಟಿಗಟ್ಟಲೆ ವೀಕ್ಷಕರನ್ನು ನಿಭಾಯಿಸಬಲ್ಲದು.
ದೊಡ್ಡ ದೊಡ್ಡ ಕಂಪೆನಿಗಳಾದ Google, Facebook, Microsoft ಹಾಗೂ Amazon ನಂತಹ ಕಂಪನಿಗಳು ಇದೆ ಕ್ಲೌಡ್ ಹೋಸ್ಟಿಂಗ್ ಅನ್ನು ಉಪಯೋಗಿಸುತ್ತಾರೆ.
ನೀವು ಈಗಾಗಲೇ ಬ್ಲಾಗಿಂಗ್ ನಲ್ಲಿ ಉತ್ತಮ ಅನುಭವವನ್ನು ಹೊಂದಿದ್ದರೆ ಮಾತ್ರ ಈ ಸರ್ವರ್ ಅನ್ನು ಖರೀದಿ ಮಾಡಿ. ಒಂದು ವೇಳೆ ನೀವು ಆರಂಭಿಕರಾಗಿದ್ದರೆ, ದಯವಿಟ್ಟು ಶೇರಡ್ ಹೋಸ್ಟಿಂಗ್ ನಿಂದ ಶುರು ಮಾಡಿ.
ಹೋಸ್ಟಿಂಗ್ ನಲ್ಲಿರುವ ಸಿ. ಪ್ಯಾನೆಲ್ ( cPanel in Hosting )
ನೀವು ಯಾವುದೇ ಹೋಸ್ಟಿಂಗ್ ಅನ್ನು ಖರೀದಿಸಿದ ಮೇಲೆ ಅಲ್ಲಿ ನಿಮಗೆ cPanel ಅಂತ ಒಂದು ಸಾಫ್ಟವೇರ್ ಕಾಣಿಸುತ್ತದೆ. ಇದರ ಮೂಲಕ ನೀವು ನಿಮ್ಮ ವೆಬ್ ಸೈಟ್ ಅಥವಾ ಬ್ಲಾಗ್ ಗೆ ಸಾಫ್ಟವೇರ್ ಅನ್ನು ಇನ್ ಸ್ಟಾಲ್ ಮಾಡಬೇಕು.
ಸಿ. ಪ್ಯಾನಲ್ ನಲ್ಲಿರುವ ಸಿ.ಎಂ.ಎಸ್ ( CMS in cPanel )
ಸಿ.ಎಂ.ಎಸ್ ಎಂದರೆ ಕಂಟೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಎಂದರ್ಥ. ನೀವು cPanel ನಲ್ಲಿ ಹೋದರೆ, ಅಲ್ಲಿ ನಿಮಗೆ ಹಲವು ರೀತಿಯ CMS ಗಳು ಕಾಣಸಿಗುತ್ತದೆ. ಉದಾಹರಣೆಗೆ,
- WordPress ( ಅತ್ಯಂತ ಜನಪ್ರಿಯ CMS ) Joomla
- Drupal
- WooCommerce
- Magento
- OpenCart
- TYPO3
- PrestaShop ಹಾಗೂ ಇತ್ಯಾದಿ.
ಗೂಗಲ್ ಕಂಪನಿಯು ಸಂಪೂರ್ಣ ಉಚಿತವಾಗಿ ಬ್ಲಾಗರ್ ( Blogger ) ಎನ್ನುವ CMS ಅನ್ನು ನೀಡುತ್ತದೆ.
ಇಲ್ಲಿ ನೀವು ಯಾವುದೇ ಹಣವಿಲ್ಲದೆ ವೆಬ್ ಸೈಟ್ ಅನ್ನು ಹೋಸ್ಟ್ ಮಾಡಬಹುದು. ಮತ್ತಿಲ್ಲಿ ನಿಮಗೆ ಉಚಿತ ಡೊಮೇನ್ ( .blogspot.com ) ಅನ್ನು ನೀಡುತ್ತಾರೆ.
ಎಸ್.ಎಸ್.ಡಿ ಹಾಗೂ ಎಚ್.ಡಿ.ಡಿ. ಡಿಸ್ಕ್ ಸ್ಪೇಸ್ ( SSD and HDD Disk Space )
ಹೋಸ್ಟಿಂಗ್ ನಲ್ಲಿ ಕೊಡುವ Storage ನಲ್ಲಿ ಮುಖ್ಯವಾದ 2 ರೀತಿಯ ವಿಧಗಳಿವೆ.
ಎಸ್.ಎಸ್.ಡಿ ( SSD Disk Space )
ಸೋಲಿಡ್ ಸ್ಟೇಟ್ ಡ್ರೈವ್ ಎನ್ನುವುದು ಇದರ ವಿಸ್ತಾರ ರೂಪ. ಈ ಡಿಸ್ಕ್ ಸ್ಪೇಸ್ ಗಳು ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳಿಂದ ಕೂಡಿರುತ್ತದೆ. ಇವುಗಳು ತುಂಬಾ ಚುರುಕಾಗಿ ಕೆಲಸ ಮಾಡುತ್ತದೆ ಹಾಗೂ ಉತ್ತಮ ಸ್ಪೀಡ್ ಅನ್ನು ಹೊಂದಿರುತ್ತದೆ.
ಎಚ್.ಡಿ.ಡಿ ( HDD Disk Space )
ಹಾರ್ಡ್ ಡಿಸ್ಕ್ ಡ್ರೈವ್ ಎನ್ನುವುದು ಇದರ ವಿಸ್ತಾರ ರೂಪ. ಇವುಗಳಲ್ಲಿ ಯಾವುದೇ ವಿಷಯವನ್ನು ಓದಲು ಅಥವಾ ಬರೆಯಲು ತಿರುಗುವ ಡಿಸ್ಕ್ ಗಳನ್ನು ಉಪಯೋಗಿಸಿರುತ್ತಾರೆ. ಮೇಲಿನ ಎಸ್.ಎಸ್.ಡಿ ಡಿಸ್ಕ್ ಗೆ ಹೋಲಿಸಿದರೆ ಇದರ ಸ್ಪೀಡ್ ತುಂಬಾ ಕಡಿಮೆ.
ನಾವು ಖರೀದಿಸುವ ಕಡಿಮೆ ಬೆಲೆಯ ಹೋಸ್ಟಿಂಗ್ ಗಳಲ್ಲಿ HDD ಡಿಸ್ಕ್ ಸ್ಪೇಸ್ ಅನ್ನು ಬಳಸಿರುತ್ತಾರೆ. ಇವುಗಳು SSD ಗಳಿಗಿಂತ ಹೆಚ್ಚಿನ ಪವರ್ ಅನ್ನು ಬಳಸಿಕೊಳ್ಳುತ್ತವೆ.
ವೆಬ್ ಹೋಸ್ಟಿಂಗ್ ಅನ್ನು ಖರೀದಿ ಮಾಡುವುದು ಹೇಗೆ ( Web Hosting Purchase )
ನೀವು ಗೂಗಲ್ ನಲ್ಲಿ ಹುಡುಕಿದರೆ ಸುಮಾರು ವಿಧ ವಿಧವಾದ ಉಚಿತವಾದ ಹೋಸ್ಟಿಂಗ್ ಗಳು ಸಿಗುತ್ತದೆ. ಆದರೆ ಅವು ಕೆಲಸಕ್ಕೆ ಬಾರದ ಸರ್ವರ್ ಗಳು.
ವೆಬ್ ಸೈಟ್ ಅಥವಾ ಬ್ಲಾಗ್ ಅನ್ನು ಮೊದಲ ಬಾರಿಗೆ ರಚಿಸುವವರು ಆ ತರಹದ ಉಚಿತ ಸರ್ವರ್ ಗಳನ್ನು ಖರೀದಿ ಮಾಡಿ.
ಈ ಕೆಳಗಿನ ಕಂಪನಿಗಳು ಉತ್ತಮ ಹೋಸ್ಟಿಂಗ್ ಗಳನ್ನು ಅತೀ ಕಡಿಮೆ ಬೆಲೆಗೆ ನೀಡುತ್ತಿವೆ.
ಇವುಗಳನ್ನು ಬಿಟ್ಟು ಇನ್ನೂ ಹಲವು ಕಂಪನಿಗಳು ಹೋಸ್ಟಿಂಗ್ ಅನ್ನು ನೀಡುತ್ತದೆ. ಆದರೆ ಅವುಗಳ ಬೆಲೆ ಈ ಮೇಲಿನ ಕಂಪನಿಗಳಿಗಿಂತ ಸ್ವಲ್ಪ ದುಬಾರಿಯಾಗಿವೆ.
Hostinger ನ ಹೋಸ್ಟಿಂಗ್ ನ ಬೆಲೆ ಸಾಮಾನ್ಯವಾಗಿ ₹1800 ( ಪ್ರತೀ ವರ್ಷಕ್ಕೆ ) ದಿಂದ ಪ್ರಾರಂಭವಾಗುತ್ತದೆ. ಉಳಿದ ಕಂಪನಿಯ ಸರ್ವರ್ ಗೆ ಹೋಲಿಸಿದರೆ ಇದರ ಸರ್ವರ್ ಗಳು ತುಂಬಾ ಫಾಸ್ಟ್ ಹಾಗೂ ಪವರ್ ಫುಲ್ ಆಗಿದೆ. ನಿಮಗಿಲ್ಲಿ ಉಚಿತವಾಗಿ ಡೊಮೇನ್ ನೇಮ್ ಮತ್ತು SSL ಸರ್ಟಿಫಿಕೇಟ್ ಅನ್ನು ಸಹ ನೀಡಲಾಗುತ್ತದೆ.
ವೆಬ್ ಹೋಸ್ಟಿಂಗ್ ಖರೀದಿ ಮಾಡುವಾಗ ನೆನಪಿಡಬೇಕಾದ ಅಂಶಗಳು
- ಮೊದಲು ಹೋಸ್ಟಿಂಗ್ ನಲ್ಲಿ ನೀಡಲಾಗುವ Disk Space ಅನ್ನು ನೋಡಿಕೊಳ್ಳಿ. ಕಡಿಮೆ ಎಂದರೂ 10GB ಯಾದರೂ ಇರಬೇಕು.
- ಹೋಸ್ಟಿಂಗ್ ನಲ್ಲಿ ನೀಡಲಾಗುವ RAM ಸಹ 1GB ಗಿಂತ ಕಡಿಮೆ ಇರಬಾರದು.
- ನಿಮ್ಮ ಸರ್ವರ್ ನಲ್ಲಿ ನೀಡಲಾಗುವ Bandwidth ಸಹ ತುಂಬಾ ಮುಖ್ಯ.
- ಅದರ cPanel ತುಂಬಾ ಸುಲಭವಾಗಿ ಬಳಕೆ ಮಾಡುವಂತಿರಬೇಕು.
- ನೀವು ಖರೀದಿ ಮಾಡುವ ಹೋಸ್ಟಿಂಗ್ ಕಂಪನಿಯ ಬಗ್ಗೆ YouTube ನಲ್ಲಿ Review ಗಳನ್ನು ನೋಡಿ.
ಇದಿಷ್ಟು Web Hosting ನ ಬಗ್ಗೆ ನಾವು Kannada ದಲ್ಲಿ ನೀಡಿರುವ ಒಂದು ಸಣ್ಣ ಮಾಹಿತಿ. ಯಾವುದೇ ರೀತಿಯ ಪ್ರಶ್ನೆಗಳಿದ್ದರೆ, ಕಮೆಂಟ್ ಸೆಕ್ಷನ್ ನಲ್ಲಿ ಕಮೆಂಟ್ ಮಾಡಿ.
Thank you for this article in kannada 🙂🙏
Thank You 😊
Exactly what I was searching for, regards for posting.
Really great info can be found on web site.
You should participate in a contest for one of the best blogs on the web. I’ll suggest this site!
Thank you sir 🙂